
ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್‌ಪತಿ’ಯಲ್ಲಿ 12 ವರ್ಷದ ಬಾಲಕ ₹ 1 ಕೋಟಿ ಗೆದ್ದ ನಂತರ ಈ ಮೊತ್ತ ಗೆದ್ದ ಅತ್ಯಂತ ಕಿರಿಯ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅಮಿತಾಭ್ ಬಚ್ಚನ್ ಆಯೋಜಿಸಿದ್ದ ಐಕಾನಿಕ್ ಶೋನ 15 ನೇ ಆವೃತ್ತಿಯಲ್ಲಿ ಹರಿಯಾಣದ ಮಹೇಂದ್ರಗಢ್‌ನ 8 ನೇ ತರಗತಿಯ ವಿದ್ಯಾರ್ಥಿ ಮಯಾಂಕ್ ₹ 1 ಕೋಟಿ ರೂ.ಗಳ 16 ನೇ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಸುವ ಮೂಲಕ ಕಾರ್ಯಕ್ರಮದ ವೀಕ್ಷಕರನ್ನು ಬೆರಗುಗೊಳಿಸಿದ್ದಾನೆ.
ಕಾರ್ಯಕ್ರಮದ ನಿರ್ಮಾಪಕರು X ನಲ್ಲಿ ಪೋಸ್ಟ್ ಮಾಡಿದ ಪ್ರೋಮೋ ಆತ್ಮವಿಶ್ವಾಸ ಮತ್ತು ಮಹತ್ವಾಕಾಂಕ್ಷೆಯ ಮಯಾಂಕ್ ಮೆಗಾ ಬಹುಮಾನವನ್ನು ಗೆದ್ದಿರುವುದನ್ನು ತೋರಿಸುತ್ತದೆ.
ಬೃಹತ್ ಬಹುಮಾನವನ್ನು ಗೆಲ್ಲುವ ಅನ್ವೇಷಣೆಯಲ್ಲಿ, ಮಯಾಂಕ್ ಅವರು ಯಾವುದೇ ಲೈಫ್‌ಲೈನ್‌ಗಳನ್ನು ಬಳಸದೆ ₹ 3.2 ಲಕ್ಷವನ್ನು ಗೆದ್ದರು ಮತ್ತು ₹ 12.5 ಲಕ್ಷ ಪ್ರಶ್ನೆಗೆ ತಮ್ಮ ಮೊದಲ ಲೈಫ್‌ಲೈನ್ ಅನ್ನು ಬಳಸಿದ್ದಾನೆ.

ಧೈರ್ಯದಿಂದ 15 ಪ್ರಶ್ನೆಗಳಿಗೆ ಉತ್ತರಿಸಿದ ಮಯಾಂಕ್ “1 ಕೋಟಿ” ಮೊತ್ತದ ಪ್ರಶ್ನೆ ವರೆಗೆ ಬಂದಿದ್ದಾನೆ. “ಹೊಸದಾಗಿ ಪತ್ತೆಯಾದ ಖಂಡಕ್ಕೆ ಅಮೆರಿಕಾ ಎಂಬ ಹೆಸರನ್ನು ಹೊಂದಿರುವ ನಕ್ಷೆಯನ್ನು ರಚಿಸಿದ ಯುರೋಪಿನ ಕಾರ್ಟೋಗ್ರಾಫರ್ ಯಾರು?” ಎಂದು ಬಾಲಕ ಮಯಾಂಕನನ್ನು ಕೇಳಲಾಯಿತು. ನಾಲ್ಕು ಆಯ್ಕೆಗಳೆಂದರೆ: ಅಬ್ರಹಾಂ ಒರ್ಟೆಲಿಯಸ್, ಗೆರಾಡಸ್ ಮರ್ಕೇಟರ್, ಜಿಯೋವಾನಿ ಬಟಿಸ್ಟಾ ಆಗ್ನೆಸ್ ಮತ್ತು ಮಾರ್ಟಿನ್ ವಾಲ್ಡ್ಸೀಮುಲ್ಲರ್ ಆಗಿತ್ತು.
ಮಾಯಾಂಕ್ ಮಾರ್ಟಿನ್ ವಾಲ್ಡ್ಸೀಮುಲ್ಲರ್ ಎಂದು ಸರಿಯಾದ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾನೆ. ಮತ್ತು ₹ 1 ಕೋಟಿ ಬಹುಮಾನ ಗೆದ್ದಿದ್ದಾನೆ. ಆತ ಅಂತಿಮ ₹ 7 ಕೋಟಿ ಪ್ರಶ್ನೆಗೆ ಪ್ರಯತ್ನಿಸಿದ್ದಾನೆ. ಆದರೆ ಉತ್ತರಿಸಲು ಸಾಧ್ಯವಾಗಲಿಲ್ಲ ಮತ್ತು ಆಟವನ್ನು ತೊರೆದಿದ್ದಾನೆ. ಯಂಗ್ ಚಾಂಪಿಯನ್ ಮಯಾಂಕ್‌ಗೆ ಹರ್ಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್ ಅವರನ್ನು ಅಭಿನಂದಿಸಿದ್ದಾರೆ.
ವೇದಿಕೆಯಲ್ಲಿ ಜ್ಞಾನದ ಹಸಿವನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದ್ದು “ಅತ್ಯಂತ ಅದೃಷ್ಟ” ಎಂದು ಭಾವಿಸಿದ್ದೇನೆ ಎಂದು ಯುವ ಸ್ಪರ್ಧಿ ಹೇಳಿದ್ದಾನೆ. ತನಗೆ ಬೆಂಬಲಸಿದ್ದಕ್ಕಾಗಿ ತಂದೆ-ತಾಯಿಗಳಿಗೆ ಧನ್ಯವಾದ ಹೇಳಿದ್ದಾನೆ. “ಕೆಬಿಸಿ ಜೂನಿಯರ್ಸ್ ವೀಕ್’ನಲ್ಲಿ ನನ್ನ ಜ್ಞಾನವನ್ನು ಪ್ರದರ್ಶಿಸಲು ಮತ್ತು ನನ್ನನ್ನು ಪೂರ್ತಿ ಪ್ರೇರೇಪಿಸಿದ ಅಮಿತಾಭ್ ಸರ್ ಎದುರು ಆಟವಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಇಷ್ಟು ದೊಡ್ಡ ಮೊತ್ತವನ್ನು ಗೆದ್ದ ಅತ್ಯಂತ ಕಿರಿಯ ಸ್ಪರ್ಧಿಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ನಾನು ಮತ್ತು ನನ್ನ ಕುಟುಂಬ ಈ ಕಾರ್ಯಕ್ರಮದ ದೊಡ್ಡ ಅಭಿಮಾನಿಗಳು. ನನ್ನ ಪೋಷಕರಿಗೆ ಧನ್ಯವಾದ ಹೇಳಲು ನಾನು ಈ ಅವಕಾಶವನ್ನು ತೆಗೆದುಕೊಳ್ಳುತ್ತೇನೆ ಎಂದು ಆತ ಹೇಳಿದ್ದಾನೆ.


ನಿಮ್ಮ ಕಾಮೆಂಟ್ ಬರೆಯಿರಿ