ಹಾರ್ಮುಜ್ ಜಲಸಂಧಿ ದಾಟುವ ತೈಲದ ಪ್ರತಿ ಬ್ಯಾರೆಲ್‌ಗೆ 1 ಡಾಲರ್ ಸುಂಕ; ಕ್ರಿಪ್ಟೋ ಕರೆನ್ಸಿಯಲ್ಲೇ ಪಾವತಿಸಿ ಎಂದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮ ಒಪ್ಪಂದದ ಬೆನ್ನಲ್ಲೇ, ಜಗತ್ತಿನ ಪ್ರಮುಖ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯನ್ನು ಇರಾನ್ ಸಂಚಾರಕ್ಕೆ ಮುಕ್ತಗೊಳಿಸಿದೆ. ಬುಧವಾರ ಎರಡು ಬೃಹತ್ ಸರಕು ಸಾಗಣೆ ಹಡಗುಗಳು ಈ ಮಾರ್ಗದ ಮೂಲಕ ಯಶಸ್ವಿಯಾಗಿ ಸಂಚರಿಸಿವೆ ಎಂದು ಸಮುದ್ರ ಸಂಚಾರ ಮೇಲ್ವಿಚಾರಣಾ ಸಂಸ್ಥೆ ‘ಮೆರೈನ್ ಟ್ರಾಫಿಕ್’ ತಿಳಿಸಿದೆ.
ಗ್ರೀಸ್ ಮಾಲೀಕತ್ವದ ‘ಎನ್.ಜೆ ಅರ್ತ್’ (NJ Earth) ಮತ್ತು ಲೈಬೀರಿಯಾ ಧ್ವಜ ಹೊಂದಿರುವ ‘ಡೆಟೋನಾ ಬೀಚ್’ ಹಡಗುಗಳು ಇರಾನ್ ಅನುಮೋದಿತ ಕಾರಿಡಾರ್ ಮೂಲಕ ಪ್ರಯಾಣ ಬೆಳೆಸಿವೆ.

ಹೊಸ ನಿಯಮಗಳನ್ನು ವಿಧಿಸಿದ ಇರಾನ್‌ ; ಕ್ರಿಪ್ಟೋಕರೆನ್ಸಿಯಲ್ಲಿ ಸುಂಕ
ಕದನ ವಿರಾಮದ ಅವಧಿಯಲ್ಲಿ ಹಾರ್ಮುಜ್ ಜಲಸಂಧಿಯ ಮೂಲಕ ಚಲಿಸುವ ಹಡಗುಗಳ ಮೇಲೆ ಇರಾನ್ ಕಟ್ಟುನಿಟ್ಟಿನ ನಿಯಮಗಳನ್ನು ಹೇರಿದೆ.
ಹಡಗುಗಳ ಸಂಚಾರವು ಇರಾನ್ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ಮಾತ್ರ ನಡೆಯುತ್ತದೆ ಎಂದು ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತಿಳಿಸಿದ್ದಾರೆ.
ಜಲಸಂಧಿಯ ಮೂಲಕ ಹಾದುಹೋಗುವ ಪ್ರತಿ ಬ್ಯಾರೆಲ್ ತೈಲಕ್ಕೆ 1 ಡಾಲರ್ ಸುಂಕ ಪಾವತಿಸಬೇಕು ಮತ್ತು ಈ ಪಾವತಿಯನ್ನು ಕೇವಲ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಮಾಡಬೇಕು ಎಂದು ಇರಾನ್ ಹೇಳಿದೆ. ಏಕೆಂದರೆ ಎರಡು ವಾರಗಳ ಕದನ ವಿರಾಮದ ಸಮಯದಲ್ಲಿ ಪ್ರಮುಖ ಜಲಮಾರ್ಗದ ನಿಯಂತ್ರಣವನ್ನು ತನ್ನ ಕೈಯಲ್ಲಿ ಉಳಿಸಿಕೊಳ್ಳಲು ಅದು ಪ್ರಯತ್ನಿಸುತ್ತದೆ.

ಪ್ರಮುಖ ಸುದ್ದಿ :-   ಅಂತಾರಾಷ್ಟ್ರೀಯ ಕ್ರಿಕೆಟಿಗೆ ದಿಢೀರ್‌ ನಿವೃತ್ತಿ ಘೋಷಿಸಿದ ನ್ಯೂಜಿಲೆಂಡ್‌ನ ಅಪ್ರತಿಮ ಬ್ಯಾಟರ್‌ ಕೇನ್ ವಿಲಿಯಮ್ಸನ್

ತಪಾಸಣೆ ಕಡ್ಡಾಯ: ಕದನ ವಿರಾಮದ ನೆಪದಲ್ಲಿ ಶಸ್ತ್ರಾಸ್ತ್ರಗಳ ಸಾಗಣೆ ನಡೆಯದಂತೆ ತಡೆಯಲು ಪ್ರತಿ ಹಡಗನ್ನು ತಪಾಸಣೆ ಮಾಡಲಾಗುವುದು ಎಂದು ಇರಾನ್ ತೈಲ ರಫ್ತುದಾರರ ಒಕ್ಕೂಟದ ವಕ್ತಾರ ಹಮೀದ್ ಹೊಸೇನಿ ಹೇಳಿದ್ದಾರೆ. ಆದರೆ ಬೇರೆ ಬೇರೆ ಹಡಗುಗಳು ಸುಂಕ ಪಾವತಿಸಲು ಒಪ್ಪುತ್ತವೆಯೇ ಎಂಬುದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ಗೊಂದಲ ಮತ್ತು ಆತಂಕ
ಇರಾನ್‌ ಹಾಗೂ ಅಮೆರಿಕದ ನಡುವೆ ಕದನ ವಿರಾಮದ ಒಪ್ಪಂದದ ಹೊರತಾಗಿಯೂ ಹಲವು ಗೊಂದಲಗಳು ಉಳಿದುಕೊಂಡಿವೆ. ಒಪ್ಪಂದ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಗಲ್ಫ್ ದೇಶಗಳಲ್ಲಿ ಅಲ್ಲಲ್ಲಿ ದಾಳಿಗಳು ವರದಿಯಾಗಿವೆ. ಲೆಬನಾನ್‌ನಲ್ಲಿನ ಯುದ್ಧ ನಿಲ್ಲಲಿದೆ ಎಂದು ಸಂಧಾನಕಾರರು ಹೇಳಿದ್ದರೂ, ಇಸ್ರೇಲ್ ಮಾತ್ರ ಬುಧವಾರವೂ ಬೈರೂತ್ ಮೇಲೆ ದಾಳಿ ಮುಂದುವರಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement