ಮೈಯಲ್ಲಿ ಹೊಕ್ಕ ‘ಭೂತʼ ಓಡಿಸಲು ಮಾಂತ್ರಿಕನಿಂದ ಬಾಲಕನಿಗೆ ಥಳಿತ : ಗಾಯಗಳಿಂದ ಬಾಲಕ ಸಾವು

ಮುಂಬೈ,: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ 14 ವರ್ಷದ ಅಸ್ವಸ್ಥ ಬಾಲಕನೊಬ್ಬನಿಗೆ ಮೈಯಲ್ಲಿ ಹೊಕ್ಕಿರುವ ಭೂತ ಬಿಡಿಸುವುದಾಗಿ ಹೇಳಿ ಮಾಂತ್ರಿಕರೊಬ್ಬರು ತೀವ್ರವಾಗಿ ಥಳಿಸಿದ ನಂತರ ಆತ ಸಾವಿಗೀಡಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ. ಜಿಲ್ಲೆಯ ಕವಠೆ ಮಹಾಂಕಲ್‌ನಲ್ಲಿ ವಾಸವಿದ್ದ ಆರ್ಯನ್ ದೀಪಕ್ ಲಾಂಜೆ ಎಂಬ ಹದಹರೆಯದ ಬಾಲಕ ಮೇ 20 ರಂದು ಗಾಯಗೊಂಡು ಮೃತಪಟ್ಟಿದ್ದಾನೆ. ಆದರೆ ಮೂಢನಂಬಿಕೆ … Continued

ದೇವಸ್ಥಾನದ ಬಳಿಯಿದ್ದ ಬೃಹತ್ ಮರ ಉರುಳಿ 7 ಮಂದಿ ಸಾವು, 5 ಮಂದಿಗೆ ಗಾಯ

ಅಕೋಲಾ (ಮಹಾರಾಷ್ಟ್ರ) : ಮಹಾರಾಷ್ಟ್ರದ ಅಕೋಲಾದಲ್ಲಿ ಭಾನುವಾರ ಟಿನ್ ಶೆಡ್‌ನ ಮೇಲೆ ಬೃಹತ್ ಮರವೊಂದು ಬಿದ್ದು ಕನಿಷ್ಠ ಏಳು ಜನರು ಮೃತಪಟ್ಟಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಭಾರೀ ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಹಳೆಯ ಬೇವಿನ ಮರವೊಂದು ತಗಡಿನ ಶೆಡ್‌ನ … Continued

ಇಸ್ಲಾಮಿಕ್ ಸ್ಟೇಟ್ ಸಂಚು ಪ್ರಕರಣ: ಮಹಾರಾಷ್ಟ್ರ, ಮಧ್ಯಪ್ರದೇಶದ 5 ಸ್ಥಳಗಳಲ್ಲಿ ಎನ್‌ಐಎ ಶೋಧ

ನವದೆಹಲಿ: ಭಾರತದಲ್ಲಿ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ನಡೆಸಿದ ಪಿತೂರಿಯನ್ನು ಬಯಲಿಗೆಳೆಯುವ ತನಿಖೆಯ ಭಾಗವಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಮಧ್ಯಪ್ರದೇಶದ ಸಿಯೋನಿಯಲ್ಲಿ ನಾಲ್ಕು ಸ್ಥಳಗಳು ಮತ್ತು ಮಹಾರಾಷ್ಟ್ರದ ಪುಣೆಯ ಸ್ಥಳವನ್ನು ಶೋಧಿಸಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಎನ್‌ಐಎ ತಂಡಗಳು ಪುಣೆಯಲ್ಲಿರುವ ತಲ್ಹಾ ಖಾನ್ ಮತ್ತು ಸಿಯೋನಿಯಲ್ಲಿರುವ ಅಕ್ರಮ್ … Continued

ಬ್ಯಾಂಕ್‌ ಗ್ರಾಹಕರೇ ಎಚ್ಚರ…: 3 ದಿನಗಳಲ್ಲಿ ತಮ್ಮ ಖಾತೆಗಳಿಂದ ಲಕ್ಷಾಂತರ ಹಣ ಕಳೆದುಕೊಂಡ 40 ಜನ !

