ವಿಡಿಯೋ | ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯೆ-ಸಿಬ್ಬಂದಿ ಮೇಲೆ ಕಾರ್ಪೊರೇಟರ್ ಹಲ್ಲೆ

ಮುಂಬೈ: ಮುಂಬೈ ಸಮೀಪದ ಥಾಣೆ ಜಿಲ್ಲೆಯ ಡೊಂಬಿವ್ಲಿಯ ಕೆಡಿಎಂಸಿ (KDMC) ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಯ ಮೇಲೆ ಸ್ಥಳೀಯ ರಾಜಕೀಯ ನಾಯಕ ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. … Continued

ಶಾಲೆಯ ಟಾಯ್ಲೆಟ್ಟಿನಲ್ಲಿ ರಕ್ತದ ಕಲೆ ಕಂಡುಬಂದಿದ್ದಕ್ಕೆ ಮುಟ್ಟಾದ ಹುಡುಗಿಯ ಪತ್ತೆಗೆ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದರು…!!

ಥಾಣೆ : ಋತುಮತಿಯಾದ (Periods) ವಿದ್ಯಾರ್ಥಿನಿಯನ್ನು ಪತ್ತೆ ಹಚ್ಚುವ ಸಲುವಾಗಿ ಶಿಕ್ಷಕರು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರ ಬಟ್ಟೆ, ಒಳಉಡುಪುಗಳನ್ನು ಬಿಚ್ಚಿಸಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ (Maharastra) ಥಾಣೆಯ ಶಹಪೂರದ ಶಾಲೆಯೊಂದರಲ್ಲಿ ನಡೆದಿದೆ. ಈ ಸಂಬಂಧ ಥಾಣೆಯಲ್ಲಿರುವ ಖಾಸಗಿ ಶಾಲೆಯ ಪ್ರಾಂಶುಪಾಲರು ಮತ್ತು ಇನ್ನೊಬ್ಬ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ (ಜುಲೈ 10) … Continued

ಪವಾಡ…| 13ನೇ ಅಂತಸ್ತಿನಿಂದ ಕೆಳಗೆ ಬಿದ್ದ ಮಗುವನ್ನು ಪವಾಡಸದೃಶ ರೀತಿಯಲ್ಲಿ ಬಚಾವ್‌ ಮಾಡಿದ ಯುವಕ ; ವೀಡಿಯೊ ವೈರಲ್

ಥಾಣೆ: ಥಾಣೆಯ ಡೊಂಬಿವಲಿಯಲ್ಲಿ 13ನೇ ಮಹಡಿಯ ಫ್ಲಾಟ್‌ನಿಂದ ಎರಡು ವರ್ಷದ ಮಗುವೊಂದು ಬಿದ್ದರೂ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದು, ವ್ಯಕ್ತಿಯ ಜಾಗರೂಕತೆಯಿಂದ ಇದು ನಡೆದಿದೆ. ಈ ಕೃತ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಯುವಕನ ಪ್ರಯತ್ನಕ್ಕೆ ಭಾರಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಅವರನ್ನು ನಿಜ ಜೀವನದ ಹೀರೋ ಎಂದು ಕೊಂಡಾಡಿದ್ದಾರೆ. ಕಳೆದ ವಾರ ಡೊಂಬಿವಲಿಯ … Continued

ಆಘಾತಕಾರಿ ವೀಡಿಯೊ | ಕೌಟುಂಬಿಕ ಕಲಹಕ್ಕೆ ರಸ್ತೆ ರಂಪಾಟ : ಮಗು ಜತೆ ಮಹಿಳೆ ಕುಳಿತಿದ್ದ ಕಾರಿಗೆ ತನ್ನ ಕಾರಿನಿಂದ 2 ಸಲ ಡಿಕ್ಕಿ ಹೊಡೆದ ವ್ಯಕ್ತಿ ; ನಾಲ್ವರಿಗೆ ಗಾಯ

