ದೇವಸ್ಥಾನದ ಗೋಡೆ ಕುಸಿದು 6 ಮಂದಿ ಸಾವು, 14 ಜನರಿಗೆ ಗಂಭೀರ ಗಾಯ

ಸಾಂಗ್ಲಿ : ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದೇವಸ್ಥಾನದ ಗೋಡೆ ಕುಸಿದು ಆರು ಮಂದಿ ಭಕ್ತರು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ
ಸಾಂಗ್ಲಿ ಜಿಲ್ಲೆಯ ಜತ್ ತಾಲ್ಲೂಕಿನ ಮೋಟೇವಾಡಿ ಗ್ರಾಮದಲ್ಲಿ ಮರ್ಗುಬಾಯಿ ದೇವಿ ಯಾತ್ರೆಯ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಮಂಗಳವಾರ ಸಂಜೆ ದೇವಸ್ಥಾನದಲ್ಲಿ ಸುಮಾರು 350ಕ್ಕೂ ಹೆಚ್ಚು ಭಕ್ತರು ಜಮಾಯಿಸಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬಲವಾದ ಗಾಳಿ ಮತ್ತು ಮಳೆ ಸುರಿಯಲಾರಂಭಿಸಿತು. ಮಳೆಯಿಂದ ರಕ್ಷಣೆ ಪಡೆಯಲು ಭಕ್ತರು ದೇವಸ್ಥಾನದ ಆವರಣದ ಗೋಡೆಯ ಪಕ್ಕದಲ್ಲಿದ್ದ ಟಿನ್ ಶೀಟ್‌ಗಳ ಕೆಳಗೆ ಆಶ್ರಯ ಪಡೆದಿದ್ದರು. ಆದರೆ, ಗಾಳಿಯ ವೇಗಕ್ಕೆ ಗೋಡೆ ಮತ್ತು ಶೀಟ್‌ಗಳು ಏಕಾಏಕಿ ಜನರ ಮೇಲೆ ಕುಸಿದು ಬಿದ್ದಿವೆ ಎಂದು ಹೇಳಲಾಗಿದೆ.
ಈ ಘಟನೆಯಲ್ಲಿ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದು, 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರ ಪೈಕಿ ಮೂವರು ಸ್ಥಳೀಯರಾಗಿದ್ದರೆ, ಉಳಿದ ಮೂವರು ಕರ್ನಾಟಕದ ವಿಜಯಪುರ ತಾಲ್ಲೂಕಿನವರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸಾಂಗ್ಲಿ ಎಸ್‌ಪಿ ತುಷಾರ್ ದೋಶಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement