ಶಾಸಕರ ಒಟ್ಟು ಆಸ್ತಿ | ಕರ್ನಾಟಕವೇ ನಂ.1 ; ದೇಶದ ಟಾಪ್ 10 ಶ್ರೀಮಂತ ಶಾಸಕರಲ್ಲಿ ಡಿಕೆ ಶಿವಕುಮಾರಗೆ ಎಷ್ಟನೇ ಸ್ಥಾನ ಗೊತ್ತೆ..? ಪಟ್ಟಿ ಇಲ್ಲಿದೆ…

ನವದೆಹಲಿ: ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ಬಿಡುಗಡೆ ಮಾಡಿದ ವರದಿಯ ಪ್ರಕಾರ ಮುಂಬೈನ ಘಾಟಕೋಪಾರ ಪೂರ್ವ ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿಯ ಶಾಸಕ ಪರಾಗ್ ಶಾ ಅವರು ಭಾರತದ ಶ್ರೀಮಂತ ಶಾಸಕರಾಗಿದ್ದಾರೆ ಹಾಗೂ ಕರ್ನಾಟಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ದೇಶದ ಎರಡನೇ ಶ್ರೀಮಂತ ಶಾಸಕರಾಗಿದ್ದಾರೆ. ಮುಂಬೈನ ಶಾಸಕ ಪರಾಗ್ ಶಾ ಸುಮಾರು 3,400 … Continued

ಮಹಾರಾಷ್ಟ್ರ : ಜಾತ್ರೆಯಲ್ಲಿ ಕೇಂದ್ರ ಸಚಿವರ ಮಗಳಿಗೆ ಕೆಲವರಿಂದ ಕಿರುಕುಳ : ಓರ್ವನ ಬಂಧನ

ಮುಂಬೈ: ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಜಾತ್ರೆಯಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕೆಲವರು ಕಿರುಕುಳ ನೀಡಿದ ನಂತರ ಕೇಂದ್ರ ಸಚಿವರೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವೆ ಮತ್ತು ಬಿಜೆಪಿ ನಾಯಕಿ ರಕ್ಷಾ ಖಡ್ಸೆ ಭಾನುವಾರ ಈ ಸಂಬಂಧ ದೂರು ನೀಡಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಪ್ರತಿ … Continued

ಇದೆಂಥ ಮೂಢನಂಬಿಕೆ | ಅನಾರೋಗ್ಯವೆಂದು ಕೇವಲ 22 ದಿನಗಳ ಹಸುಳೆಗೆ 65 ಕಡೆ ಬರೆ ಹಾಕಿದರು…!

ಅಮರಾವತಿ: ಮೂಢನಂಬಿಕೆಯ ಅತಿರೇಕದ ಪ್ರಕರಣವೊಂದರಲ್ಲಿ 22 ದಿನಗಳ ಹಸುಳೆಗೆ 65 ಬಾರಿ ಬರೆ ಹಾಕಿದ ಪ್ರಕರಣವೊಂದು ಬೆಳಕಿಗೆ ಬಂದಿದೆ…!! ಈ ಘಟನೆ ಮಂಗಳವಾರ ಮಹಾರಾಷ್ಟ್ರದ ಅಮರಾವತಿಯ ಚಿಕಲ್ದಾರ ತಾಲೂಕಿನ ಸೀಮೋರಿ ಗ್ರಾಮದಲ್ಲಿ ನಡೆದಿದ್ದು, ಉಸಿರಾಟದ ತೊಂದರೆಗೆ ಸಾಂಪ್ರದಾಯಿಕ ಚಿಕಿತ್ಸೆ ನೀಡುವ ಹೆಸರಿನಲ್ಲಿ ಕುಡುಗೋಲು ಬಿಸಿ ಮಾಡಿ 65 ಬಾರಿ ಬರೆ ಹಾಕಲಾಗಿದೆ. ಈ ಅಮಾನವೀಯ ಕೃತ್ಯದಿಂದ … Continued

