ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ದಾಳಿ : ಕಾರವಾರದ ನಾವಿಕನಿಗೆ ಗಾಯ ; ವರದಿ

ನವದೆಹಲಿ: ಒಮಾನ್ ಕರಾವಳಿಯ ಸಮೀಪ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಪನಾಮ ಧ್ವಜ ಹೊಂದಿದ್ದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ಮಾದರಿಯ ವಸ್ತುವೊಂದು ಅಪ್ಪಳಿಸಿದ ಪರಿಣಾಮ 11 ಭಾರತೀಯರು ಸೇರಿದಂತೆ 12 ಮಂದಿ ನಾವಿಕರು ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ 11 ಮಂದಿ ಭಾರತೀಯ ನಾವಿಕರಲ್ಲಿ ಕಾರವಾರದ ನಾವಿಕರೊಬ್ಬರು ಸೇರಿದ್ದಾರೆ ಎಂದು ವರದಿಯಾಗಿದೆ. ವಾಣಿಜ್ಯ ಹಡಗುಗಳ ಮೇಲಿನ ದಾಳಿಯನ್ನು … Continued

ಹಾರ್ಮುಜ್‌ನಲ್ಲಿ ಅಮೆರಿಕದ ಮಾನವರಹಿತ ಜಲಾಂತರ್ಗಾಮಿ ವಶಕ್ಕೆ ಪಡೆದ ಇರಾನ್‌; ಅದು ಹಾಳಾಗಿತ್ತು ಎಂದ ಅಮೆರಿಕ

ತೆಹ್ರಾನ್: ಹಾರ್ಮುಜ್ ಜಲಸಂಧಿಯ ಪ್ರವೇಶದ್ವಾರದ ಬಳಿ ಅಮೆರಿಕ ಸೇನೆಯ ಅತ್ಯಾಧುನಿಕ ಹಾಗೂ ‘ಸ್ಮಾರ್ಟ್‌’ ಮಾನವರಹಿತ ಜಲಾಂತರ್ಗಾಮಿ ವಾಹನವನ್ನು ವಶಕ್ಕೆ ಪಡೆದಿರುವುದಾಗಿ ಇರಾನ್‌ನ ನೌಕಾಪಡೆ ಹೇಳಿಕೊಂಡಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಅಧಿಕೃತ ಸುದ್ದಿವಾಹಿನಿ ಸೆಪಾಹ್ ನ್ಯೂಸ್ ಪ್ರಕಟಿಸಿರುವ ಹೇಳಿಕೆಯ ಪ್ರಕಾರ, ಸಂಕೀರ್ಣ ಗುಪ್ತಚರ ಕಾರ್ಯಾಚರಣೆ ನಡೆಸಿ ಈ ಮಾನವರಹಿತ ನೀರೊಳಗಿನ ಮಾನವರಹಿತ ಜಲಾಂತರ್ಗಾಮಿಯನ್ನು ವಶಕ್ಕೆ … Continued

ಹಾರ್ಮುಜ್ ಜಲಸಂಧಿ ‘ಅಮೆರಿಕದ ಹೊಸ ಭೂಪ್ರದೇಶ’ ಎಂದು ಘೋಷಿಸಿ ನಕ್ಷೆ ಹಂಚಿಕೊಂಡ ಟ್ರಂಪ್‌

ವಾಷಿಂಗ್ಟನ್: ಇರಾನ್‌ ಜೊತೆಗೆ ಉದ್ವಿಗ್ನತೆ ಮುಂದುವರಿದಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ (ಆಗಸ್ಟ್ 18) ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ನಕ್ಷೆಯೊಂದನ್ನು ಹಂಚಿಕೊಂಡಿದ್ದಾರೆ. ಆ ನಕ್ಷೆಯಲ್ಲಿ ಹಾರ್ಮುಜ್ ಜಲಸಂಧಿಯನ್ನು ‘ಅಮೆರಿಕದ ಹೊಸ ಭೂಪ್ರದೇಶ’ (New US Territory) ಎಂದು ಗುರುತಿಸಲಾಗಿದೆ. ಟ್ರಂಪ್ ಅವರು ತಮ್ಮ ‘ಟ್ರೂತ್ ಸೋಷಿಯಲ್’ ಖಾತೆಯಲ್ಲಿ ನಕ್ಷೆಯನ್ನು ಹಂಚಿಕೊಂಡಿದ್ದು, ಆದರೆ ಯಾವುದೇ … Continued

ಹಾರ್ಮುಜ್ ಜಲಸಂಧಿಯಲ್ಲಿ 20ಕ್ಕೂ ಹೆಚ್ಚು ಯುದ್ಧನೌಕೆ ನಿಯೋಜಿಸಿದ ಅಮೆರಿಕ ; ಇರಾನ್‌ ವಿರುದ್ಧ ನೌಕಾ ದಿಗ್ಬಂಧನ ಮತ್ತಷ್ಟು ಬಿಗಿ

ವಾಷಿಂಗ್ಟನ್: ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನವನ್ನು ಮತ್ತಷ್ಟು ಬಿಗಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಮೆರಿಕವು ಮಧ್ಯಪ್ರಾಚ್ಯಕ್ಕೆ 20ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತಿಳಿಸಿದೆ. ಈ ಬೆಳವಣಿಗೆಯಿಂದ ಹಾರ್ಮುಜ್ ಜಲಸಂಧಿಯ ಸುತ್ತಮುತ್ತಲಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಅಮೆರಿಕದ ನೌಕಾಪಡೆಯ ವಿನಾಶಕಾರಿ ಯುದ್ಧನೌಕೆ ʼಯುಎಸ್‌ಎಸ್ ರಾಸ್ (USS Ross)ʼನಲ್ಲಿರುವ ನಾವಿಕರೂ ಈ … Continued

ಬಾಸ್ಫರಸ್, ಹಾರ್ಮುಜ್‌ಗೆ ಪರ್ಯಾಯ ಮಾರ್ಗ ; ಮಾಸ್ಕೋದಿಂದ ಭಾರತಕ್ಕೆ ನೇರ ರೈಲು ಸಂಪರ್ಕಕ್ಕೆ ರಷ್ಯಾ ಚಿಂತನೆ

ಮಾಸ್ಕೋ: ಬಾಸ್ಫರಸ್ ಜಲಸಂಧಿ ಹಾಗೂ ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಸರಕು ಸಾಗಣೆಯಲ್ಲಿ ಎದುರಾಗಬಹುದಾದ ಅಪಾಯಗಳನ್ನು ಕಡಿಮೆ ಮಾಡುವ ಉದ್ದೇಶದಿಂದ, ಹಿಂದೂ ಮಹಾಸಾಗರದವರೆಗೆ ನೇರ ರೈಲು ಸಂಪರ್ಕ ಕಲ್ಪಿಸುವ ಸಾಧ್ಯತೆಯನ್ನು ರಷ್ಯಾ ಪರಿಶೀಲಿಸಬೇಕು ಎಂದು ರಷ್ಯಾದ ಉಪ ಪ್ರಧಾನಿ ಮರಾತ್ ಖುಸ್ನುಲ್ಲಿನ್ ಹೇಳಿದ್ದಾರೆ. ಸುದ್ದಿ ಸಂಸ್ಥೆ ಟಾಸ್ (TASS)ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು … Continued

ಹಾರ್ಮುಜ್ ಜಲಸಂಧಿ ಈಗ ಅಮೆರಿಕ ನಿಯಂತ್ರಣದಲ್ಲಿ : ಭದ್ರತೆಗಾಗಿ ವಾಣಿಜ್ಯ ಹಡಗುಗಳಿಂದ 20% ಶುಲ್ಕ ವಸೂಲಿ; ಟ್ರಂಪ್‌ ಘೋಷಣೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಮಹತ್ವದ ಘೋಷಣೆ ಮಾಡಿದ್ದು, ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಎಲ್ಲ ಸರಕು ಸಾಗಣೆಯ ಮೇಲೆ ಅಮೆರಿಕವು ಇನ್ನು ಮುಂದೆ 20 ಪ್ರತಿಶತ ಶುಲ್ಕ ವಿಧಿಸಲಿದೆ ಎಂದು ಪ್ರಕಟಿಸಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಷಿಯಲ್ (Truth Social) ನಲ್ಲಿ ಈ ಕುರಿತು ಪ್ರಕಟಣೆ … Continued

ಹಾರ್ಮುಜ್ ಜಲಸಂಧಿ ಮತ್ತೆ ಬಂದ್ : ವಾಣಿಜ್ಯ ಹಡಗಿನ ಮೇಲೆ ಇರಾನ್ ದಾಳಿ, ಅಮೆರಿಕದಿಂದ ಇರಾನ್‌ ಮೇಲೆ ಭಾರಿ ವಾಯುದಾಳಿ

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯನ್ನು (Strait of Hormuz) “ಮುಂದಿನ ಆದೇಶದವರೆಗೆ” ಮುಚ್ಚುವುದಾಗಿ ಇರಾನ್ ಘೋಷಿಸಿದ ಬೆನ್ನಲ್ಲೇ, ಹಾಗೂ ಆ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಸೈಪ್ರಸ್ ಧ್ವಜದ ಎಂ/ವಿ ಜಿಎಫ್‌ಎಸ್ ಗ್ಯಾಲಕ್ಸಿ (M/V GFS Galaxy) ಕಂಟೇನರ್ ಹಡಗಿನ ಮೇಲೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಪಡೆಗಳು ದಾಳಿ ನಡೆಸಿದ ನಂತರ, ಅಮೆರಿಕ ಇರಾನ್ ವಿರುದ್ಧ … Continued

