ಇರಾನ್-ಅಮೆರಿಕ ಒಪ್ಪಂದದ ನಂತ್ರ ಹಾರ್ಮುಜ್ ಜಲಸಂಧಿ ದಾಟಿದ ಭಾರತಕ್ಕೆ ಬರುವ 11 ಹಡಗುಗಳು ; ಇನ್ನೂ 10 ಹಡಗುಗಳು ಬಾಕಿ

ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವೆ ಜೂನ್ 17 ರಂದು ಸಹಿಯಾದ ಶಾಂತಿ ಒಪ್ಪಂದದ (MoU) ಬೆನ್ನಲ್ಲೇ, ಆಯಕಟ್ಟಿನ ಜಾಗತಿಕ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ಹಡಗುಗಳ ಸಂಚಾರವು ಮತ್ತೆ ಚೇತರಿಸಿಕೊಳ್ಳಲು ಆರಂಭಿಸಿದೆ. ಈ ಒಪ್ಪಂದದ ನಂತರ ಭಾರತಕ್ಕೆ ಬರಬೇಕಿದ್ದ 11 ಸರಕು ಸಾಗಣೆ ಹಡಗುಗಳು ಸುರಕ್ಷಿತವಾಗಿ ಈ ಜಲಮಾರ್ಗವನ್ನು ದಾಟಿವೆ. … Continued

ಲೆಬನಾನ್ ಮೇಲೆ ಇಸ್ರೇಲ್ ದಾಳಿ: ಮತ್ತೆ ಹಾರ್ಮುಜ್ ಜಲಸಂಧಿ ಮುಚ್ಚಿದ ಇರಾನ್

ತೆಹ್ರಾನ್‌ : ಇರಾನ್ ಮತ್ತು ಅಮೆರಿಕ ನಡುವೆ ಎರಡು ದಿನಗಳ ಹಿಂದಷ್ಟೇ ಆಗಿದ್ದ ಮಧ್ಯಂತರ ಒಪ್ಪಂದಕ್ಕೆ ಭಾರಿ ಹಿನ್ನಡೆಯಾಗಿದ್ದು, ಇರಾನ್ ಶನಿವಾರ ಮಹತ್ವದ ಜಲಮಾರ್ಗವಾದ ಹಾರ್ಮುಜ್ ಜಲಸಂಧಿ (Strait of Hormuz) ಸಮುದ್ರ ಮಾರ್ಗವನ್ನು ಮತ್ತೆ ಮುಚ್ಚಿರುವುದಾಗಿ ಪ್ರಕಟಿಸಿದೆ. ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಮತ್ತು ಅಮೆರಿಕ ತನ್ನ ಭರವಸೆಗಳನ್ನು ಈಡೇರಿಸುವಲ್ಲಿ ತೋರಿರುವ “ನಂಬಿಕೆ ದ್ರೋಹ”ವೇ … Continued

ಇರಾನ್‌-ಅಮೆರಿಕ ಶಾಂತಿ ಒಪ್ಪಂದಕ್ಕೆ ಪೆಜೆಶ್ಕಿಯಾನ್-ಟ್ರಂಪ್ ಸಹಿ ; ತಕ್ಷಣದಿಂದ ಹಾರ್ಮುಜ್ ಜಲಸಂಧಿ ಓಪನ್‌ ; 14 ಅಂಶಗಳ ಒಪ್ಪಂದದಲ್ಲಿ ಏನಿದೆ?

ವಾಷಿಂಗ್ಟನ್/ ತೆಹ್ರಾನ್‌ : ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಾವಧಿಯ ಸಂಘರ್ಷಕ್ಕೆ ಕೊನೆಗೂ ತಾತ್ಕಾಲಿಕ ತೆರೆ ಬಿದ್ದಿದೆ. ವಾರಗಳ ಕಾಲ ನಡೆದ ರಾಜತಾಂತ್ರಿಕ ಚರ್ಚೆಗಳ ನಂತರ, ಎರಡೂ ದೇಶಗಳು ಐತಿಹಾಸಿಕ ಶಾಂತಿ ಒಪ್ಪಂದದ ಜ್ಞಾಪಕ ಪತ್ರಕ್ಕೆ (Peace Memorandum) ಅಧಿಕೃತವಾಗಿ ಸಹಿ ಹಾಕಿವೆ. ಫ್ರಾನ್ಸ್‌ನಲ್ಲಿ ನಡೆದ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ … Continued

ಹಾರ್ಮುಜ್ ಜಲಸಂಧಿ ಸಂಘರ್ಷ : ಭಾರತದ ಪ್ರತಿಭಟನೆಗೆ ದಿಗ್ಬಂಧನ ಉಲ್ಲಂಘಿಸಿದರೆ ಸಹಿಸುವುದಿಲ್ಲ ಎಂದ ಅಮೆರಿಕ

ನವದೆಹಲಿ : ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಶನಿವಾರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಅವರ ಜೊತೆ ಮಾತುಕತೆ ನಡೆಸಿದ್ದು, ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯಲ್ಲಿನ ದಿಗ್ಬಂಧನವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸುವುದನ್ನು ಅಮೆರಿಕ ಸಹಿಸುವುದಿಲ್ಲ ಎಂದು ತಿಳಿಸಿದ್ದಾರೆ. ಒಮಾನ್‌ ಕರಾವಳಿಯಲ್ಲಿ ಇತ್ತೀಚೆಗೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಸಾವಿಗೀಡಾಗಿದ್ದಕ್ಕೆ … Continued

ಒಮಾನ್ ಕರಾವಳಿಯಲ್ಲಿ ಹಡಗಿನ ಮೇಲೆ ಅಮೆರಿಕ ಪಡೆಗಳ ದಾಳಿ: ನಾಪತ್ತೆಯಾಗಿದ್ದ ಮೂವರು ಭಾರತೀಯ ನಾವಿಕರು ಸಾವು

ನವದೆಹಲಿ: ಒಮಾನ್ ಕರಾವಳಿಯ ಬಳಿ ಅಮೆರಿಕ ಸೇನಾ ಪಡೆಗಳು ನಡೆಸಿದ ಭೀಕರ ದಾಳಿಗೆ ತುತ್ತಾಗಿದ್ದ ‘ಎಂಟಿ ಸೆಟ್ಟೆಬೆಲ್ಲೊ’ (MT Settebello) ತೈಲ ಟ್ಯಾಂಕರ್‌ನಲ್ಲಿದ್ದ, ಆರಂಭದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಈ ವಿಷಯವನ್ನು ಕೇಂದ್ರ ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೋವಾಲ್ ಅವರು ಅಧಿಕೃತವಾಗಿ ದೃಢಪಡಿಸಿದ್ದು, ಮೃತಪಟ್ಟ ಮೂವರು … Continued

ಒಮಾನ್ ಕರಾವಳಿಯಲ್ಲಿ ಮತ್ತೊಂದು ಹಡಗಿನ ಮೇಲೆ ಅಮೆರಿಕ ಸೇನೆ ದಾಳಿ: 3 ಭಾರತೀಯರು ನಾಪತ್ತೆ ; ಅಮೆರಿಕ ರಾಯಭಾರಿಗೆ ಭಾರತ ಸಮನ್ಸ್; ತೀವ್ರ

ಮಸ್ಕತ್/ನವದೆಹಲಿ: ಒಮಾನ್ ಕರಾವಳಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಮತ್ತೊಂದು ವಾಣಿಜ್ಯ ನೌಕೆಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ. ಈ ಘಟನೆ ಈಗ ಭಾರತ ಮತ್ತು ಅಮೆರಿಕ ನಡುವೆ ರಾಜತಾಂತ್ರಿಕ ಸಂಘರ್ಷಕ್ಕೆ ಕಾರಣವಾಗಿದೆ. ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ಅಮೆರಿಕದ ಹಿರಿಯ ರಾಜತಾಂತ್ರಿಕನಿಗೆ ಸಮನ್ಸ್ ಜಾರಿ ಮಾಡಿ ಭಾರಿ ಪ್ರತಿಭಟನೆ ದಾಖಲಿಸಿದೆ. ಬುಧವಾರ ಒಮಾನ್ ಕರಾವಳಿಯಲ್ಲಿ … Continued

ಹಾರ್ಮುಜ್‌ನಲ್ಲಿ ಅಮೆರಿಕ ಪೈಲಟ್‌ಗಳ ಜೀವ ಉಳಿಸಿದ ಡ್ರೋನ್ ಬೋಟ್ ; ಇದರ ಹಿಂದಿನ ಮಾಸ್ಟರ್‌ಮೈಂಡ್ ಭಾರತದ ಮೂಲದ ʼವಿಭವʼ ಯಾರು ?

ವಾಷಿಂಗ್ಟನ್: ಹಾರ್ಮುಜ್ ಜಲಸಂಧಿಯ ಬಳಿ ಇರಾನ್ ಪಡೆಗಳಿಂದ ಹೊಡೆದುರುಳಿಸಲ್ಪಟ್ಟ ಅಮೆರಿಕದ ಅಪಾಚೆ ಹೆಲಿಕಾಪ್ಟರ್‌ನ ಪೈಲಟ್ ಮತ್ತು ಸಹ-ಪೈಲಟ್‌ರನ್ನು ರಕ್ಷಿಸುವಲ್ಲಿ ಅಮೆರಿಕ ನೌಕಾಪಡೆಯ ಡ್ರೋನ್ ಬೋಟ್ (ಮಾನವರಹಿತ ದೋಣಿ) ಯಶಸ್ವಿಯಾಗಿದೆ. ಅತ್ಯಂತ ಸಾಹಸಮಯವಾಗಿದ್ದ ಈ ರಕ್ಷಣಾ ಕಾರ್ಯಾಚರಣೆಗೆ ಬಳಕೆಯಾದ ಸ್ವಯಂಚಾಲಿತ ಮಾನವ ರಹಿತ ದೋಣಿಯನ್ನು, ಭಾರತೀಯ ಮೂಲದ ವಿಭವ್ ಅಲ್ತೇಕರ್ ಸಹ-ಸ್ಥಾಪಕರಾಗಿರುವ ಟೆಕ್ಸಾಸ್ ಮೂಲದ ಕಂಪನಿಯೊಂದು ಅಭಿವೃದ್ಧಿಪಡಿಸಿದೆ. … Continued

