ಬೀರೂರು : ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿಯರು

ಚಿಕ್ಕಮಗಳೂರು :   ಜಿಲ್ಲೆಯ ಬೀರೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ತಂದೆಯ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ ಎಂದು ವರದಿಯಾಗಿದೆ. ಮನೆಯಲ್ಲಿ ಹಿರಿಯರು ಮೃತಪಟ್ಟರೆ ಅಂತ್ಯ ಸಂಸ್ಕಾರ (funeral) ಹಾಗೂ ದೇಹಕ್ಕೆ ಅಗ್ನಿಸ್ಪರ್ಶ ಮಾಡುವ ವಿಧಿ-ವಿಧಾನಗಳನ್ನು ಸಾಮಾನ್ಯವಾಗಿ ಗಂಡು ಮಕ್ಕಳೇ ಮಾಡುವುದು ವಾಡಿಕೆಯಾಗಿ ಬಂದಿದೆ. ಆದರೆ ಇಲ್ಲಿ ಮೃತರ ಇಬ್ಬರು ಪುತ್ರಿಯರೇ ತಮ್ಮ ತಂದೆಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಬೀರೂರಿನಲ್ಲಿ … Continued

ನೀಟ್ ಪರೀಕ್ಷೆ ಬರೆ ಎಂದಿದ್ದಕ್ಕೆ ತಂದೆಯನ್ನೇ ಕೊಂದ ಮಗ…! ತಂಗಿಯ ಎದುರೇ ದೇಹ ಕತ್ತರಿಸಿ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದ…!

ಲಕ್ನೋ: ತಂದೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ಯುವಕನೊಬ್ಬನನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಲಕ್ನೋ ನಗರದ ಆಶಿಯಾನಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಸ್ಥಳೀಯ ಉದ್ಯಮಿ ಮಾನ್ವೇಂದ್ರ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದೆ. ಫೆಬ್ರವರಿ 20 ರಿಂದ ಮಾನ್ವೇಂದ್ರ ಅವರು ನಾಪತ್ತೆಯಾಗಿದ್ದರು. ಪೊಲೀಸರ ತೀವ್ರ ಶೋಧದ ನಂತರ ಅವರ ಮೃತದೇಹ ಪತ್ತೆಯಾಗಿದ್ದು, ಮಗ … Continued

ಅಂಗಲ ವೈಕಲ್ಯ ಗರ್ಭಿಣಿ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣ : 17 ಜನರ ಡಿಎನ್‌ಎ ಪರೀಕ್ಷೆ ; ತಂದೆ ಡಿಎನ್‌ಎ ಹೊಂದಾಣಿಕೆ

ಮುಂಬೈ : 20 ವರ್ಷದ ಅಂಗವಿಕಲ ಮಹಿಳೆಯೊಬ್ಬಳ ಡಿಎನ್ಎ ಪರೀಕ್ಷೆಗಳು ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ, ತಂದೆಯೇ ಆಕೆಯ ಸಾಮೂಹಿಕ ಅತ್ಯಾಚಾರದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ವರ್ಷ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆದಿದ್ದು, ಸೆಪ್ಟೆಂಬರ್‌ನಲ್ಲಿ ಮಹಿಳೆ ಐದು ತಿಂಗಳ ಗರ್ಭಿಣಿಯಾಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. NDTV ಪ್ರಕಾರ, ಪೊಲೀಸರು ಈ … Continued

ಪತ್ನಿ ಜೊತೆ ಜಗಳದ ನಂತರ ಅವಳಿ ಮಕ್ಕಳನ್ನು ಬರ್ಬರವಾಗಿ ಕೊಲೆಗೈದ ತಂದೆ…!

