ಗಾರ್ಡ್ ಬಚಾವ್‌ ಮಾಡಿದ ನಂತ್ರ ಮತ್ತೆ ಹೋಗಿ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಸೋಲಾಪುರ: ಮಹಾರಾಷ್ಟ್ರದ ಸೋಲಾಪುರದ ಪ್ರಸಿದ್ಧ ಉದ್ಯಮಿ ಹಾಗೂ ಜನಪ್ರಿಯ ‘ಮುಲ್ತಾನಿ ಬೇಕರಿ’ಯ ಮಾಲೀಕ ಕಟ್ಟಡವೊಂದರ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ರಸ್ತೆಯಲ್ಲಿರುವ ‘ಪನಾಶ್ ಅಪಾರ್ಟ್‌ಮೆಂಟ್’ನಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿಯ ಪ್ರಕಾರ,  ಮಧ್ಯಾಹ್ನದ ವೇಳೆಗೆ ಅಪಾರ್ಟ್‌ಮೆಂಟ್‌ಗೆ ಬಂದಿದ್ದರು. ಲಿಫ್ಟ್ ಬಳಸುವ ಬದಲಿಗೆ ಮೆಟ್ಟಿಲುಗಳ ಮೂಲಕ ನೇರವಾಗಿ 17ನೇ … Continued

ಅಕ್ರಮ ಮಣ್ಣು ಅಗೆತ ಪ್ರಕರಣ ; ಮಹಾರಾಷ್ಟ್ರ ಡಿಸಿಎಂ ಅಜಿತ ಪವಾರ್ ಮಹಿಳಾ ಐಪಿಎಸ್ ಅಧಿಕಾರಿಗೆ ಗದರಿಸುತ್ತಿರುವ ವೀಡಿಯೊ ವೈರಲ್

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಅಜಿತ ಪವಾರ್ ಅವರು ಸೋಲಾಪುರದ ಹಳ್ಳಿಯೊಂದರಲ್ಲಿ ಅಕ್ರಮವಾಗಿ ಮಣ್ಣು ಅಗೆಯುವುದರ ವಿರುದ್ಧ ಕ್ರಮ ಕೈಗೊಳ್ಳದಂತೆ ಮಹಿಳಾ ಐಪಿಎಸ್ ಅಧಿಕಾರಿಯ ಮೇಲೆ ಒತ್ತಡ ಹೇರುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಸಿಲುಕಿದ್ದಾರೆ. ಎರಡು ದಿನಗಳ ಹಿಂದೆ ಸೋಲಾಪುರದ ಕರ್ಮಲಾ ತಾಲೂಕಿನ … Continued