ಮುಂಬೈ : ಕೌಟುಂಬಿಕ ಕಲಹದ ಕಾರಣಕ್ಕೆ ಕಾರು ಚಾಲಕನೊಬ್ಬ ತನ್ನ ವಾಹನವನ್ನು ಮತ್ತೊಂದು ಕಾರಿಗೆ ಎರಡು ಬಾರಿ ಡಿಕ್ಕಿ ಹೊಡೆಸಿದ ಘಟನೆಯಲ್ಲಿ ನಾಲ್ವರು ಗಾಯಗೊಂಡ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ವರದಿಯಾಗಿದೆ. ಘಟನೆ ಥಾಣೆ ಜಿಲ್ಲೆಯ ಅಂಬರನಾಥ್-ಬದ್ಲಾಪುರ ರಸ್ತೆಯಲ್ಲಿ ನಡೆದಿದ್ದು, ಇದರ ವೀಡಿಯೋ ವೈರಲ್ ಆಗಿದೆ. ಕಪ್ಪು ಬಣ್ಣದ ಎಸ್‌ಯುವಿ ಜನನಿಬಿಡ … Continued

ಥಾಣೆಯಲ್ಲಿ 4 ವರ್ಷದ ಇಬ್ಬರು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧ ಬೃಹತ್ ಪ್ರತಿಭಟನೆ ; ಪೊಲೀಸರಿಂದ ಲಾಠಿ ಚಾರ್ಜ್‌

ಮುಂಬೈ: ಶಾಲೆಯೊಂದರಲ್ಲಿ ನಾಲ್ಕು ವರ್ಷದ ಇಬ್ಬರು ಪುಟ್ಟ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಥಾಣೆಯಲ್ಲಿ ಬೃಹತ್ ಪ್ರತಿಭಟನೆ ನಡೆದಿದ್ದು, ಪೊಲೀಸರು ಲಾಠಿ ಮತ್ತು ಅಶ್ರುವಾಯು ಮೂಲಕ ಜನರ ಗುಂಪನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪೊಲೀಸರ ಲಾಠಿ ಚಾರ್ಜ್‌ ನಂತರ ಆರು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಜನರಿಂದ ತುಂಬಿ ತುಳುಕುತ್ತಿದ್ದ … Continued

ವೀಡಿಯೊ | ಧೈರ್ಯ ಅಂದ್ರೆ ಇದಪ್ಪ..: ಪಿಸ್ತೂಲ್‌ ಹಿಡಿದು ಚಿನ್ನದ ಅಂಗಡಿ ಲೂಟಿಗೆ ನುಗ್ಗಿದ್ದ 4 ದರೋಡೆಕೋರರನ್ನು ಹೆದರಿಸಿದ ಒಬ್ಬನೇ ಒಬ್ಬ..!

ಮುಂಬೈ : ಬುಧವಾರ ಥಾಣೆ ನಗರದ ಆಭರಣ ಅಂಗಡಿಯೊಂದರಲ್ಲಿ ದರೋಡೆಗೆ ಯತ್ನಿಸಿದ್ದ ನಾಲ್ವರು ಶಸ್ತ್ರ ಸಜ್ಜಿತ ದರೋಡೆಕೋರರನ್ನು ಕೆಚ್ಚೆದೆಯ ಅಂಗಡಿ ಮಾಲೀಕ ಎದುರಿಸಿ ದರೋಡೆ ಯತ್ನವನ್ನು ವಿಫಲಗೊಳಿಸಿದ್ದಾರೆ. ಅಂಗಡಿಲ್ಲಿ ತಾವೊಬ್ಬರೇ ಇದ್ದರೂ ಹೆದರದೆ ಪಿಸ್ತೂಲು ಹಿಡಿದು ಬಂದಿದ್ದ ನಾಲ್ವರು ದರೋಡೆಕೋರರನ್ನು ಎದುರಿಸಿ ಅವರನ್ನು ದೊಣ್ಣೆಯಿಂದ ಹೊಡೆದು ಗಾಯಗೊಳಿಸಿದ್ದಾರೆ. ದರೋಡೆಕೋರರು ಎರಡು ಮೋಟಾರ್ ಸೈಕಲ್‌ಗಳಲ್ಲಿ ಅಂಗಡಿಗೆ ಬಂದಿದ್ದರು. … Continued

ವೀಡಿಯೊ..| ಸಿಕ್ಸರ್‌ ಬಾರಿಸಿದ ಕೆಲವೇ ಸೆಕೆಂಡುಗಳಲ್ಲಿ ಕುಸಿದುಬಿದ್ದು ಮೈದಾನದಲ್ಲೇ ಪ್ರಾಣಬಿಟ್ಟ ಕ್ರಿಕೆಟ್‌ ಆಟಗಾರ

