ಶೇ.50 ರಷ್ಟು ಸುಂಕ ಹೇರಿಕೆ ; ಇರಾನಿಗೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದ ನಡುವೆ ಎರಡು ವಾರಗಳ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಪರ ನಿಲ್ಲುವ ರಾಷ್ಟ್ರಗಳಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇರಾನ್‌ಗೆ ಮಿಲಿಟರಿ ಉಪಕರಣಗಳನ್ನು ಪೂರೈಸುವ ಯಾವುದೇ ದೇಶವು ಅಮೆರಿಕಕ್ಕೆ ರಫ್ತು ಮಾಡುವ ಎಲ್ಲಾ ಸರಕುಗಳ ಮೇಲೆ ಶೇ. 50 ರಷ್ಟು ಸುಂಕವನ್ನು (Tariff) … Continued

ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್ ; ಜಾಗತಿಕ ಸುಂಕ ಶೇ. 15ಕ್ಕೆ ಹೆಚ್ಚಿಸಿ ಆದೇಶ…!

ವಾಷಿಂಗ್ಟನ್: ಅಮೆರಿಕದ ಸುಪ್ರೀಂ ಕೋರ್ಟ್‌ನಿಂದ ಭಾರಿ ಹಿನ್ನಡೆ ಅನುಭವಿಸಿದ ಮರುದಿನವೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ನಿರ್ಧಾರ ಕೈಗೊಂಡಿದ್ದಾರೆ. ಶನಿವಾರದಂದು ಅವರು ಜಾಗತಿಕ ಆಮದು ಸುಂಕವನ್ನು (Tariffs) ಶೇ. 10ರಿಂದ ಶೇ. 15ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಾದ ‘ಟ್ರೂತ್ ಸೋಶಿಯಲ್’ನಲ್ಲಿ ಈ ಕುರಿತು ಬರೆದುಕೊಂಡಿರುವ ಟ್ರಂಪ್, “ನಿನ್ನೆಯಷ್ಟೇ ಸುಪ್ರೀಂ ಕೋರ್ಟ್ ಸುಂಕಗಳ … Continued

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ : ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕಿಂತ ಭಾರತಕ್ಕೆ ಹೇಗೆ ಅನುಕೂಲ..?

ನವದೆಹಲಿ: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದಾರೆ. ಇದರ ಅಡಿಯಲ್ಲಿ ಅಮೆರಿಕವು ಭಾರತೀಯ ಸರಕುಗಳ ಮೇಲಿನ ಪರಸ್ಪರ ಸುಂಕವನ್ನು ಪ್ರಸ್ತುತ ಶೇಕಡಾ 25 ರಿಂದ ಶೇಕಡಾ 18 ಕ್ಕೆ ಇಳಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ದೂರವಾಣಿ ಕರೆಯ ನಂತರ ಅಮೆರಿಕದ ಅಧ್ಯಕ್ಷರು ಸಾಮಾಜಿಕ … Continued

ಅಕ್ಟೋಬರ್ 1 ರಿಂದ ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್ ; ಭಾರತದ ಮೇಲೆ ಇದರ ಪರಿಣಾಮ ಏನು..?

ವಾಷಿಂಗ್ಟನ್: ಅಕ್ಟೋಬರ್ 1, 2025 ರಿಂದ ಬ್ರ್ಯಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇಕಡಾ 100 ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪ್ರಕಟಿಸಿದ್ದಾರೆ. ಅಮೆರಿಕದ ಜೊತೆಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ಭಾರತದ ಔಷಧ ವಲಯದ ಮೇಲೆ ಈ ಕ್ರಮವು ಗಮನಾರ್ಹವಾಗಿ ಪರಿಣಾಮ ಬೀರಬಹುದು ಎಂದು ಊಹಿಸಲಾಗಿದೆ. … Continued

