ಅಮೆರಿಕದ ದಿಗ್ಬಂಧನ ಅಸ್ತ್ರ: ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡ ಭಾರತದ 15 ಹಡಗುಗಳು

ದುಬೈ/ನವದೆಹಲಿ: ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಮಾತುಕತೆಗಳು ವಿಫಲವಾದ ಬೆನ್ನಲ್ಲೇ, ಅಮೆರಿಕವು ಇರಾನ್ ಬಂದರುಗಳ ಮೇಲೆ ದಿಗ್ಬಂಧನ ವಿಧಿಸಿದೆ. ಈ ಹಠಾತ್ ಬೆಳವಣಿಗೆಯಿಂದಾಗಿ ಭಾರತದ ಧ್ವಜವಿರುವ ಕನಿಷ್ಠ 15 ವಾಣಿಜ್ಯ ಹಡಗುಗಳು ಜಾಗತಿಕ ಇಂಧನ ಸಾಗಣೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆಯೇ ಎಚ್ಚೆತ್ತಿರುವ ಭಾರತೀಯ ನೌಕಾಸೇನೆಯು ತನ್ನ … Continued

ಇರಾನಿಗೆ ಶಾಕ್‌ ನೀಡಿದ ಅಮೆರಿಕ : ಹಾರ್ಮುಜ್ ಜಲಸಂಧಿ ಸಂಪೂರ್ಣ ಬಂದ್ ಮಾಡಲು ಟ್ರಂಪ್ ಆದೇಶ…!

ವಾಷಿಂಗ್ಟನ್: ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಹಠವನ್ನು ಬಿಡದ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಯಕಟ್ಟಿನ ಪ್ರದೇಶವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ನೌಕಾಪಡೆಯ ಮೂಲಕ ಬಂದ್ ಮಾಡಲು (Blockade) ಅದೇಶಿಸಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಸುದೀರ್ಘವಾಗಿ ನಡೆದ ಮಾತುಕತೆಗಳು ಸಕಾರಾತ್ಮಕವಾಗಿ ಸಾಗಿದ್ದವು ಎಂದು ಟ್ರಂಪ್ ಒಪ್ಪಿಕೊಂಡಿದ್ದಾರೆ. ಆದರೂ, … Continued

ಇರಾನ್ ಯುದ್ಧದ ನಡುವೆಯೇ ಅಮೆರಿಕ ಸಾಹಸ : ಹಾರ್ಮುಜ್ ಜಲಸಂಧಿ ಪ್ರವೇಶಿಸಿದ ಎರಡು ಅಮೆರಿಕ ಯುದ್ಧನೌಕೆಗಳು…!

ವಾಷಿಂಗ್ಟನ್/ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವೆ ಪಾಕಿಸ್ತಾನದ ಇಸ್ಲಾಮಾಬಾದಿನಲ್ಲಿ ಶಾಂತಿ ಮಾತುಕತೆಗಳು ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ಎರಡು ಬೃಹತ್ ಯುದ್ಧನೌಕೆಗಳು ಶನಿವಾರ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪ್ರವೇಶಿಸಿವೆ ಎಂದು ವರದಿಗಳು ತಿಳಿಸಿವೆ. ಯುದ್ಧ ಆರಂಭವಾದ ನಂತರ ಈ ಆಯಕಟ್ಟಿನ ಜಲಮಾರ್ಗದಲ್ಲಿ ಅಮೆರಿಕದ ಮೊದಲ ಸಂಚಾರ ಇದಾಗಿದ್ದು, ಇದು ಜಾಗತಿಕವಾಗಿ ತಲ್ಲಣ ಮೂಡಿಸಿದೆ. ಈ … Continued

ಹಾರ್ಮುಜ್ ಜಲಸಂಧಿ ಸಂಚಾರಕ್ಕೆ ಕಠಿಣ ಷರತ್ತು ; ಇರಾನ್ ಅನುಮತಿ ಕಡ್ಡಾಯ, ದಿನಕ್ಕೆ 15 ಹಡಗುಗಳ ಸಂಚಾರಕ್ಕೆ ಮಾತ್ರ ಅನುಮತಿ

 ತೆಹ್ರಾನ್/ವಾಷಿಂಗ್ಟನ್: ಕಳೆದ 40 ದಿನಗಳಿಂದ ನಡೆಯುತ್ತಿದ್ದ ಭೀಕರ ಸಂಘರ್ಷದ ಬಳಿಕ ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ತಾತ್ಕಾಲಿಕ ಕದನ ವಿರಾಮವು ಅತ್ಯಂತ ನಾಜೂಕಿನ ಸ್ಥಿತಿಯಲ್ಲಿದೆ. ಇರಾನ್ ಸರ್ಕಾರವು ಯುದ್ಧ ಪೂರ್ವ ಸ್ಥಿತಿಗೆ ಮರಳಲು ನಿರಾಕರಿಸಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಸಂಚಾರದ ಮೇಲೆ ಕಠಿಣ ಷರತ್ತುಗಳನ್ನು ವಿಧಿಸಿದೆ. … Continued

ಹಾರ್ಮುಜ್ ಜಲಸಂಧಿ ದಾಟುವ ತೈಲದ ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಸುಂಕ; ಕ್ರಿಪ್ಟೋ ಕರೆನ್ಸಿಯಲ್ಲೇ ಪಾವತಿಸಿ ಎಂದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ಒಪ್ಪಂದದ ಬೆನ್ನಲ್ಲೇ, ಜಗತ್ತಿನ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಸಂಚಾರಕ್ಕೆ ಮುಕ್ತಗೊಳಿಸಿದೆ. ಬುಧವಾರ ಎರಡು ಬೃಹತ್ ಸರಕು ಸಾಗಣೆ ಹಡಗುಗಳು ಈ ಮಾರ್ಗದ ಮೂಲಕ ಯಶಸ್ವಿಯಾಗಿ ಸಂಚರಿಸಿವೆ ಎಂದು ಸಮುದ್ರ ಸಂಚಾರ ಮೇಲ್ವಿಚಾರಣಾ ಸಂಸ್ಥೆ ‘ಮೆರೈನ್ ಟ್ರಾಫಿಕ್’ ತಿಳಿಸಿದೆ. … Continued

ಅಮೆರಿಕ-ಇರಾನ್ ಕದನ ವಿರಾಮಕ್ಕೆ ಹಿನ್ನಡೆ : ಲೆಬನಾನ್ ಮೇಲೆ ಇಸ್ರೇಲ್‌ ದಾಳಿ ; ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್

ವಾಷಿಂಗ್ಟನ್/ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಘೋಷಣೆಯಾಗಿದ್ದ ಐತಿಹಾಸಿಕ ಕದನ ವಿರಾಮವು 24 ಗಂಟೆಗಳು ಕಳೆಯುವಷ್ಟರಲ್ಲೇ ಹಳಿ ತಪ್ಪಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಯನ್ನು ವಿರೋಧಿಸಿ ಇರಾನ್ ಈಗ ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಾಣಿಕಾ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಮತ್ತೆ … Continued

ಹಾರ್ಮುಜ್ ಜಲ ಮಾರ್ಗ ತೆರೆಯಲು ಒಪ್ಪಿದ ಇರಾನ್‌ ; ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಸಮ್ಮತಿಸಿದ ಅಮೆರಿಕ

ವಾಷಿಂಗ್ಟನ್/ತೆಹ್ರಾನ್ : ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿದ್ದಾರೆ. ಈ ಮೂಲಕ ಇರಾನ್‌ನ ವಿದ್ಯುತ್ ಸ್ಥಾವರ ಮತ್ತು ಸೇತುವೆಗಳ ಮೇಲಿನ ದಾಳಿಯನ್ನು ಅಮೆರಿಕ ಸದ್ಯಕ್ಕೆ ಸ್ಥಗಿತಗೊಳಿಸಿದೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು … Continued

ಇರಾನಿನಿಂದ ಹಾರ್ಮುಜ್ ಜಲಸಂಧಿ ಬಂದ್ : ಪುನರಾರಂಭಕ್ಕೆ ಕೋರಿದ್ದ ವಿಶ್ವಸಂಸ್ಥೆ ನಿರ್ಣಯಕ್ಕೆ ರಷ್ಯಾ, ಚೀನಾ ‘ವೀಟೋ’ ತಡೆ

ವಿಶ್ವಸಂಸ್ಥೆ : ಇರಾನ್‌ನಿಂದ ದಿಗ್ಬಂಧನಕ್ಕೊಳಗಾಗಿರುವ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಪುನರಾರಂಭಿಸುವ ಉದ್ದೇಶ ಹೊಂದಿದ್ದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯವನ್ನು ರಷ್ಯಾ ಮತ್ತು ಚೀನಾ ಮಂಗಳವಾರ ವೀಟೋ (ನಿಷೇಧಾಧಿಕಾರ ಚಲಾಯಿಸಿವೆ) ಮಾಡಿವೆ. 15 ರಾಷ್ಟ್ರಗಳ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಬಹ್ರೇನ್ ಪ್ರಸ್ತಾಪಿಸಿದ ನಿರ್ಣಯದ ಮೇಲೆ ಮತದಾನ ನಡೆಸಿತು. … Continued

ಅಮೆರಿಕದ ದಾಳಿಯಲ್ಲಿ ಇರಾನಿನ ಹಲವು ಉನ್ನತ ಸೇನಾಧಿಕಾರಿಗಳು ಸಾವು ಎಂದ ಟ್ರಂಪ್‌ ; ವಿಡಿಯೊ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್ : ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ “ಬೃಹತ್ ದಾಳಿ” ನಡೆಸಿದ್ದು, ಇದರಲ್ಲಿ ಇರಾನ್‌ನ ಹಲವಾರು ಉನ್ನತ ಸೇನಾ ಅಧಿಕಾರಿಗಳು ಹತರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಶನಿವಾರ (ಅಮೆರಿಕ ಕಾಲಮಾನ) ತಮ್ಮ ‘ಟ್ರುತ್ ಸೋಷಿಯಲ್’ (Truth Social) ಜಾಲತಾಣದಲ್ಲಿ ಅವರು ಈ  ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾಳಿಯ ನಂತರದ ದೃಶ್ಯಾವಳಿ ಎನ್ನಲಾದ … Continued

ಚಿಂತೆ ಬೇಡ, ಭಾರತೀಯರು ಸುರಕ್ಷಿತ”: ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಭರವಸೆ

ತೆಹ್ರಾನ್/ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇರಾನ್ ರಾಯಭಾರ ಕಚೇರಿಯು ಭಾರತಕ್ಕೆ ಮಹತ್ವದ ಭರವಸೆ ನೀಡಿದೆ. ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಾಗುವ ಭಾರತದ ಹಡಗುಗಳು ಮತ್ತು ನಾಗರಿಕರ ಸುರಕ್ಷತೆಯ ಬಗ್ಗೆ ಯಾವುದೇ ಆತಂಕ ಬೇಡ ಎಂದು ಇರಾನ್ ಭರವಸೆ ನೀಡಿದೆ. “ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಗಳಲ್ಲಿದ್ದಾರೆ, ಚಿಂತಿಸುವ ಅಗತ್ಯವಿಲ್ಲ” … Continued