ಹುಲಿ ದಾಳಿಗೆ ನಾಲ್ವರು ಮಹಿಳೆಯರು ಸಾವು

ಮುಂಬೈ: ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಶುಕ್ರವಾರ (ಮೇ 22)  ಅತ್ಯಂತ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಅರಣ್ಯ ಪ್ರದೇಶಕ್ಕೆ ತೇಂದು ಎಲೆಗಳನ್ನು ಸಂಗ್ರಹಿಸಲು ಹೋಗಿದ್ದ 13 ಮಹಿಳೆಯರ ಗುಂಪಿನ ಮೇಲೆ ಹುಲಿ ದಾಳಿ ನಡೆಸಿದ್ದು, ನಾಲ್ವರು ಮಹಿಳೆಯರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ಸಿಂದೇವಾಹಿ ತಹಸಿಲ್‌ನ ಗುಂಜೆವಾಹಿ ಗ್ರಾಮದ ನಿವಾಸಿಗಳಾದ … Continued

ವೀಡಿಯೊ..| ಹಳ್ಳಿಗೆ ನುಗ್ಗಿ ವ್ಯಕ್ತಿ ಮೇಲೆ ದಾಳಿ ಮಾಡಿದ ನಂತ್ರ ಮನೆ ಒಳಗಿನ ಮಂಚದ ಮೇಲೆ ವಿಶ್ರಾಂತಿ ಪಡೆದ ಹುಲಿ…!

ಉಮಾರಿಯಾ: ಮಧ್ಯಪ್ರದೇಶದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ಹಳ್ಳಿಯೊಂದಕ್ಕೆ ಸೋಮವಾರ ಹುಲಿಯೊಂದು ನುಗ್ಗಿ ಆತಂಕ ಸೃಷ್ಟಿಸಿದೆ. ಯುವಕನ ಮೇಲೆ ದಾಳಿ ಮಾಡಿದ ಹುಲಿ, ನಂತರ ಮನೆಯೊಂದರೊಳಗೆ ನುಗ್ಗಿ ಮಂಚದ ಮೇಲೆ ಆರಾಮವಾಗಿ ಕುಳಿತುಕೊಂಡ ಘಟನೆ ವರದಿಯಾಗಿದೆ. ಇದರಿಂದ ಹೆದರಿದ ಗ್ರಾಮಸ್ಥರು ಪ್ರಾಣ ಉಳಿಸಿಕೊಳ್ಳಲು ಮನೆಯ ಮೇಲ್ಛಾವಣಿಗಳನ್ನು ಏರಿ ಕುಳಿತಿದ್ದರು. ಸೋಮವಾರ (ಡಿಸೆಂಬರ್‌ 29) ಬೆಳಿಗ್ಗೆ … Continued

ಚಾಮರಾಜನಗರ | ಹುಲಿ ದಾಳಿಗೆ ಮಹಿಳೆ ಸಾವು, ಯುವಕನಿಗೆ ಗಾಯ

ಚಾಮರಾಜನಗರ: ಕೆಲವೇ ತಾಸುಗಳ ಅಂತರದಲ್ಲಿ ಇಬ್ಬರ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ದಾಳಿಯಲ್ಲಿ ಮಹಿಳೆ ಸಾವಿಗೀಡಾಗಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಚಾಮರಾಜನಗರ ತಾಲೂಕಿನ ಬೇಡಗುಳಿಯಲ್ಲಿ ನಡೆದಿದೆ. ಬೇಡಗುಳಿಯ ರಂಗಮ್ಮ ಎಂಬ ವೃದ್ಧೆ ಹುಲಿ ದಾಳಿಗೆ ಅಸುನೀಗಿದ್ದಾರೆ. ರಂಗಮ್ಮ ಎಂಬವರ ಮೇಲೆ ಮಂಗಳವಾರ ಬೆಳಗ್ಗೆ ಹುಲಿ ದಾಳಿ ಮಾಡಿದ್ದು ತಲೆ ಮತ್ತು … Continued

