ಹುಲಿ ದಾಳಿಗೆ ಕಟ್ಟಿಗೆ ತರಲು ಹೋಗಿದ್ದ ಯುವಕ ಸಾವು

ಮೈಸೂರು : ಜಿಲ್ಲೆಯ ಎಚ್‌.ಡಿ. ಕೋಟೆ ತಾಲೂಕಿನ ಕಾಡಿನಲ್ಲಿ ಕಟ್ಟಿಗೆ ತರಲು ಹೋಗಿದ್ದ ಯುವಕನ ಮೇಲೆ ಹುಲಿಯೊಂದು ದಾಳಿ ಮಾಡಿದ್ದು, ಯುವಕ ಮೃತಪಟ್ಟಿದ್ದಾನೆ. ಈ ದುರ್ಘಟನೆ ಮೈಸೂರು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯ ಬಳ್ಳೆ ಅರಣ್ಯ ಸಮೀಪದ ನಡೆದಿದೆ.
ಹುಲಿ ದಾಳಿಗೆ ಸಿಲುಕಿದ ಮೃತನನ್ನು ಮಂಜು (18 ) ಎಂದು ಗುರುತಿಸಲಾಗಿದೆ. ಸೌದೆ (ಕಟ್ಟಿಗೆ)ಯನ್ನು ತರಲು ಕಾಡಿಗೆ ಹೋಗಿದ್ದ ಗುಂಪಿನ ಮೇಲೆ ಹುಲಿ ಹಠಾತ್ ದಾಳಿ ಮಾಡಿದೆ. ಹುಲಿ ದಾಳಿಯ ವೇಳೆ ಅದರ ಬಾಯಿಗೆ ಸಿಲುಕಿದ ಯುವಕ ಮಂಜುವಿನ ತಲೆಯನ್ನು ಸೀಳಿದೆ. ಹಠಾತ್‌ ಹುಲಿ ದಾಳಿಯಿಂದ ಕಂಗಾಲಾದ ಕಟ್ಟಿಗೆ ತರಲು ಹೋಗಿದ್ದ ಗುಂಪಿನ ಇತರ ಸದಸ್ಯರು ಚಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ಮಂಜುವಿನ ದಾಳಿ ಮಾಡಿದ ಹುಲಿ ಕೊಂದು ಹಾಕಿದೆ.
ಹುಲಿ ದಾಳಿಯ ನಂತರ ಮಾಹಿತಿ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ದಾಳಿಗೊಳಗಾದ ಮಂಜುವಿನ ಪ್ರಾಣ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ತೀವ್ರ ಗಾಯಗೊಂಡಿದ್ದ ಮಂಜು ಮೃತಪಟ್ಟಿದ್ದ. ನಂತರ ಮೃತದೇಹವನ್ನು ಎಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಘಟನೆ ಕುರಿತು ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.
ಶನಿವಾರ ರಾತ್ರಿ ಟಿ.ನರಸೀಪುರ ತಾಲೂಕಿನಲ್ಲಿ ಚಿರತೆ ಹಾದಾಳಿ ನಡೆಸಿ 11 ವರ್ಷದ ಬಾಲಕನನ್ನ ಸಾಯಿಸಿತ್ತು. ಹೊರಳಹಳ್ಳಿ ಗ್ರಾಮದ ಜಯಂತ (11) ವರ್ಷ ಮೃತ ಬಾಲಕ. ಆತನನ್ನು ಚಿರತೆ ಎಳೆದೊಯ್ದಿತ್ತು. ಘಟನಾ ಸ್ಥಳದಿಂದ 1 ಕಿಮೀ ದೂರದಲ್ಲಿ ಬಾಲಕನ ಮೃತ ದೇಹ ಪತ್ತೆಯಾಗಿತ್ತು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement