ಮೋದಿ ಸರಕಾರ ಅಧಿಕಾರದಲ್ಲಿರುವವರೆಗೂ ರೈತರ ಹೋರಾಟ: ನರೇಂದ್ರ ಟಿಕಾಯತ್‌

ಮುಜಫ್ಫರನಗರ: ಕೇಂದ್ರದ ಮೋದಿ ಸರಕಾರ ಅಧಿಕಾರದಲ್ಲಿರುವವರೆಗೆ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮುಂದುವರೆಸಲು ಸನ್ನದ್ಧರಾಗಿದ್ದಾರೆ ಎಂದು ಕೃಷಿಕರ ಮುಖಂಡ ನರೇಂದ್ರ ಟಿಕಾಯತ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿ ಇನ್ನೂ ಮೂರುವರೆ ವರ್ಷಗಳಿವೆ. ಅಲ್ಲಿಯವರೆಗೂ ನಾವು ಬೇಡಿಕೆ ಈಡೇರಿಕೆಗೆ ಹೋರಾಟ ಮುಂದುವರೆಸುತ್ತೇವೆ. ಕೇಂದ್ರ ಸರಕಾರದ ಯಾವುದೇ ಪ್ರಚೋದನೆಗೂ … Continued

ರೈತ ಪ್ರತಿಭಟನಾ ಸ್ಥಳದಲ್ಲಿ ರೈತರ ವ್ಯಥೆ ಹೇಳುತ್ತಿರುವ ಕಲಾವಿದನ ಮಣ್ಣಿನ ಅಚ್ಚು

ರೈತರ ಪ್ರತಿಭಟನೆಯಲ್ಲಿ ಸೇರಲು ರೂರ್ಕೆಲಾದ ಸಾಂಪ್ರದಾಯಿಕ ವಿಗ್ರಹ ತಯಾರಕರೊಬ್ಬರು ದೆಹಲಿಗೆ 1,400 ಕಿಮೀ ಸೈಕಲ್‌ ಓಡಿಸಿದ್ದಾರೆ. ಹೊಸ ಕೃಷಿ ಕಾನೂನುಗಳು ರೈತರ ಶೋಷಣೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಚಿತ್ರಿಸಲು ಗಾಜಿಪುರ ಗಡಿಯಲ್ಲಿ ಮಣ್ಣಿನ ಮಾದರಿಗಳನ್ನು ತಯಾರಿಸುತ್ತಿದ್ದಾರೆ.ಮೂರು ಮಣ್ಣಿನ ಮಾದರಿಗಳನ್ನು ಚಿತ್ರಿಸಲಾಗುತ್ತಿದೆ ಎಂದು 32 ವರ್ಷದ ಮುಕ್ತಿಕಾಂತ ಬಿಸ್ವಾಲ್ ದೂರವಾಣಿಯಲ್ಲಿ ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ. ದಿ ಟೆಲಿಗ್ರಾಫ್‌ … Continued

ಹೋರಾಟ ತೀವ್ರಕ್ಕೆ ದೆಹಲಿ ಗಡಿ ಬಳಿ ಜಮಾಯಿಸಲು ರೈತರಿಗೆ ಮನವಿ

ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪಂಜಾಬ್‌ ರಾಜ್ಯಾದ್ಯಂತ ಆಯೋಜಿಸಲಾಗಿರುವ ಮಹಾಪಂಚಾಯತ್‌ಗಳನ್ನು ರದ್ದುಗೊಳಿಸಿ ರಾಷ್ಟ್ರವ್ಯಾಪಿ ನಡೆಯುವ ರೈಲು ರೋಕೊ ಯಶಸ್ವಿಗೊಳಿಸಲು ದೆಹಲಿ ಗಡಿಗೆ ತೆರಳುವಂತೆ ೩೨ ಪಂಜಾಬ್‌ ರೈತ ಸಂಘಟನೆಗಳ ವೇದಿಕೆ ರಾಜ್ಯದ ರೈತರಿಗೆ ಕೋರಿದೆ. ಮೂರು ಕೃಷಿ ಕಾನೂನುಗಳ ಅಪಾಯಗಳ ಬಗ್ಗೆ ರೈತರಿಗೆ ಮನವರಿಕೆಯಾಗಿರುವುದರಿಂದ ಮಹಾಪಂಚಾಯತ್‌ಗಳನ್ನು ರದ್ದುಪಡಿಸಲಾಗಿದೆ. ಜನವರಿ ೨೬ರ ನಂತರ ಪ್ರತಿಭಟನಾ ಸ್ಥಳದಲ್ಲಿ … Continued