ಭಾರತದ ಸರಕುಗಳ ಮೇಲೆ ಮೇಲೆ ಶೇ.50 ರಷ್ಟು ಸುಂಕ ನಾಳೆಯಿಂದ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ನವದೆಹಲಿ: ಭೌಗೋಳಿಕ ರಾಜಕೀಯ ಒತ್ತಡಗಳ ನೆರಳಿನಲ್ಲಿ ಭಾರತದ ಸರಕುಗಳ ಮೇಲೆ ಸುಂಕವನ್ನು ಹೆಚ್ಚಿಸಲು ಅಮೆರಿಕದ ಡೊನಾಲ್ಡ್ ಟ್ರಂಪ್ ಆಡಳಿತ ನಿರ್ಧರಿಸಿದ ನಂತರ, ಆಗಸ್ಟ್‌ 27ರಿಂದ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇಕಡಾ 50ರಷ್ಟು ಸುಂಕವನ್ನು ಜಾರಿಗೆ ತರಲು ಅಮೆರಿಕ ಕಸ್ಟಮ್ಸ್ ಮತ್ತು ಗಡಿ ರಕ್ಷಣೆ (CBP) ಕರಡು ಸೂಚನೆ ಹೊರಡಿಸಿದೆ. ಭಾರತದಿಂದ ಆಮದು ಮಾಡಿಕೊಳ್ಳುವ … Continued

ಭಾರತದ ಆಮದುಗಳ ಮೇಲೆ ಟ್ರಂಪ್‌ ಸುಂಕ; ಅಮೆರಿಕಕ್ಕೆ ಅಂಚೆ ಇಲಾಖೆಯ ಪಾರ್ಸೆಲ್‌ ಸೇವೆ ಆಗಸ್ಟ್ 25 ರಿಂದ ಸ್ಥಗಿತ

ನವದೆಹಲಿ: ಅಮೆರಿಕದ ಇತ್ತೀಚಿನ ಸುಂಕದ ಕ್ರಮಗಳ ನಂತರ, ಅಂಚೆ ಇಲಾಖೆಯು ಅಮೆರಿಕಕ್ಕೆ ಅಂಚೆ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿ ಸುವುದಾಗಿ ಪ್ರಕಟಿಸಿದೆ. ಆಗಸ್ಟ್ 25 ರಿಂದ ಜಾರಿಗೆ ಬರುವ ಎಲ್ಲಾ ಅಮೆರಿಕಕ್ಕೆ ಹೋಗುವ ಅಂಚೆ ವಸ್ತುಗಳ ಬುಕಿಂಗ್ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ. ಜುಲೈ 30 ರಂದು, ಅಮೆರಿಕ ಅಧ್ಯಕ್ಷ ಟ್ರಂಪ್ ಸುಂಕ ಹೆಚ್ಚಳದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ … Continued

ಅಮೆರಿಕ ಅಧ್ಯಕ್ಷ ಟ್ರಂಪ್ ʼದಂಡʼದ ಬೆದರಿಕೆ ಮಧ್ಯೆಯೂ ಭಾರತದಿಂದ ರಷ್ಯಾದ ತೈಲ ಖರೀದಿ ಮುಂದುವರಿಕೆ : ವರದಿ

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದಂಡ ಹಾಕುವ ಬೆದರಿಕೆಗಳ ಹೊರತಾಗಿಯೂ ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸುತ್ತದೆ ಎಂದು ಭಾರತದ ಎರಡು ಸರ್ಕಾರಿ ಮೂಲಗಳು ಶನಿವಾರ ರಾಯಿಟರ್ಸ್‌ಗೆ ತಿಳಿಸಿವೆ. ಟ್ರಂಪ್ ಕಳೆದ ತಿಂಗಳು ಟ್ರುತ್ ಸೋಶಿಯಲ್ ಪೋಸ್ಟ್‌ನಲ್ಲಿ, ಭಾರತದಿಂದ ಅಮೆರಿಕಕ್ಕೆ ಮಾಡುವ ರಫ್ತಿನ ಮೇಲೆ ಹೊಸ 25% ಸುಂಕವನ್ನು ವಿಧಿಸುವುದರ ಜೊತೆಗೆ, ರಷ್ಯಾದ … Continued