ಅಯೋಧ್ಯೆ ರಾಮ ಮಂದಿರ ಉದ್ಘಾಟನೆ : ವಿರಾಟ ಕೊಹ್ಲಿಯಂತೆ ಕಾಣುವ ತದ್ರೂಪಿ ಪ್ರತ್ಯಕ್ಷ, ಕಿಂಗ್‌ ಕೊಹ್ಲಿ ಎಂದೇ ಭಾವಿಸಿ ಸೆಲ್ಫಿಗೆ ಮುಗಿಬಿದ್ದ ಜನ..| ವೀಕ್ಷಿಸಿ

ಅಯೋಧ್ಯೆ : ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸೋಮವಾರ ಅದ್ಧೂರಿಯಾಗಿ ನೆರವೇರಿದ್ದು, ಮಂಗಳವಾರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬಾಲಿವುಡ್‌ ಸೇರಿ ಹಲವು ಕ್ಷೇತ್ರಗಳ ತಾರೆಯರು ಮತ್ತು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇದೇವೇಳೆ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ವಿರಾಟ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಬ್ಬರು ನೀಲಿ ಜರ್ಸಿಯಲ್ಲಿ  ಕಾಣಿಸಿಕೊಂಡಿದ್ದು, ಆತ ವಿರಾಟ್‌ ಕೊಹ್ಲಿ ಎಂದು ತಪ್ಪಾಗಿ ಭಾವಿಸಿ ತಪ್ಪಾಗಿ ಭಾವಿಸಿ ಹಲವರು ಸೆಲ್ಫಿಗಾಗಿ ಮುಗಿಬಿದ್ದ ಘಟನೆಯೂ ನಡೆದಿದೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಆಗಮಿಸಿದ್ದ ವಿರಾಟ್‌ ಕೊಹ್ಲಿಯಂತೆ ಕಾಣುವ ವ್ಯಕ್ತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುವುದನ್ನು ವೀಡಿಯೊದಲ್ಲಿ ಕಾಣಬಹುದು.

ವಿರಾಟ್ ಕೊಹ್ಲಿ ಆಗಮಿಸಿದ್ದಾರೆಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಸುತ್ತುವರಿದ ಗುಂಪಿನಿಂದ ತಪ್ಪಿಸಿಕೊಳ್ಳಲು ವಿರಾಟ ಕೊಹ್ಲಿ ತದ್ರೂಪಿ ಹೆಣಗಾಡುತ್ತಿರುವುದನ್ನು ನೋಡಬಹುದಾಗಿದೆ.ವಿರಾಟ ಕೊಹ್ಲಿಯನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದು ಅನೇಕರಿಗೆ ಗೊತ್ತಿದ್ದ ಕಾರಣ ವಿರಾಟ್‌ ತದ್ರೂಪಿ ನೋಡದ ಅನೇಕರು ವಿರಾಟ್‌ ಕೊಹ್ಲಿ ಎಂದೇ ಭಾವಿಸಿ ಸೆಲ್ಫಿಗಾಗಿ ಮುಗಿಬಿದ್ದರು. ಆತನನ್ನು ಸುತ್ತುವರಿದರು. ತದ್ರೂಪಿಗೆ ತಪ್ಪಿಸಿಕೊಂಡು ಹೋಗಲೂ ಸಾಧ್ಯವಾಗದ ರೀತಿಯಲ್ಲಿ ಆತನನನ್ನು ಸುತ್ತುವರಿದಿದ್ದರು.

ಪ್ರಮುಖ ಸುದ್ದಿ :-   'ತಾರಕ್ ಮೆಹ್ತಾ' ನಟ ಗುರುಚರಣ್ ಸಿಂಗ್ ಐದು ದಿನಗಳಿಂದ ನಾಪತ್ತೆ ; ಸಿಸಿಟಿವಿಯಲ್ಲಿ ರಸ್ತೆ ದಾಟುತ್ತಿರುವುದು ಸೆರೆ

ಕ್ರಿಕೆಟ್‌ ತಾರೆಯರಾದ ಸಚಿನ್ ತೆಂಡೂಲ್ಕರ, ವೆಂಕಟೇಶ ಪ್ರಸಾದ, ಮಿಥಾಲಿ ರಾಜ, ಅನಿಲ ಕುಂಬ್ಳೆ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಕ್ರಿಕೆಟ್ ವಲಯದಿಂದ ರಾಮಮಂದಿರ ಅನೇಕ ದಿಗ್ಗಜರು ಸಮಾರಂಭದಲ್ಲಿ ಭಾಗವಹಿಸಿದ್ದರು. ವಿರಾಟ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಗೂ ಆಹ್ವಾನ ನೀಡಲಾಗಿತ್ತು. ಆದರೆ ಅವರು ಆಗಮಿಸಿರಲಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement