ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ ಪವಾರ್ ಅವರು ಸೋಲಾಪುರದ ಹಳ್ಳಿಯೊಂದರಲ್ಲಿ ಅಕ್ರಮವಾಗಿ ಮಣ್ಣು ಅಗೆಯುವುದರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಒತ್ತಡ ಹೇರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದ್ದಾರೆ.
ಎರಡು ದಿನಗಳ ಹಿಂದೆ ಸೋಲಾಪುರದ ಕರ್ಮಲಾ ತಾಲೂಕಿನ ಕುರ್ದು ಗ್ರಾಮದಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ, ಅಲ್ಲಿ ಉಪವಿಭಾಗೀಯ ಪೊಲೀಸ್ ಅಧಿಕಾರಿ ಅಂಜನಾ ಕೃಷ್ಣ ಅವರು ರಸ್ತೆ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುವ ಅಕ್ರಮ ‘ಮುರ್ರಮ್’ ಅಗೆಯುವ ಬಗ್ಗೆ ಬಂದ ದೂರುಗಳ ಕುರಿತು ಕ್ರಮ ಕೈಗೊಳ್ಳಲು ಹೋಗಿದ್ದರು.
ಗ್ರಾಮಸ್ಥರು ಸ್ಥಳದಲ್ಲೇ ಅಧಿಕಾರಿಗಳೊಂದಿಗೆ ಘರ್ಷಣೆ ನಡೆಸಿದರು, ಸ್ಥಳೀಯ ಎನ್‌ಸಿಪಿ ಕಾರ್ಯಕರ್ತರು ಇದರಲ್ಲಿ ಮಧ್ಯಪ್ರವೇಶಿಸಿದ ನಂತರ ಅಜಿತ್ ಪವಾರ್ ಪಕ್ಷದ ಕಾರ್ಯಕರ್ತ ಬಾಬಾ ಜಗತಾಪ ಎಂಬವರಿಗೆ ಕರೆ ಮಾಡಿದ ನಂತರ ಅವರು ತಮ್ಮ ಫೋನ್ ಅನ್ನು ಅಂಜನಾ ಕೃಷ್ಣ ಅವರಿಗೆ ನೀಡಿದ್ದು ಕ್ಲಿಪ್‌ನಲ್ಲಿ ಕಂಡುಬಂದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕರು ಹಂಚಿಕೊಂಡಿರುವ ವೀಡಿಯೊದಲ್ಲಿ, ವೈರಲ್ ಆಗಿರುವ ವಿಡಿಯೋದಲ್ಲಿ, ಪವಾರ್, ಎನ್‌ಸಿಪಿ ಕಾರ್ಯಕರ್ತನ ಫೋನ್‌ನಿಂದ ಕರ್ಮಲದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಂಜನಾ ಕೃಷ್ಣ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಆದರೆ, ಮಹಿಳಾ ಅಧಿಕಾರಿ ಅವರ ಧ್ವನಿಯನ್ನು ಗುರುತಿಸಲಿಲ್ಲ. ರಸ್ತೆ ನಿರ್ಮಾಣಕ್ಕೆ ಸಬ್-ಬೇಸ್ ಮತ್ತು ಫಿಲ್ಲಿಂಗ್ ವಸ್ತುವಾಗಿ ವ್ಯಾಪಕವಾಗಿ ಬಳಸಲಾಗುವ ಕೆಂಪು ಮಣ್ಣಿನ ಅಕ್ರಮ ಅಗೆತದ ವಿರುದ್ಧದ ಕ್ರಮ ಕೈಗೊಳ್ಳುವುದನ್ನು ನಿಲ್ಲಿಸುವಂತೆ ಪವಾರ್ ಅಧಿಕಾರಿಗೆ ಹೇಳಿತ್ತಿರುವುದು ಕೇಳಿಬರುತ್ತಿದೆ.
ವೀಡಿಯೊದಲ್ಲಿ, ಅಜಿತ್ ಪವಾರ್, “ನಿಮ್ಮೊಂದಿಗೆ ಮಾತನಾಡುತ್ತಿರುವುದು ಉಪಮುಖ್ಯಮಂತ್ರಿ… ಕ್ರಮವನ್ನು ನಿಲ್ಲಿಸಲು ನಾನು ನಿಮಗೆ ಆದೇಶಿಸುತ್ತೇನೆ… ಎಂದು ಹೇಳುತ್ತಿರುವುದು ಕೇಳಿಬರುತ್ತಿದೆ.
ಐಪಿಎಸ್ ಅಧಿಕಾರಿ ಉಪಮುಖ್ಯಮಂತ್ರಿ ಅಜಿತ ಪವಾರ್ ಅವರ ಧ್ವನಿಯನ್ನು ಗುರುತಿಸದ ಕಾರಣ ಅವರಿಗೆ ತಮ್ಮ ಮೊಬೈಲ್ ಫೋನ್ ಗೆ ನೇರವಾಗಿ ಕರೆ ಮಾಡುವಂತೆ ಅಂಜನಾ ಕೃಷ್ಣ ಹೇಳಿದಾಗ ಅದು ಅಜಿತ್ ಪವಾರ್ ಅವರನ್ನು ಕೆರಳಿಸಿತು. ನಂತರ ಅವರು, “ಏಕ್ ಮಿನಿಟ್, ಮೈನ್ ತೇರೆ ಉಪರ್ ಆಕ್ಷನ್ ಲುಂಗಾ (ಒಂದು ನಿಮಿಷ … ನಾನು ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ)” ಎಂದು ಹೇಳಿದರು.