ಥಾಣೆ: ಆಟದ ವೇಳೆ ಕ್ರೀಸ್‌ ಬಿಟ್ಟು ಮುನ್ನುಗ್ಗಿ ಸಿಕ್ಸರ್‌ ಬಾರಿಸಿದ ಕೆಲವೇ ಸೆಕೆಂಡುಗಳಲ್ಲೇ ಹೃದಯಾಘಾತ (Heart Attack) ಸಂಭವಿಸಿ ಕ್ರಿಕೆಟ್‌ ಆಟಗಾರನೊಬ್ಬ (Cricketer) ಮೈದಾನದಲ್ಲೇ ಪ್ರಾಣಬಿಟ್ಟ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅವರು ಕ್ರೀಸ್‌ನಿಂದ ಒಂದು ಅಡಿ ಮುಂದೆ ಬಂದು ಪಾರ್ಕ್‌ನಿಂದ ಚೆಂಡನ್ನು ಸಿಕ್ಸರ್‌ಗೆ ಹೊಡೆದರು. ನಂತರ ಕುಸಿದು ಬಿದ್ದು ಸಾವಿಗೀಡಾದ್ದಾರೆ. ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ … Continued

ವೀಡಿಯೊ…| ಪ್ರಧಾನಿ ಮೋದಿಯಿಂದ ಅಟಲ್ ಸೇತು ಉದ್ಘಾಟನೆ : ಭಾರತದ ಅತಿ ಉದ್ದದ ಸಮುದ್ರ ಸೇತುವೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು….

ಮುಂಬೈ: ಭಾರತದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (MTHL) ಅಥವಾ ಅಟಲ್ ಸೇತುವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಈ ಸೇತುವೆಗೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡಲಾಗಿದೆ. 21.8 ಕಿಮೀ ಉದ್ದ ಮತ್ತು ಆರು ಲೇನ್‌ಗಳನ್ನು ಹೊಂದಿರುವ ಈ ಸೇತುವೆಯನ್ನು … Continued

ಮಹಿಳೆಯ ಮೇಲೆ ಕಾರು ಚಲಾಯಿಸಿದ ಆರೋಪ: ಹಿರಿಯ ಅಧಿಕಾರಿಯ ಪುತ್ರನ ಬಂಧನ

ಮುಂಬೈ: ಈ ವಾರದ ಆರಂಭದಲ್ಲಿ ಥಾಣೆಯಲ್ಲಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಮಹಿಳೆಯನ್ನು ಗಾಯಗೊಳಿಸಿದ ಆರೋಪದ ಮೇಲೆ ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಮಗ ಸೇರಿದಂತೆ ಮೂವರನ್ನು ಭಾನುವಾರ ತಡರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನಿಲ ಗಾಯಕ್ವಾಡ್ ಅವರ ಪುತ್ರ ಅಶ್ವಜಿತ್ ಗಾಯಕ್ವಾಡ್ ಮತ್ತು ರೊಮಿಲ್ … Continued

ರುಚಿಕರ ಆಹಾರ ನೀಡಿಲ್ಲವೆಂದು ತಾಯಿಯನ್ನೇ ಕೊಂದ ಮಗ….!

ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವ್ಯಕ್ತಿಯೊಬ್ಬರು ತನಗೆ ಬೇಕಾದ ರುಚಿಕರವಾದ ಆಹಾರ ನೀಡಿಲ್ಲ ಎಂಬ ಕಾರಣಕ್ಕೆ ತಾಯಿಯೊಂದಿಗೆ ಜಗಳವಾಡಿದ ನಂತರ 55 ವರ್ಷದ ತಾಯಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಮುರ್ಬಾದ್ ತಾಲೂಕಿನ ವೇಲು ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದೆ ಎಂದು ಥಾಣೆ ಗ್ರಾಮಾಂತರ ಪೊಲೀಸ್ ನಿಯಂತ್ರಣ ಕೊಠಡಿಯ ಅಧಿಕಾರಿ ತಿಳಿಸಿದ್ದಾರೆ. … Continued