ಮಾತುಕತೆಗೆ ಕೇಂದ್ರ ಸರಕಾರ ವಿಳಂಬ: ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ

ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಮಾತುಕತೆಗೆ ದಿನಾಂಕ ನಿಗದಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ ಮಾಡಿದೆ. ಹೋರಾಟ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡುವ ಪ್ರಧಾನಿ ಮೋದಿ, ರೈತರನ್ನು ಮಾತುಕತೆಗೆ ಆಹ್ವಾನಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ … Continued

ಹೊಸ ಕೃಷಿ ಕಾನುನು ಅಸ್ತವ್ಯಸ್ತತೆಗೆ ಕೇಂದ್ರದ ಮೊಂಡುತನದ ಧೋರಣೆ ಕಾರಣ

ಹೊಸ ಕೃಷಿ ಕಾನೂನುಗಳ ಅಸ್ತವ್ಯಸ್ತತೆಗೆ ಕೇಂದ್ರದ “ಮೊಂಡುತನದ ಮನೋಭಾವ” ಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿ ಸದಸ್ಯ ಶಿವ ಕುಮಾರ್ ಶರ್ಮಾ ಹೇಳಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರೂ, ಮುಂದಿನ ಸುತ್ತಿನ ಮಾತುಕತೆಗಾಗಿ ಯಾವುದೇ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. 40 ರೈತ ಸಂಘಟನೆಗಳ ಮೈತ್ರಿ … Continued

ದೆಹಲಿ ಹಿಂಸಾಚಾರ: ಘಟನಾ ಸ್ಥಳಕ್ಕೆ ಆರೋಪಿಗಳು

ದೆಹಲಿ: ಗಣರಾಜ್ಯೋತ್ಸವದಂದು ಟ್ರಾಕ್ಟರ್‌ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ಪ್ರಮುಖ ಆರೋಪಿ ದೀಪ್‌ ಸಿಧು ಹಾಗೂ ಇಕ್ಬಾಲ್‌ ಸಿಂಗ್‌ ಅವರನ್ನು ದೆಹಲಿ ಪೊಲೀಸರು ಶನಿವಾರ ಘಟನಾ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಕೆಂಪು ಕೋಟೆಗೆ ಇಬ್ಬರು ಆರೋಪಿಗಳನ್ನು ಕರೆದೊಯ್ದಿದ್ದಾರೆ. ಇಲ್ಲಿನ ಚಾಣಕ್ಯಪುರಿಯ ಅಪರಾಧ ದಳ ಕೇಂದ್ರ ಕಚೇರಿಯಿಂದ ತನಿಖೆ ನಡೆಸಲಾಗುತ್ತಿದೆ. ಗಣರಾಜ್ಯೋತ್ಸವದಂದು ಕೆಂಪು … Continued

ರೈತರ ಪ್ರತಿಭಟನಾ ಸ್ಥಳದಲ್ಲಿ ಪ್ರತ್ಯೇಕ ಇಂಟರ್‌ನೆಟ್‌, ಸಿಸಿಟಿವಿ ಅಳವಡಿಕೆ

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಪ್ರತ್ಯೇಕ ಇಂಟರ್‌ನೆಟ್‌ ಹಾಗೂ ಸಿಸಿಟಿವಿ ಅಳವಡಿಸಿಕೊಳ್ಳುವ ಮೂಲಕ ಕೇಂದ್ರ ಸರಕಾರಕ್ಕೆ ಪ್ರತಿಭಟನಾನಿರತ ರೈತರು ಸವಾಲೆಸೆದಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಇಂಟರ್‌ನೆಟ್‌ ಕಡಿತಗೊಳಿಸಿದ ಕ್ರಮವನ್ನು ಖಂಡಿಸಿದ ಹೋರಾಟಗಾರರು ಈ ಕ್ರಮಕ್ಕೆ ಮುಂದಾಗಿದ್ದಾರೆ. ಕಾನೂನು ರದ್ದುಪಡಿಸುವುದು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ … Continued