ಮಹಾರಾಷ್ಟ್ರ- ಕರ್ನಾಟಕದ ನಡುವೆ ಬಸ್‌ ಸಂಚಾರ ಸ್ಥಗಿತ

ಬೆಳಗಾವಿ : ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಕೆಲವು ಮರಾಠಿ ಭಾಷಿಕರು ಹಲ್ಲೆ ನಡೆಸಿದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಂಡಕ್ಟರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ. ಇದು ರಾಜಕೀಯ ಪ್ರೇರಿತವಾದದ್ದು, ಕೂಡಲೇ ಈ ಕೇಸನ್ನು ವಾಪಸ್ ಪಡೆಯಬೇಕೆಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಶಿವಸೇನೆ ಪ್ರತಿಭಟನೆ ಮಾಡುತ್ತಿದೆ. … Continued

ವೀಡಿಯೊ…| ಪಂದ್ಯ ಸೋತ ನಂತರ ರೆಫರಿ ಎದೆಗೆ ಒದ್ದ ಕುಸ್ತಿಪಟು….! ವೀಡಿಯೊ ವೈರಲ್‌

ಮುಂಬೈ : 67ನೇ ‘ಮಹಾರಾಷ್ಟ್ರ ಕೇಸರಿ’ ಕುಸ್ತಿ ಸ್ಪರ್ಧೆಯ ಅಂತಿಮ ಪಂದ್ಯವು ಆಘಾತಕಾರಿ ಘಟನೆಗೆ ಸಾಕ್ಷಿಯಾಗಿದೆ. ಸೋತ ಕುಸ್ತಿಪಟು ರೆಫರಿಯ ಎದೆಯ ಮೇಲೆ ಒದ್ದ ಘಟನೆ ನಡೆದಿದೆ. ಮತ್ತು ಇನ್ನೊಬ್ಬ ಕುಸ್ತಿಪಟು ಅಂಕಗಳನ್ನು ಕಳೆದುಕೊಂಡಿದ್ದಕ್ಕಾಗಿ ರೆಫರಿಯನ್ನು ನಿಂದಿಸಿದ ವಿದ್ಯಮಾನವೂ ನಡೆದಿದೆ. ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ ಪವಾರ್ ಮತ್ತು ಕೇಂದ್ರ ಸಚಿವ ಮುರಳೀಧರ ಮೊಹೋಲ್ ಅವರ ಸಮ್ಮುಖದಲ್ಲಿ … Continued

ಸೈಫ್ ಅಲಿ ಖಾನ್ ಇರಿತ ಪ್ರಕರಣ | ಮುಖ ಗುರುತಿಸುವಿಕೆ ಪರೀಕ್ಷೆ ; ಸಿಸಿಟಿವಿಯಲ್ಲಿ ದಾಖಲಾಗಿದ್ದು ಬಂಧಿತ ಆರೋಪಿಯೇ ಎಂದ ಪೊಲೀಸರು

ಮುಂಬೈ: ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ಚೂರಿ ಇರಿತ ಪ್ರಕರಣದ ಆರೋಪಿ ಮೊಹಮ್ಮದ್ ಷರೀಫುಲ್ ಇಸ್ಲಾಂ ಅಪರಾಧದ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ವ್ಯಕ್ತಿಯೇ ಎಂದು ಮುಖ ಗುರುತಿಸುವಿಕೆ ತಂತ್ರಜ್ಞಾನವು ದೃಢಪಡಿಸಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಮುಂಬೈ ಪೊಲೀಸರ ಪ್ರಕಾರ, ಆರೋಪಿಯ ಮುಖ ಗುರುತಿಸುವಿಕೆ ಪರೀಕ್ಷೆಯನ್ನು ನಡೆಸಲಾಯಿತು ಮತ್ತು ಅದು … Continued

ಪವಾಡ…| 13ನೇ ಅಂತಸ್ತಿನಿಂದ ಕೆಳಗೆ ಬಿದ್ದ ಮಗುವನ್ನು ಪವಾಡಸದೃಶ ರೀತಿಯಲ್ಲಿ ಬಚಾವ್‌ ಮಾಡಿದ ಯುವಕ ; ವೀಡಿಯೊ ವೈರಲ್

ಥಾಣೆ: ಥಾಣೆಯ ಡೊಂಬಿವಲಿಯಲ್ಲಿ 13ನೇ ಮಹಡಿಯ ಫ್ಲಾಟ್‌ನಿಂದ ಎರಡು ವರ್ಷದ ಮಗುವೊಂದು ಬಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದು, ವ್ಯಕ್ತಿಯ ಜಾಗರೂಕತೆಯಿಂದ ಇದು ನಡೆದಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಯುವಕನ ಪ್ರಯತ್ನಕ್ಕೆ ಭಾರಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರನ್ನು ನಿಜ ಜೀವನದ ಹೀರೋ ಎಂದು ಕೊಂಡಾಡಿದ್ದಾರೆ. ಕಳೆದ ವಾರ ಡೊಂಬಿವಲಿಯ … Continued

ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ ; 8 ಮಂದಿ ಸಾವು : 5 ಕಿಮೀ ದೂರದ ವರೆಗೆ ಕೇಳಿದ ಸ್ಫೋಟದ ಸದ್ದು

ಮುಂಬೈ: ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯಲ್ಲಿ ನಾಗ್ಪುರ ಬಳಿಯ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಶುಕ್ರವಾರ ಬೆಳಿಗ್ಗೆ ಭಾರೀ ಸ್ಫೋಟ ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಧ್ಯಾಹ್ನ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾವನ್ನು ಖಚಿತಪಡಿಸಿದ್ದಾರೆ. “ಭಂಡಾರಾದಲ್ಲಿ, ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ, ದೊಡ್ಡ ಅನಾಹುತ ಸಂಭವಿಸಿದೆ, ಇದರ ಪರಿಣಾಮವಾಗಿ … Continued

ರೈಲಿನಲ್ಲಿ ಬೆಂಕಿ ವದಂತಿ | ರೈಲಿನಿಂದ ಜಿಗಿದು ಪಕ್ಕದ ಹಳಿ ಮೇಲೆ ನಿಂತಿದ್ದವರ ಮೇಲೆ ಹರಿದ ಮತ್ತೊಂದು ರೈಲು; 11 ಮಂದಿ ಸಾವು

ಮುಂಬೈ : ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ರೈಲಿನಡಿ ಸಿಲುಕಿ ಹನ್ನೊಂದು ಜನರು ಸಾವಿಗೀಡಾಗಿದ್ದಾರೆ. ಮಹಾರಾಷ್ಟ್ರದ ಜಲಗಾಂವ್​​ ಬಳಿ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಲಕ್ನೋದಿಂದ ಮುಂಬೈಗೆ ತೆರಳುತ್ತಿದ್ದ ಪುಷ್ಪಕ​ ಎಕ್ಸ್​ಪ್ರೆಸ್​ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ವದಂತಿ ಹರಡಿದ ನಂತರ ಹೆದರಿದ ಪ್ರಯಾಣಿಕರು ಚಲಿಸುವ ರೈಲಿನಿಂದ ಜಿಗಿದು ಮತ್ತೊಂದು ರೈಲು ಹೇಳಿ ಮೇಲೆ ನಿಂತವರಿಗೆ ಮತ್ತೊಂದು ರೈಲು … Continued

ಅಪ್ಪ ಸ್ಮಾರ್ಟ್‌ಫೋನ್ ಕೊಡಿಸಲಿಲ್ಲ ಎಂದು ಮಗ ಆತ್ಮಹತ್ಯೆ ; ಮನನೊಂದು ತಂದೆಯೂ ಅದೇ ಹಗ್ಗದಿಂದ ಬಿಗಿದುಕೊಂಡು ಆತ್ಮಹತ್ಯೆ…!

ಮುಂಬೈ : 16 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು, ರೈತನಾಗಿರುವ ತಂದೆ ತನ್ನ ಮಗನ ಆಸೆ ಈಡೇರಿಸಲು ಸಾಧ್ಯವಾಗದ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ನೋವಿನಿಂದ ತಾನೂ ಅದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. … Continued