‘ಹಾರ್ಮುಜ್ ಜಲಸಂಧಿ’ ಬಿಕ್ಕಟ್ಟು : ಭಾರತ-ಒಮಾನ್ ಒಪ್ಪಂದದಿಂದ ಕೊಲ್ಲಿ ರಾಷ್ಟ್ರಗಳ ತೈಲ ಸಾಗಾಟಕ್ಕೆ ಭಾರತಕ್ಕೆ ಸಿಕ್ಕಿತು ಹೊಸ ದಾರಿ

 ನವದೆಹಲಿ: ಭಾರತದ ಶ್ರಮ-ಆಧಾರಿತ (ಲಾಭರ್-ಇಂಟೆನ್ಸಿವ್) ರಫ್ತು ಉತ್ಪನ್ನಗಳಿಗೆ ಶೂನ್ಯ-ಸುಂಕದ ಮುಕ್ತ ಪ್ರವೇಶವನ್ನು ಕಲ್ಪಿಸುವ ಭಾರತ ಮತ್ತು ಒಮಾನ್ ನಡುವಿನ ಐತಿಹಾಸಿಕ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA) ಸೋಮವಾರದಿಂದ (ಜೂನ್‌ ೧) ಜಾರಿಗೆ ಬಂದಿದೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಸ್ಕತ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಮಹತ್ವದ ವ್ಯಾಪಾರ ಒಪ್ಪಂದಕ್ಕೆ … Continued

ಜಾಗತಿಕ ತೈಲ ಬಿಕ್ಕಟ್ಟಿಗೆ ಮುಕ್ತಿ ? ಶಾಂತಿ ಒಪ್ಪಂದವಾದ 30 ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಹಡುಗು ಸಂಚಾರಕ್ಕೆ ಮುಕ್ತ ಎಂದ ಇರಾನ್ !

ವಾಷಿಂಗ್ಟನ್/ತೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಮತ್ತು ಇರಾನ್ ಐತಿಹಾಸಿಕ ಒಪ್ಪಂದವೊಂದಕ್ಕೆ ಅತ್ಯಂತ ಹತ್ತಿರವಾಗಿದ್ದು, ಜಾಗತಿಕ ಮಟ್ಟದಲ್ಲಿ ಶಾಂತಿಯ ಭರವಸೆ ಮೂಡಿದೆ. ಈ ಮಹತ್ವದ ಒಪ್ಪಂದ ಜಾರಿಯಾದ 30 ದಿನಗಳ ಒಳಗಾಗಿ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ (Strait of Hormuz) ವಾಣಿಜ್ಯ ಹಡಗುಗಳ ಸಂಚಾರವು … Continued

ಹಾರ್ಮುಜ್ ಜಲಸಂಧಿ ನಿಯಂತ್ರಣಕ್ಕೆ ಇರಾನ್‌ನಿಂದ ಹೊಸ ಪ್ರಾಧಿಕಾರ ರಚನೆ

ತೆಹ್ರಾನ್: ಅಮೆರಿಕ ಜೊತೆಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಜಾಗತಿಕವಾಗಿ ಅತ್ಯಂತ ಪ್ರಮುಖ ಎನಿಸಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಸಂಪೂರ್ಣವಾಗಿ ಬಂದ್ ಮಾಡಿದೆ. ಇದರ ಬೆನ್ನಲ್ಲೇ ಜಲಸಂಧಿಯ ಉಸ್ತುವಾರಿಗಾಗಿ ಇರಾನ್‌ನ ಉನ್ನತ ಭದ್ರತಾ ಮಂಡಳಿಯು ಹೊಸ ಅಧಿಕೃತ ಸಂಸ್ಥೆಯೊಂದನ್ನು ರಚಿಸಿರುವುದಾಗಿ ಪ್ರಕಟಿಸಿದೆ. ಅಷ್ಟೇ ಅಲ್ಲದೆ, ಈ ಜಲಸಂಧಿಯ ಮೂಲಕ ಹಾದುಹೋಗುವ ಹಡಗುಗಳು ಇನ್ನು ಮುಂದೆ ಕಡ್ಡಾಯವಾಗಿ ಟೋಲ್ (ಸುಂಕ) … Continued