ಮೋದಿಗೆ ಜೈ, ರೈತರ ಮೇಲೆ ಕ್ರಮಕ್ಕೆ ಭಾರತೀಯ ಅಮೆರಿಕನ್ನರ ವಿರೋಧ

ವಾಷಿಂಗ್ಟನ್: ಅಮೆರಿಕದಲ್ಲಿ ವಾಸವಾಗಿರುವ ಭಾರತೀಯ ಮೂಲದವರಲ್ಲಿ ಶೇ.೫೦ರಷ್ಟು ಜನರು ಭಾರತದ ಕೇಂದ್ರ ಸರಕಾರದ ನೀತಿಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಕಾರ್ನೆಗಿ ಎಂಡೋಮೆಂಟ್‌ ಫಾರ್‌ ಇಂಟರ್‌ನ್ಯಾಷನಲ್‌ ಪೀಸ್‌, ಜಾನ್ಸ್‌ ಹಾಪ್ಕಿನ್ಸ್‌-ಎಸ್‌ಎಐಎಸ್‌ ಹಾಗೂ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಸಹಯೋಗದಲ್ಲಿ ನಡೆದ “ಭಾರತೀಯ ಅಮೆರಿಕನ್ನರ ದೃಷ್ಟಿಯಲ್ಲಿ ಭಾರತʼ ವಿಷಯದ ಸಮೀಕ್ಷೆ ನಡೆದಿದೆ. ವಲಸೆಗಾರರ ಬಗ್ಗೆ ಪ್ರಧಾನಿ ಮೋದಿ ಹೆಚ್ಚು ಉದಾರತೆ … Continued

ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧ: ಗೋಯಲ್‌

ನವ ದೆಹಲಿ: ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ಪುನರಾರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಭಾನುವಾರ ಹೇಳಿದ್ದಾರೆ. ಆದರೆ ಪದೇ ಪದೇ ಪ್ರಸ್ತಾಪಗಳಿದ್ದರೂ ಪ್ರತಿಭಟನಾಕಾರರು ಈವರೆಗೆ ಯಾವುದೇ ಸ್ಪಷ್ಟ ಹಾಗೂ ಪರಿನಾಮಕಾರಿ ಸಲಹೆ ನೀಡಿಲ್ಲ ಎಂದು ಪ್ರತಿಪಾದಿಸಿದರು. ರೈತ ಸಂಘಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ … Continued

ರೈತರ ಬೇಡಿಕೆ ಈಡೇರುವ ವರೆಗೂ ಮನೆಗೆ ಮರಳುವುದಿಲ್ಲ:ಟಿಕಾಯತ

ಫೆಬ್ರವರಿ: ರೈತರ ಬೇಡಿಕೆಗಳನ್ನು ಈಡೇರಿಸುವವರೆಗೆ ಯಾವುದೇ ಮನೆಗೆ ಮರಳುವ ಪ್ರಶ್ನಯೇ ಇಲ್ಲ ಎಂದು ರೈತ ಮುಖಂಡ ರಾಕೇಶ ಟಿಕಾಯತ್‌ ಹೇಳಿದ್ದಾರೆ. ಅವರು ಭಾನುವಾರ ಹರ್ಯಾಣದಲ್ಲಿ ಕಿಸಾನ್‌ ಪಂಚಾಯತ ಉದ್ದೇಶಿಸಿ ಮಾತನಾಡಿದರು. ಕೃಷಿ ಕಾನೂನುಗಳ ವಿರುದ್ಧದ ಅಭಿಯಾನವು ಪ್ರಬಲವಾಗುತ್ತಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರರು ಹೇಳಿದ್ದಾರೆ. ನಾನು ನನ್ನನ್ನು ಕೊಲ್ಲುತ್ತೇನೆಯೇ ಹೊರತು ಪ್ರತಿಭಟನೆ ಕೊನೆಗೊಳಿಸುವುದಿಲ್ಲ” … Continued