ವಾಶಿಮ್: ದಂಪತಿಯ ಕಲಹಕ್ಕೆ ಪುಟ್ಟ ಕಂದಮ್ಮಗಳಿಬ್ಬರು ಸಾವಿಗೀಡಾದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡಿದ ಬಳಿಕ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಂದ ವ್ಯಕ್ತಿ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗತನಾಗಿದ್ದಾನೆ. ಮಕ್ಕಳಿಬ್ಬರನ್ನು ಕೊಂದ ಬಳಿಕ ಆರೋಪಿ ಕಾರು ಚಲಾಯಿಸಿಕೊಂಡು ಪೊಲೀಸ್ ಠಾಣೆಗೆ ಕಾರು ಹೋಗಿದ್ದು, ಅಲ್ಲಿ ತಾನು ತನ್ನ ಹೆಣ್ಣು ಮಕ್ಕಳಿಬ್ಬರನ್ನು ಕೊಲೆ ಮಾಡಿರುವುದಾಗಿ … Continued

ಲವರ್ ಜೊತೆ ಓಡಿ ಹೋದ ಮಗಳು; ಊರಿಗೆ ‘ತಿಥಿ’ ಊಟ ಹಾಕಿಸಿದ ತಂದೆ

ಬೆಳಗಾವಿ : ಮಗಳು ಪ್ರೀತಿಸಿದಾತನೊಂದಿಗೆ ಓಡಿಹೋಗಿದ್ದರಿಂದ ಮನನೊಂದ ತಂದೆ ಊರಿಗೆ ಊಟ ಹಾಕಿಸಿ, ತಿಥಿ ಕಾರ್ಯ ನೆರವೇರಿಸಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ತಮ್ಮ ಇಚ್ಛೆಗೆ ವಿರುದ್ಧವಾಗಿ ಪ್ರಿಯಕರನ ಜತೆ ಓಡಿ ಹೋದ ಮಗಳ ತಿಥಿ ನಡೆಸಿದ ತಂದೆ ಊರವರಿಗೆಲ್ಲ ಊಟ ಹಾಕಿಸಿದ ವಿದ್ಯಮಾನ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ … Continued

ಕಾಸರಗೋಡು | ಮಗಳ ಮೇಲೆಯೇ ಆ್ಯಸಿಡ್ ಎರಚಿ ಪರಾರಿಯಾದ ಅಪ್ಪ…!

ಕಾಸರಗೋಡು : ಹೆಂಡತಿ ಜೊತೆ ಜಗಳಕ್ಕೆ ಸ್ವಂತ ಮಗಳ ಮೇಲೆ ಅಪ್ಪನೇ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೂ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ. ಆ್ಯಸಿಡ್ ಎರಚಿದ ಆರೋಪಿ ದಕ್ಷಿಣ ಕನ್ನಡ … Continued

ಐಐಟಿ, ಎನ್‌ಐಟಿಗೆ ಪ್ರವೇಶ ಪಡೆಯುವ ಕುರಿತು ತಂದೆ-ಮಗನ ಅಗ್ರಿಮೆಂಟ್ ಭಾರಿ ವೈರಲ್‌ ; ಆದರೆ ಅಲ್ಲೊಂದು ಟ್ವಿಸ್ಟ್…

ನವದೆಹಲಿ: ಐಐಟಿ, ಎನ್‌ಐಟಿ, ಐಐಐಟಿ ಇತ್ಯಾದಿಗಳಿಗೆ ಪ್ರವೇಶ ಪಡೆಯುವುದುಅನೇಕ ವಿದ್ಯಾರ್ಥಿಗಳ ಕನಸಾಗಿದೆ. ಹೀಗಾಗಿ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅಂಕ ಪಡೆಯಲು ಪೋಷಕರು ತಮ್ಮ ಮಕ್ಕಳ ಮೇಲೆ ಕೆಲವೊಮ್ಮೆ ನಿಬಂಧನೆಗಳನ್ನು ವಿಧಿಸುವುದೂ ಉಂಟು. ಇಂಥದ್ದೇ ವಿದ್ಯಮಾನದಲ್ಲಿ ದೆಹಲಿಯ ಹುಡುಗನ ಮುಂದೆ ಆತನ ತಂದೆ ವಿಭಿನ್ನವಾದ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ. ತಂದೆಯೊಬ್ಬರು ತಮ್ಮ ಮಗ ಐಐಟಿಗೆ ಪ್ರವೇಶ ಪಡೆದರೆ … Continued

58ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೂಸೆವಾಲಾ ತಾಯಿ

ಚಂಡೀಗಢ: ಎರಡು ವರ್ಷಗಳ ಹಿಂದೆ ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ತಾಯಿ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಸಿಧು ಮೂಸೆವಾಲಾ ಅವರ 58 ವರ್ಷದ ತಾಯಿ ಚರಣ್ ಕೌರ್ ಮತ್ತು 60 ವರ್ಷದ ತಂದೆ ಬಲ್ಕೌರ್ ಸಿಂಗ್ ಅವರು, ಕಳೆದುಕೊಂಡಿದ್ದ ಏಕೈಕ ಮಗನ ಸ್ಥಾನ ತುಂಬಲು ಮತ್ತೊಬ್ಬ ಮಗನನ್ನು ಪಡೆದಿದ್ದಾರೆ. ಸಿಧು … Continued

ವಿಷಕಾರಿ ಕಾಡು ಅಣಬೆ ಸೇವಿಸಿದ ನಂತರ ತಂದೆ-ಮಗ ಸಾವು

ಮಂಗಳೂರು: ಕಾಡಿನ ವಿಷಕಾರಿ ಅಣಬೆ ಸೇವನೆ ಮಾಡಿದ ನಂತರ ತಂದೆ ಮತ್ತು ಮಗ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಮಿಯ್ಯಾರು ಪಲ್ಲದಪಲಿಕೆ ನಿವಾಸಿಗಳಾಗಿರುವ ಗುರುವ ಮೇರ(80) ಮತ್ತು ಅವರ ಪುತ್ರ ಓಡಿಯಪ್ಪ (41) ಎಂದು ಗುರುತಿಸಲಾಗಿದೆ. ಗುಡ್ಡಗಾಡು ಪ್ರದೇಶದಲ್ಲಿ ವಿವಿಧ ರೀತಿಯ ಅಣಬೆಗಳು ಬೆಳೆಯುತ್ತವೆ. … Continued

ಗುಜರಾತ್‌: ತಾಂತ್ರಿಕ ಆಚರಣೆ ನೆಪದಲ್ಲಿ 3 ದಿನ ಅನ್ನ ನೀರು ಕೊಡದೆ ಚಿತ್ರಹಿಂಸೆ ನೀಡಿ 14 ವರ್ಷದ ಮಗಳನ್ನೇ ಕೊಂದ ತಂದೆ, ಚಿಕ್ಕಪ್ಪ…!

ಗುಜರಾತ್‌ನ ತಲಾಲಾ ತಾಲೂಕಿನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ ತಂದೆಯೊಬ್ಬ ತನ್ನ ಮಗಳನ್ನೇ ಬಲಿಕೊಟ್ಟು ಕೊಂದಿದ್ದಾನೆ. ಹತ್ಯೆಗೀಡಾದ ಬಾಲಕಿಯನ್ನು 14 ವರ್ಷದ ಧೈರ್ಯ ಎಂದು ಗುರುತಿಸಲಾಗಿದ್ದು, ಆಕೆ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ಪೊಲೀಸರು ನಡೆಸಿದ ತನಿಖೆಯಲ್ಲಿ ಬಾಲಕಿಯ ತಂದೆ ಭವೇಶ್ ಅಕಬರಿ ಹಾಗೂ ಆತನ ಅಣ್ಣ ದಿಲೀಪ್ ಅಕಬರಿ ಇಬ್ಬರೂ ಬಾಲಕಿಯನ್ನು ಭೂತದ ಕಾಟದಿಂದ ಅವಳನ್ನು ಹೊರಗೆ … Continued