ವೀಡಿಯೊ..| ಅರಣ್ಯ ಇಲಾಖೆ ನೌಕರನ ಮೇಲೆ ದಾಳಿ ಮಾಡಿದ ಹುಲಿ ; ಅದರ ಬಾಯಿಂದ ಸಹೋದ್ಯೋಗಿಯನ್ನು ರಕ್ಷಿಸಿದ ಸಿಬ್ಬಂದಿ

ಕೋಲ್ಕತ್ತಾ : ಸೋಮವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಸುಂದರಬನ್ಸ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿ ತಂಡವೊಂದು ರಾಯಲ್ ಬೆಂಗಾಲ್ ಹುಲಿಯನ್ನು ಹಿಂಬಾಲಿಸಿಕೊಂಡು ಅಜ್ಮಲ್ಮರಿ ಕಾಡಿನಲ್ಲಿ ಸುತ್ತಾಡುತ್ತಿದ್ದಾಗ ಈ ಘಟನೆ ನಡೆದಿದೆ. ಅದು ಕ್ಯಾಮೆರಾದಲ್ಲಿ ಸೆರೆಯಾಗಿದೆ. … Continued

ಮೇಕೆ ಮೇಯಿಸುತ್ತಿದ್ದ ಮಹಿಳೆಯನ್ನು ಎಳೆದೊಯ್ದು ಕೊಂದುಹಾಕಿದ ಹುಲಿ

ಮೈಸೂರು: ಮೇಕೆಗಳನ್ನು ಮೇಯಿಸುತ್ತಿದ್ದಾಗ ಹಠಾತ್ ದಾಳಿ ನಡೆಸಿದ ಹುಲಿಯೊಂದು ಮಹಿಳೆಯನ್ನು ಹೊತ್ತೊಯ್ದ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಶನಿವಾರ ಸಂಜೆ ನಡೆದಿದ್ದು, ಮಹಿಳೆಯ ಮೃತದೇಹ ಭಾನುವಾರ ಬೆಳಗ್ಗೆ ದೊರೆತಿದೆ. ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿಯಾದ ಚಿಕ್ಕಿ (48) ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ಮಹಿಳೆಯಾಗಿದ್ದಾರೆ. ಮೂರ್ಬಾಂದ್ ಬೆಟ್ಟದ ಸಮೀಪ … Continued

ಹುಲಿ ದಾಳಿಗೆ ಹದಿಹರೆಯದ ಕಾರ್ಮಿಕ ಸಾವು

ಮಡಿಕೇರಿ: ನರಭಕ್ಷಕ ಹುಲಿ ದಾಳಿಗೆ ಸಿಲುಕಿ ಹದಿಹರೆಯದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು ಬಳಿ ನಡೆದ ವರದಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18) ಹುಲಿ ದಾಳಿಗೆ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆ ಈತ ಕಾಫಲಿ ಪ್ಲಾಂಟ್‌ನಲ್ಲಿ ತನ್ನ ದೈನಂದಿನ ಕೆಲಸದಲ್ಲಿ ನಿರತನಾಗಿದ್ದಾಗ ತೋಟದಲ್ಲಿದ್ದ ಹುಲಿ … Continued

ಹುಲಿ ದಾಳಿಗೆ ಕಟ್ಟಿಗೆ ತರಲು ಹೋಗಿದ್ದ ಯುವಕ ಸಾವು

ಮೈಸೂರು : ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಕಾಡಿನಲ್ಲಿ ಕಟ್ಟಿಗೆ ತರಲು ಹೋಗಿದ್ದ ಯುವಕನ ಮೇಲೆ ಹುಲಿಯೊಂದು ದಾಳಿ ಮಾಡಿದ್ದು, ಯುವಕ ಮೃತಪಟ್ಟಿದ್ದಾನೆ. ಈ ದುರ್ಘಟನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯ ಬಳ್ಳೆ ಅರಣ್ಯ ಸಮೀಪದ ನಡೆದಿದೆ. ಹುಲಿ ದಾಳಿಗೆ ಸಿಲುಕಿದ ಮೃತನನ್ನು ಮಂಜು (18 ) ಎಂದು ಗುರುತಿಸಲಾಗಿದೆ. ಸೌದೆ (ಕಟ್ಟಿಗೆ)ಯನ್ನು … Continued