ಅಯೋಧ್ಯೆ ರಾಮಲಲ್ಲಾ ವಿಗ್ರಹಕ್ಕೆ 11 ಕೋಟಿ ರೂಪಾಯಿ ಮೌಲ್ಯದ ಕಿರೀಟ ದಾನ ಮಾಡಿದ ಗುಜರಾತ್ ವಜ್ರದ ವ್ಯಾಪಾರಿ

ಅಯೋಧ್ಯೆ : ಗುಜರಾತಿನ ಸೂರತ್‌ನ ವಜ್ರದ ವ್ಯಾಪಾರಿಯೊಬ್ಬರು ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಸ್ಥಾಪಿಸಲಾದ ರಾಮಲಲ್ಲಾನ ವಿಗ್ರಹಕ್ಕೆ 11 ಕೋಟಿ ಮೌಲ್ಯದ ಕಿರೀಟವನ್ನು ದಾನ ಮಾಡಿದ್ದಾರೆ.
ಇದನ್ನು ಹೊಸದಾಗಿ ನಿರ್ಮಿಸಲಾಗಿರುವ ರಾಮಮಂದಿರದ ಭಗವಾನ್‌ ರಾಮಲಲ್ಲಾನಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಸೂರತ್‌ನ ಗ್ರೀನ್ ಲ್ಯಾಬ್ ಡೈಮಂಡ್ ಕಂಪನಿಯ ಮಾಲೀಕ ಮುಖೇಶ ಪಟೇಲ್ ಅವರು 6 ಕಿಲೋಗ್ರಾಂ ತೂಕದ ಕಿರೀಟವನ್ನು ಭಗವಾನ್ ರಾಮನಿಗೆ ಅರ್ಪಿಸಿದರು, ಕಿರೀಟವನ್ನು ಚಿನ್ನ, ವಜ್ರಗಳು ಮತ್ತು ಅಮೂಲ್ಯವಾದ ರತ್ನದ ಹರಳುಗಳಿಂದ ಅಲಂಕರಿಸಲಾಗಿದೆ. ಮುಖೇಶ ಪಟೇಲ್ ಅವರು ತಮ್ಮ ಕುಟುಂಬದೊಂದಿಗೆ ಖುದ್ದಾಗಿ ಅಯೋಧ್ಯೆಗೆ ಭೇಟಿ ನೀಡಿ ದೇವಾಲಯದ ಟ್ರಸ್ಟ್ ಅಧಿಕಾರಿಗಳಿಗೆ ಈ ಕಿರೀಟವನ್ನು ಅರ್ಪಿಸಿದರು.
ರಾಮಮಂದಿರದ ಪ್ರಧಾನ ಅರ್ಚಕರು ಮತ್ತು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿಗಳ ಉಪಸ್ಥಿತಿಯಲ್ಲಿ, ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮುಖೇಶ ಪಟೇಲ್ ಅವರು ಕಿರೀಟವನ್ನು ಹಸ್ತಾಂತರಿಸಿದರು.

ಏತನ್ಮಧ್ಯೆ, ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ಖಜಾಂಚಿ ದಿನೇಶಭಾಯಿ ನವಿಯಾ ಅವರು, ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ಸ್ಥಾಪಿಸಲಾದ ಭಗವಾನ್ ರಾಮನ ವಿಗ್ರಹಕ್ಕೆ ಮುಖೇಶ ಪಟೇಲ್ ಅವರು ಕಿರೀಟ ನೀಡಿದ್ದಾರೆ ಎಂದು ಬಹಿರಂಗಪಡಿಸಿದರು.
ಸಂಪೂರ್ಣ ಅಧ್ಯಯನದ ನಂತರ, ಪಟೇಲ್ ಅವರು ಚಿನ್ನ ಮತ್ತು ಇತರ ಆಭರಣಗಳಿಂದ ಮಾಡಿದ ಕಿರೀಟವನ್ನು ದಾನ ಮಾಡಲು ನಿರ್ಧರಿಸಿದರು, ನಂತರ ಅದನ್ನು ರಾಮನ ಪ್ರತಿಮೆ ಅಳತೆ ಮಾಡಿ ತಯಾರಿಸಲು ನಿರ್ಧರಿಸಲಾಯಿತು. ಪ್ರತಿಮೆಯನ್ನು ಅಳೆಯಲು ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಅಯೋಧ್ಯೆಗೆ ಕಳುಹಿಸಲಾಯಿತು, ಅದರ ನಂತರ ಕಿರೀಟದ ತಯಾರಿಕೆಯು ಪ್ರಾರಂಭವಾಯಿತು.ಕಿರೀಟವು ವಿವಿಧ ಗಾತ್ರದ ವಜ್ರಗಳು, ಮಾಣಿಕ್ಯಗಳು, ಮುತ್ತುಗಳು ಮತ್ತು ನೀಲಮಣಿಗಳ ಜೊತೆಗೆ 4 ಕಿಲೋಗ್ರಾಂಗಳಷ್ಟು ಚಿನ್ನವನ್ನು ಒಳಗೊಂಡಿದೆ.
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಅಯೋಧ್ಯೆ ದೇವಸ್ಥಾನದಲ್ಲಿ ನೂತನ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಮೈಸೂರು ಮೂಲದ ಶಿಲ್ಪಿ ಅರುಣ ಯೋಗಿರಾಜ ಅವರು ರಾಮಲಲ್ಲಾ ಮೂರ್ತಿಯನ್ನು ಕೆತ್ತಿದ್ದಾರೆ.

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement