ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಆಪ್ತನ ಹತ್ಯೆ

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ (LeT) ಹಿರಿಯ ನಾಯಕ ಶೇಖ್ ಅಫ್ರಿದಿ ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಇದು ವ್ಯವಸ್ಥಿತವಾಗಿ ನಡೆದ ಟಾರ್ಗೆಟ್ಟೆಡ್‌ ಹತ್ಯೆ (Targeted Killing) ಎನ್ನಲಾಗಿದೆ. ಶೇಖ್ ಅಫ್ರಿದಿ ಲಷ್ಕರ್ ಸಂಘಟನೆಯ ಸ್ಥಾಪಕ ಹಫೀಜ್ ಸಯೀದ್‌ನ ಅತ್ಯಂತ ಆಪ್ತ ಸಹಚರನಾಗಿದ್ದ. ಖೈಬರ್ … Continued

ಪಾಕ್‌ ಸೇನೆ ಸುಳ್ಳಾಟ ಬಯಲು | ಸಾಯಿಸಿದ್ದೇವೆ ಎಂದ ಪಾಕಿಸ್ತಾನ ; ಬದುಕಿದ್ದೇನೆ ಎಂದು ವೀಡಿಯೊ ಮೂಲಕ ತಿಳಿಸಿದ ಟಿಟಿಪಿ ಮುಖ್ಯಸ್ಥ

ಇಸ್ಲಾಮಾಬಾದ್: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ (TTP) ಮುಖ್ಯಸ್ಥ ನೂರ್ ವಲಿ ಮೆಹಸೂದ್ ಸಾವಿನ ಬಗ್ಗೆ ಪಾಕಿಸ್ತಾನದ ಸೇನೆಯು ಹಬ್ಬಿಸಿದ್ದ ಇಡೀ ಕಥೆಯು ಸಂಪೂರ್ಣ ಸುಳ್ಳು ಎಂಬುದು ಒಂದು ವೀಡಿಯೊ ಮೂಲಕ ಸಾಬೀತಾಗಿದೆ. ಅಕ್ಟೋಬರ್ 9 ರಂದು ಕಾಬೂಲ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಮೆಹಸೂದ್ ಹತ್ಯೆಯಾಗಿದ್ದಾನೆ ಎಂದು ಇಸ್ಲಾಮಾಬಾದ್ ಹೇಳಿಕೊಂಡಿತ್ತು. ಆದರೆ, ಈ ಕುಖ್ಯಾತ ಭಯೋತ್ಪಾದಕ ಸತ್ತಿಲ್ಲ, ಅವನು … Continued

ತನ್ನ ದೇಶದ ಪ್ರಾಂತ್ಯದ ಮೇಲೆಯೇ ಬಾಂಬ್ ಹಾಕಿದ ಪಾಕಿಸ್ತಾನದ ವಾಯುಪಡೆ ; 30 ಮಂದಿ ಸಾವು

ಸೋಮವಾರ ಪಾಕಿಸ್ತಾನ ವಾಯುಪಡೆ ವಿಮಾನಗಳು ತಮ್ಮದೇ ದೇಶದ ಪ್ರಾಂತ್ಯವಾದ ಖೈಬರ್ ಪಖ್ತುಂಖ್ವಾದ ಹಳ್ಳಿಯ ಮೇಲೆ ಎಂಟು ಬಾಂಬ್‌ಗಳನ್ನು ಹಾಕಿದ್ದರಿಂದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಜನರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಶ್ತೂನ್ ಬಹುಸಂಖ್ಯಾತರು ಇರುವ ಮಾಟ್ರೆ ದಾರಾ ಗ್ರಾಮದ ಮೇಲೆ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಜೆಎಫ್ -17 … Continued

ವೀಡಿಯೊ | ಭಾರತ ಪಾಕ್‌ ಮೇಲೆ ದಾಳಿ ಮಾಡಿದ್ರೆ ನೀವು ಭಾರತದ ಸೇನೆ ಬೆಂಬಲಿಸಿ ; ಪಾಕಿಸ್ತಾನ ಪಶ್ತೂನ್‌ ಮುಸ್ಲಿಮರಿಗೆ ಕರೆ ನೀಡಿದ ಧರ್ಮಗುರು..!

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದ ಇಸ್ಲಾಮಿಕ್ ಧರ್ಮಗುರುವಿನ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ಪಶ್ತೂನ್ ಸಮುದಾಯವು ಭಾರತೀಯ ಸೇನೆಯ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಭಾರತೀಯ ಪ್ರವಾಸಿಗರು ಸಾವಿಗೀಡಾದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ … Continued

ವಾಯವ್ಯ ಪಾಕಿಸ್ತಾನದಲ್ಲಿ ಎರಡು ಬುಡಕಟ್ಟುಗಳ ನಡುವೆ ಸಶಸ್ತ್ರ ಘರ್ಷಣೆ ; 36 ಸಾವು, 162 ಮಂದಿಗೆ ಗಾಯ

ಇಸ್ಲಾಮಾಬಾದ್‌ : ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಬುಡಕಟ್ಟು ಜಿಲ್ಲೆಯಲ್ಲಿ ಒಂದು ತುಂಡು ಭೂಮಿಗಾಗಿ ಹೋರಾಡುತ್ತಿರುವ ಎರಡು ಬುಡಕಟ್ಟುಗಳ ನಡುವೆ ನಡೆದ ಸಶಸ್ತ್ರ ಘರ್ಷಣೆಯಲ್ಲಿ ಕನಿಷ್ಠ 36 ಜನರು ಸಾವಿಗೀಡಾಗಿದ್ದಾರೆ ಮತ್ತು 162 ಇತರರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಅಪ್ಪರ್ ಕುರ್ರಂ ಜಿಲ್ಲೆಯ ಬೊಶೆರಾ ಗ್ರಾಮದಲ್ಲಿ ಐದು ದಿನಗಳ ಹಿಂದೆ ಭಾರಿ ಘರ್ಷಣೆಗಳು ಪ್ರಾರಂಭವಾದವು … Continued

ಖೈಬರ್ ಪಖ್ತುಂಖ್ವಾದಲ್ಲಿ ಆತ್ಮಹತ್ಯಾ ಬಾಂಬರ್‌ ಸ್ಫೋಟ : 8 ಪಾಕ್ ಸೈನಿಕರು ಸಾವು : 17 ಮಂದಿಗೆ ಗಾಯ

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಎಂಟು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಮತ್ತು 17 ಮಂದಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಟೆಲಿಗ್ರಾಫ್ ಗುರುವಾರ ವರದಿ ಮಾಡಿದೆ. ಮಾಲಿ ಖೇಲ್ ಪ್ರದೇಶದಲ್ಲಿ ಭದ್ರತಾ ಪಡೆಗಳ ಬೆಂಗಾವಲು ಪಡೆಗೆ ಮೋಟಾರು ಬೈಕ್‌ನಲ್ಲಿ ಬಂದ ಆತ್ಮಹತ್ಯಾ ಬಾಂಬರ್ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿದ … Continued