“ನಾನೇ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಮತ್ತು ನೀವು ತನಗೆ ನೇರವಾಗಿ ಕರೆ ಮಾಡಲು ನನಗೆ ಹೇಳುತ್ತಿದ್ದೀರಿ. ನೀವು ನನ್ನ ಸಂಖ್ಯೆ ತೆಗೆದುಕೊಂಡು ಕಾಲ್ ಮಾಡಿ… ನೀವು ನನ್ನ ಮುಖ ನೋಡಿ ಗುರುತಿಸುತ್ತೀರಾ ? ನನ್ನೊಂದಿಗೆ ಈ ರೀತಿ ಮಾತನಾಡಲು ನಿಮಗೆಷ್ಟು ಧೈರ್ಯ ? ನಿಮ್ಮ ಸಂಖ್ಯೆಯನ್ನು ನನಗೆ ನೀಡಿ, ನಾನು ನಿಮಗೆ ನೇರವಾಗಿ ಕರೆ ಮಾಡುತ್ತೇನೆ ಎಂದು ಪವಾರ್ ಹೇಳಿದ್ದಾರೆ. ನಂತರ ಅವರಿಗೇ ನೇರವಾಗಿ ಕರೆ ಮಾಡಿದ್ದಾರೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಅಜಿತ ಪವಾರ್ ಅವರನ್ನು ಸಮರ್ಥಿಸಿಕೊಂಡಿದ್ದು, ಅವರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದೆ. “ಪಕ್ಷದ ಕಾರ್ಯಕರ್ತರನ್ನು ಸಮಾಧಾನಪಡಿಸಲು ಅಜಿತ್ ಪವಾರ್ ಅವರು ಐಪಿಎಸ್ ಅಧಿಕಾರಿಯನ್ನು ಗದರಿಸಿರಬಹುದು. ಅವರು ಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸುವ ಉದ್ದೇಶ ಹೊಂದಿರಲಿಲ್ಲ” ಎಂದು ಪಕ್ಷದ ಮುಖ್ಯಸ್ಥ ಸುನಿಲ್ ತತ್ಕರೆ ಹೇಳಿದ್ದಾರೆ. ಪವಾರ್ ಎಂದಿಗೂ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವುದಿಲ್ಲ ಎಂದು ಒತ್ತಿ ಹೇಳಿದರು.
ಪಕ್ಷದ ವಕ್ತಾರ ಆನಂದ ಪರಾಂಜಪೆ ಅವರು, ಈ ವೀಡಿಯೊಕ್ಕೆ ತಪ್ಪು ಬಣ್ಣ ನೀಡಲಾಗುತ್ತಿದೆ ಎಂದು ಹೇಳಿದರು.”ಪ್ರಜಾಪ್ರಭುತ್ವದಲ್ಲಿ, ಕಾರ್ಯಕರ್ತರ ಕುಂದುಕೊರತೆಗಳು ಸಹ “ಪವಾರ್ ಅವರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿದ್ದಾರೆ. ಕ್ಲಿಪ್ ಅನ್ನು ತಪ್ಪಾಗಿ ನಿರೂಪಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.ಪವಾರ್ ಅವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಕ್ಲಿಪ್ ಅನ್ನು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಲಾಗಿದೆ ಎಂದು ಎನ್‌ಸಿಪಿ ಆರೋಪಿಸಿದೆ.
ರಸ್ತೆ ನಿರ್ಮಾಣ ಯೋಜನೆಗೆ ಸಂಬಂಧಿಸಿ ಮುರುಮ್ (ಕೆಂಪು ಮಣ್ಣು) ಅಕ್ರಮವಾಗಿ ಅಗೆಯಲಾಗುತ್ತಿದೆ ಎಂಬ ದೂರುಗಳ ಬಗ್ಗೆ ತನಿಖೆ ಮಾಡಲು ಅಂಜನಾ ಕೃಷ್ಣ ಅಲ್ಲಿಗೆ ಹೋದಾಗ ನಡೆದ ಈ ಘಟನೆಯನ್ನು ಸಹ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.
ಎನ್‌ಸಿಪಿ ಕಾರ್ಯಕರ್ತ ಬಾಬಾ ಜಗತಾಪ ಎಂಬವರು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಕರೆ ಮಾಡಿ ಅಧಿಕಾರಿ ಅಂಜನಾ ಕೃಷ್ಣ ಅವರಿಗೆ ಫೋನ್ ನೀಡಿದ ನಂತರ ಇದು ನಡೆದಿದೆ ಎನ್ನಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