ಇರಾನ್‌ ಜೊತೆಗಿನ ಒಪ್ಪಂದ ಮುಗಿದ ಅಧ್ಯಾಯ ಎಂದು ಟ್ರಂಪ್‌ ಘೋಷಣೆ ; ಕಚ್ಚಾ ತೈಲ ಬೆಲೆ ದಿಢೀರ್‌ ಏರಿಕೆ

ಅಂಕಾರಾ (ಟರ್ಕಿ): ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರಗೊಂಡಿದ್ದು, ಪರಸ್ಪರ ದಾಳಿಗಳ ಬಳಿಕ ಇರಾನ್‌ ಜೊತೆಗಿನ ಮಧ್ಯಂತರ ಕದನ ವಿರಾಮ (Ceasefire) ‘ಅಂತ್ಯಗೊಂಡಿದೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಜುಲೈ 8) ಘೋಷಿಸಿದ್ದಾರೆ. ಇರಾನ್‌ನ ನಾಯಕತ್ವವನ್ನು “ಅನಾರೋಗ್ಯಪೀಡಿತರು” ಎಂದು ಟೀಕಿಸಿದ ಅವರು, “ಅವರ ಜೊತೆ ಮಾತುಕತೆ ನಡೆಸುವುದೇ ಸಮಯ ವ್ಯರ್ಥ” … Continued

24 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ಮೂರನೇ ಹಡಗಿನ ಮೇಲೆ ದಾಳಿ

#Karnataka  #Rain  #HeavyRain  #Weather 24 ಗಂಟೆಗಳಲ್ಲಿ ಮೂರನೇ ಟ್ಯಾಂಕರ್ ಮೇಲೂ ದಾಳಿ: ಹೋರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರ ಲಂಡನ್/ದೋಹಾ: ಕಳೆದ 24 ಗಂಟೆಗಳ ಅವಧಿಯಲ್ಲಿ ಹೋರ್ಮುಜ್ ಜಲಸಂಧಿಯಲ್ಲಿ ಮೂರನೇ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ/ಡ್ರೋನ್ ದಾಳಿ ನಡೆದಿದ್ದು, ಈ ಕುರಿತು ಬ್ರಿಟನ್‌ನ ಸಮುದ್ರ ವ್ಯಾಪಾರ ಕಾರ್ಯಾಚರಣೆಗಳ ಸಂಸ್ಥೆ (UKMTO) ಮಂಗಳವಾರ ಮಾಹಿತಿ ನೀಡಿದೆ. … Continued

ಕೇಂದ್ರದಿಂದ ಗುಡ್‌ನ್ಯೂಸ್ ; ವಾಣಿಜ್ಯ ಬಳಕೆ ಎಲ್‌ಪಿಜಿ ಮೇಲಿನ ನಿರ್ಬಂಧ ತೆಗೆದುಹಾಕಿದ ಸರ್ಕಾರ ; ಪೂರೈಕೆ ಸಹಜ ಸ್ಥಿತಿಗೆ

ನವದೆಹಲಿ: ಇರಾನ್‌-ಅಮೆರಿಕ ಸಂಘರ್ಷದ ಕಾರಣ ತಲೆದೋರಿದ್ದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ (ಅಡುಗೆ ಅನಿಲ) ಮೇಲೆ ಹೇರಲಾಗಿದ್ದ ಎಲ್ಲಾ ನಿರ್ಬಂಧಗಳನ್ನು ಕೇಂದ್ರ ಸರ್ಕಾರವು ಗುರುವಾರ ತೆಗೆದುಹಾಕಿದೆ. ದೇಶೀಯ ಉತ್ಪಾದನೆಯಲ್ಲಿನ ಸುಧಾರಣೆ ಹಾಗೂ ಆಮದು ಮಾಡಿಕೊಳ್ಳಲಾದ ಎಲ್‌ಪಿಜಿ ಹೊತ್ತ ಹಡಗುಗಳು ಶೀಘ್ರದಲ್ಲೇ ಭಾರತಕ್ಕೆ ತಲುಪಲಿರುವ ಹಿನ್ನೆಲೆಯಲ್ಲಿ, ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಇರಾನ್‌ ಯುದ್ಧದ ಮೊದಲಿಗೆ ಇದ್ದ … Continued