ನವದೆಹಲಿ : ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಕಳೆದ ಮೂರು ದಿನಗಳಲ್ಲಿ ಒಂದೇ ನಗರದಲ್ಲಿ 40 ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಿಂದ ಲಕ್ಷಾಂತರ ರೂಪಾಯಿಗಳನ್ನ ಕಳೆದುಕೊಂಡಿದ್ದಾರೆ. ಈ ಗ್ರಾಹಕರಿಗೆ ತಮ್ಮ ಕೆವೈಸಿ ಮತ್ತು ಪ್ಯಾನ್ ವಿವರಗಳನ್ನ ನವೀಕರಿಸುವಂತೆ ಕೋರಿ ಲಿಂಕ್ ಕಳುಹಿಸಿದ್ದನ್ನು ಕ್ಲಿಕ್ ಮಾಡಿದ ನಂತರ ಜನರು ಹಣ ಕಳೆದುಕೊಂಡಿದ್ದಾರೆ. ಬ್ಯಾಂಕ್ ಗ್ರಾಹಕರು ತಮ್ಮ … Continued

ಮಹಾರಾಷ್ಟ್ರದಲ್ಲಿ ಮತ್ತೆ ಧ್ವನಿಸಿದ ಕರ್ನಾಟಕ ಸೇರ್ಪಡೆ ಕೂಗು

ಜತ್ :ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಸಿದ್ದನಾಥ ಗ್ರಾಮದ ಕನ್ನಡ ಭಾಷಿಕರು ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಧಿಕ್ಕಾರವಿರಲಿ, ಕರ್ನಾಟಕಕ್ಕೆ ಜಯವಾಗಲಿ ಎಂಬ ಘೋಷಣೆ ಕೂಗಿದರು. ಮಹಾರಾಷ್ಟ್ರ ರಾಜ್ಯದ ಕನ್ನಡ ಭಾಷಿಕರು ಇರುವ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ನೀರಾವರಿ ಸೇರಿದಂತೆ … Continued

ಮಹಾರಾಷ್ಟ್ರ : 13 ಮಂದಿಯನ್ನು ಕೊಂದ ನರಭಕ್ಷಕ ಹುಲಿ ಸೆರೆ

ಗಡ್ಚಿರೋಲಿ: ಮಹಾರಾಷ್ಟ್ರದ ವಿದರ್ಭ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಕಳೆದ 10 ತಿಂಗಳ ಅವಧಿಯಲ್ಲಿ 13 ಜನರನ್ನು ಕೊಂದಿದ್ದ ಹುಲಿಯನ್ನು ರಾಜ್ಯದ ಗಡ್ಚಿರೋಲಿ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಗುರುವಾರ ಸೆರೆ ಹಿಡಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ಸಿಟಿ-1’ ಹೆಸರಿನ ಹುಲಿ ಗಡ್‌ಚಿರೋಲಿಯ ವಾಡ್ಸಾ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿತ್ತು ಹಾಗೂ ಮಾನವ ಜೀವಕ್ಕೆ ಅಪಾಯ ತಂದೊಡ್ಡಿತ್ತು ಎಂದು ಅವರು … Continued

ಮಹಾರಾಷ್ಟ್ರದಲ್ಲಿ ಭಾನುವಾರ ಹೊಸದಾಗಿ 44,388 ಕೊರೊನಾ ಪ್ರಕರಣಗಳು ದಾಖಲು..!

