ರಾಮಮಂದಿರ ಪ್ರತಿಷ್ಠಾಪನೆ ಪ್ರಾದೇಶಿಕ ಶಾಂತಿಗೆ ದೊಡ್ಡ ಬೆದರಿಕೆ : ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಕ್ಯಾತೆ

ವಿಶ್ವಸಂಸ್ಥೆ : ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯು ‘ಪ್ರದೇಶದ ಶಾಂತಿ’ಗೆ ‘ದೊಡ್ಡ ಬೆದರಿಕೆಯಾಗಿದೆ’ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರಿಗೆ ಪತ್ರ ಬರೆದು ಎಚ್ಚರಿಸುವ ಮೂಲಕ ಪಾಕಿಸ್ತಾನವು ರಾಮ ಮೀದರದ ಉದ್ಘಾಟನೆಗೆ ಕ್ಯಾತೆ ತೆಗೆದಿದೆ.
ಅಯೋಧ್ಯೆಯಲ್ಲಿ ಧ್ವಂಸಗೊಂಡ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮತ್ತು ಪವಿತ್ರೀಕರಣವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತದೆ ಎಂದು ಪಾಕಿಸ್ತಾನದ ವಿಶ್ವ ಸಂಸ್ಥೆಯ ಕಾಯಂ ಪ್ರತಿನಿಧಿ ಮುನೀರ್ ಅಕ್ರಂ ಅವರು ವಿಶ್ವಸಂಸ್ಥೆಯ ಅಲೈಯನ್ಸ್ ಆಫ್ ಸಿವಿಲಿಸೇಷನ್ಸ್ ಅಧೀನ ಕಾರ್ಯದರ್ಶಿ ಮತ್ತು ಉನ್ನತ ಪ್ರತಿನಿಧಿ ಮಿಗುಯೆಲ್ ಏಂಜೆಲ್ ಮೊರಾಟಿನೋಸ್‌ ಅವರಿಗೆಗೆ ಪತ್ರ ಬರೆದಿದ್ದಾರೆ.
ಮಂದಿರದ ನಿರ್ಮಾಣ ಮತ್ತು ಸಮರ್ಪಣೆಯು “ಪ್ರದೇಶದ ಸಾಮರಸ್ಯ ಮತ್ತು ಶಾಂತಿ” ಗೆ “ದೊಡ್ಡ ಬೆದರಿಕೆ” ಎಂದು ಬುಧವಾರ ಬಿಡುಗಡೆ ಮಾಡಿದ ಪತ್ರದಲ್ಲಿ ಮನೀರ್‌ ಅಕ್ರಂ ಹೇಳಿದ್ದಾರೆ ಮತ್ತು ಮಾರ್ಟಿನೋಸ್ ಅವರು “ಭಾರತದ ಧಾರ್ಮಿಕ ಸ್ಥಳಗಳ ರಕ್ಷಣೆಗಾಗಿ ತುರ್ತು ಮಧ್ಯಸ್ಥಿಕೆ” ವಹಿಸಬೇಕು ಎಂದು ಕರೆ ನೀಡಿದ್ದಾರೆ.

“ವಾರಾಣಸಿಯ ಜ್ಞಾನವಾಪಿ ಮಸೀದಿ ಮತ್ತು ಮಥುರಾದ ಶಾಹಿ ಈದ್ಗಾ ಮಸೀದಿ ಸೇರಿದಂತೆ ಇತರ ಮಸೀದಿಗಳು ಇದೇ ರೀತಿಯ ಬೆದರಿಕೆಗಳನ್ನು ಎದುರಿಸುತ್ತಿವೆ” ಎಂದು ಅಕ್ರಂ ಪ್ರತಿಪಾದಿಸಿದ್ದಾರೆ. ಭಾರತೀಯ ರಾಜ್ಯಗಳ ಕೆಲವು ಮುಖ್ಯಮಂತ್ರಿಗಳ ಹೇಳಿಕೆಗಳು ಅಂತಹ ಕ್ರಮಗಳನ್ನು ಪಾಕಿಸ್ತಾನದ ವಿರುದ್ಧದ ಪ್ರಾದೇಶಿಕ ಹಕ್ಕುಗಳೊಂದಿಗೆ ಜೋಡಿಸಿವೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆಯ ಅಲೈಯನ್ಸ್ ಆಫ್ ಸಿವಿಲೈಸೇಶನ್ಸ್‌ನ ಆದೇಶಗಳು ಅಂತರ್‌ ಸಾಂಸ್ಕೃತಿಕ ಮತ್ತು ಅಂತರ್‌ ಧರ್ಮೀಯ ಸಂವಾದ ಮತ್ತು ತಿಳುವಳಿಕೆಯನ್ನು ಉತ್ತೇಜಿಸುವುದನ್ನು ಒಳಗೊಂಡಿವೆ.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ಇಸ್ಲಾಮಿಕ್ ಸಹಕಾರ ಸಂಘಟನೆಯ (ಒಐಸಿ) ರಾಯಭಾರಿಗಳ ಸಭೆಯಲ್ಲಿ ಮುನೀರ್‌ ಅಕ್ರಂ ರಾಮಮಂದಿರವನ್ನು ಎತ್ತಿದರು ಮತ್ತು ಮುಂದಿನ ಸಭೆಯ ಕಾರ್ಯಸೂಚಿಯಲ್ಲಿ ಅದನ್ನು ಸೇರಿಸಲು ಗುಂಪು ಒಪ್ಪಿಕೊಂಡಿತು ಎಂದು ಪಾಕಿಸ್ತಾನದ ವಿಶ್ವಸಂಸ್ಥೆಯ ಮಿಷನ್ ಬುಧವಾರ ಪತ್ರಿಕಾ ಪ್ರಕಟಣೆ ತಿಳಿಸಿದೆ. ಇದನ್ನು ಚರ್ಚಿಸಿದಾಗ, ಕೆಲವು ರಾಯಭಾರಿಗಳು ಕೆಲವು ಯುರೋಪಿಯನ್ ರಾಷ್ಟ್ರಗಳಲ್ಲಿನ ಮಸೀದಿಗಳ ಮೇಲಿನ ದಾಳಿಗಳನ್ನು ಪ್ರಸ್ತಾಪಿಸಿದ್ದಾರೆ ಮತ್ತು ಪ್ಯಾಲೆಸ್ತೀನ್‌ನ ಕಾಯಂ ವೀಕ್ಷಕ ರಿಯಾದ್ ಮನ್ಸೂರ್ ಅವರು ಅಲ್-ಅಕ್ಸಾದಲ್ಲಿ ಇಸ್ರೇಲ್ ಕ್ರಮ ಮತ್ತು ಮಸೀದಿಗಳು ಮತ್ತು ಚರ್ಚ್‌ಗಳ ಧ್ವಂಸವನ್ನು ಪ್ರಸ್ತಾಪಿಸಿದರು ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.
ಮಂಗಳವಾರದಂದು ಒಐಸಿಯ ಪ್ರಧಾನ ಕಾರ್ಯದರ್ಶಿಯವರು ರಾಮಮಂದಿರದ ಉದ್ಘಾಟನೆಯ ಬಗ್ಗೆ “ಗಂಭೀರ ಆತಂಕ” ವ್ಯಕ್ತಪಡಿಸಿ ಅದನ್ನು ಖಂಡಿಸಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement