50 ವರ್ಷಗಳ ಹಿಂದೆ ಸತತವಾಗಿ 120 ಗಂಟೆಗಳ ಕಾಲ ಹಸಿವಿನಿಂದ ಬಳಲಿದ ಘಟನೆ ನೆನಪಿಸಿಕೊಂಡ ಇನ್ಫೋಸಿಸ್ ನಾರಾಯಣಮೂರ್ತಿ

ವಿಶ್ವಸಂಸ್ಥೆ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು 50 ವರ್ಷಗಳ ಹಿಂದೆ ನಿರಂತರ 120 ಗಂಟೆ ಕಾಲ ಹಸಿವಿನಿಂದ ಬಳಲಿದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಗೆ ಭಾರತದ ಪರ್ಮನೆಂಟ್ ಮಿಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುರೋಪ್‌ನಲ್ಲಿ ಹಿಚ್‌ಹೈಕಿಂಗ್ ಮಾಡುವಾಗ 120 ಗಂಟೆಗಳ ಕಾಲ “ಹಸಿವನ್ನು ಅನುಭವಿಸಿದ್ದೆ” ಎಂದು ನಾರಾಯಣ ಮೂರ್ತಿ … Continued

ರಾಮಮಂದಿರ ಪ್ರತಿಷ್ಠಾಪನೆ ಪ್ರಾದೇಶಿಕ ಶಾಂತಿಗೆ ದೊಡ್ಡ ಬೆದರಿಕೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕ್ಯಾತೆ

ವಿಶ್ವಸಂಸ್ಥೆ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯು ‘ಪ್ರದೇಶದ ಶಾಂತಿ’ಗೆ ‘ದೊಡ್ಡ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರಿಗೆ ಪತ್ರ ಬರೆದು ಎಚ್ಚರಿಸುವ ಮೂಲಕ ಪಾಕಿಸ್ತಾನವು ರಾಮ ಮೀದರದ ಉದ್ಘಾಟನೆಗೆ ಕ್ಯಾತೆ ತೆಗೆದಿದೆ. ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪವಿತ್ರೀಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿಶ್ವ ಸಂಸ್ಥೆಯ ಕಾಯಂ … Continued

ವಿಶ್ವಸಂಸ್ಥೆಗೆ ಭಾರತದ ಮುಂದಿನ ಕಾಯಂ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ನೇಮಕ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಅವರನ್ನು ವಿಶ್ವಸಂಸ್ಥೆಗೆ ಭಾರತದ ಮುಂದಿನ ಖಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ ಎಂದು ಸಚಿವಾಲಯ ಸೋಮವಾರ ಪ್ರಕಟಿಸಿದೆ. ಪ್ರಸ್ತುತ, ರುಚಿರಾ ಕಾಂಬೋಜ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಗ್ಚಿ ಶೀಘ್ರದಲ್ಲೇ ನೇಮಕಾತಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ತಿಳಿಸಿದೆ. ಅವರು 1995 ರಲ್ಲಿ ಭಾರತೀಯ ವಿದೇಶಾಂಗ … Continued