ಮುಂಬೈ: ಭಾನುವಾರ ಮಹಾರಾಷ್ಟ್ರದಲ್ಲಿ 44,388 ಹೊಸ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು 2,02,259 ಕ್ಕೆ ಹೆಚ್ಚಿಸಿದೆ. ಇದೇ ಸಮಯದಲ್ಲಿ ಒಂದು ದಿನದಲ್ಲಿ 12 ಕೋವಿಡ್‌-19 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 1,41,639 ಕ್ಕೆ ಹೆಚ್ಚಳ ಮಾಡಿದೆ. ಒಂದೇ ದಿನದಲ್ಲಿ 15,351 ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು 65,72,432 ಕ್ಕೆ ತಲುಪಿದೆ. ರಾಜ್ಯದಲ್ಲಿ … Continued

ಮುಂಬಯಿನಲ್ಲಿ ಒಂದೇ ದಿನ 10,860 ಹೊಸ ಕೊರೊನಾ ಸೋಂಕು ಪತ್ತೆ; ಮಹಾರಾಷ್ಟ್ರದಲ್ಲಿ 18,466 ಪ್ರಕರಣಗಳು ದಾಖಲು..!

ಮುಂಬಯಿ: ಕೊರೊನಾದ ಮೊದಲೆರಡು ಅಲೆಗಳಲ್ಲಿ ಅತೀ ಹೆಚ್ಚಿನ ಸೋಂಕಿನ ಪ್ರಕರಣಗಳೊಂದಿಗೆ ದೇಶದಲ್ಲೇ ಪ್ರಮುಖ ಹಾಟ್‌ಸ್ಪಾಟ್‌ ಆಗಿ ಗುರುತಿಸಿಕೊಂಡಿದ್ದ ಮುಂಬಯಿ ಮಹಾನಗರಿ ಮೂರನೇ ಅಲೆಯಲ್ಲೂ ಮತ್ತೆ ಹಾಟ್‌ಸ್ಪಾಟ್‌ ಆಗುತ್ತಿದೆ. ಅದೇರೀತಿ ಮಹಾರಾಷ್ಟ್ರ ರಾಜ್ಯವೂ ಕೂಡ. ದೇಶದ ವಾಣಿಜ್ಯ ರಾಜಧಾನಿಯಲ್ಲಿ ಮಂಗಳವಾರ 10,860 ಹೊಸ ಕೇಸ್‌ಗಳು ದೃಢಪಟ್ಟಿದ್ದು ಒಂದೇ ಸಮನೆ ಏರಿಕೆ ಕಂಡಿದೆ. ಸೋಮವಾರ (8,082)ಕ್ಕೆ ಹೋಲಿಸಿದರೆ ಹೊಸ … Continued

ಮಹಾರಾಷ್ಟ್ರದಲ್ಲಿ, ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ; ಗಡಿಭಾಗದ ವರೆಗೆ ಮಾತ್ರ ಬಸ್ ಸಂಚಾರ

ಸಾಂಗ್ಲಿ/ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧದ ಬಿರುಕು ಹೆಚ್ಚಾಗುತ್ತಿದೆ. ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಂಗಡಿಗಳನ್ನೂ ಧ್ವಂಸಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಪರಿಣಾಮ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡಿಗರ ಹಾಗೂ ಕರ್ನಾಟಕದ … Continued

ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್‌ ವಿವಿ ಘಟಿಕೋತ್ಸವದಲ್ಲಿ ಸಚಿವ ನಿರಾಣಿಗೆ ಗೌರವ ಡಾಕ್ಟರೇಟ್ ಪ್ರದಾನ

ಕರಾಡ್ (ಮಹಾರಾಷ್ಟ್ರ): ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಕರಾಡ್ ನ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಡೀಮ್ಡ್‌ ವಿಶ್ವವಿದ್ಯಾಲಯದಲ್ಲಿ ಭಾನುವಾರ ನಡೆದ ಘಟಿಕೋತ್ಸವದಲ್ಲಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಗೌರವ ಡಾಕ್ಟರೇಟ್‌ ಸ್ವೀಕರಿಸಿದರು. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಸಮಾಜಸೇವೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಸೇವೆ … Continued