ಕಾಸರಗೋಡು | ಮಗಳ ಮೇಲೆಯೇ ಆ್ಯಸಿಡ್ ಎರಚಿ ಪರಾರಿಯಾದ ಅಪ್ಪ…!

ಕಾಸರಗೋಡು : ಹೆಂಡತಿ ಜೊತೆ ಜಗಳಕ್ಕೆ ಸ್ವಂತ ಮಗಳ ಮೇಲೆ ಅಪ್ಪನೇ ಆ್ಯಸಿಡ್ ಎರಚಿದ ಘಟನೆ ಕೇರಳದ ಕಾಸರಗೋಡು ಜಿಲ್ಲೆಯ ಪನತ್ತಡಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಶುಕ್ರವಾರ ರಾತ್ರಿ 10:30ರ ವೇಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಘಟನೆಯಲ್ಲಿ ಮತ್ತೊಬ್ಬ ಬಾಲಕಿಗೂ ಗಂಭೀರ ಗಾಯಗಳಾಗಿದೆ ಎನ್ನಲಾಗಿದೆ.
ಆ್ಯಸಿಡ್ ಎರಚಿದ ಆರೋಪಿ ದಕ್ಷಿಣ ಕನ್ನಡ ಜಿಲ್ಲೆಯ ಮನೋಜ ಕೆ.ಸಿ (48) ಎಂದು ಹೇಳಲಾಗಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಮನೋಜ ಹಾಗೂ ಪತ್ನಿ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಜಗಳದಿಂದ ಬೇಸತ್ತು ಮನೆ ಬಿಟ್ಟು ಹೋಗಿದ್ದ ಪತ್ನಿ, ತನ್ನ ಸಹೋದರನ ಮನೆಯಲ್ಲಿ ವಾಸವಾಗಿದ್ದರು.

ಶುಕ್ರವಾರ ಮನೋಜನ 17 ವರ್ಷದ ಮಗಳು ತನ್ನ 10 ವರ್ಷದ ಸೋದರ ಸಂಬಂಧಿಯೊಂದಿಗೆ ಮನೆಯಂಗಳದಲ್ಲಿ ಆಟವಾಡುತ್ತಿದ್ದಾಗ ರಬ್ಬರ್ ಶೀಟುಗಳ ಸಂಸ್ಕರಣೆಗೆ ತಂದಿದ್ದ ಆ್ಯಸಿಡ್‌ ಅನ್ನು ಆಕೆಯ ಮೇಲೆ ಎರಚಿ ಮನೀಜ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ದಾಳಿಯಿಂದ ಮನೋಜನ ಮಗಳ ಕೈ ಹಾಗೂ ತೊಡೆಗೆ ಸುಟ್ಟಗಾಯಗಳಾಗಿವೆ. ಆಕೆಯ ಸೋದರ ಸಂಬಂಧಿಯ ಮುಖ ಹಾಗೂ ಕೈಗಳಲ್ಲಿ ಸುಟ್ಟಗಾಯಗಳಾಗಿವೆ. ಸಂತ್ರಸ್ತ ಬಾಲಕಿಯರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆರೋ‍‍ಪಿ ಮನೋಜ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊ | ಸಿಜೆಪಿ ಸಂಸ್ಥಾಪಕ ಅಭಿಜೀತ ದೀಪ್ಕೆ ಮುಖಕ್ಕೆ ಶಾಯಿ ಎಸೆದ ಮಹಿಳೆ ; ಹೈಡ್ರಾಮಾಕ್ಕೆ ಸಾಕ್ಷಿಯಾದ ಜಂತರ್ ಮಂತರ್‌ ಪ್ರತಿಭಟನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement