ಮೋದಿ ಸರಕಾರ ಅಧಿಕಾರದಲ್ಲಿರುವವರೆಗೂ ರೈತರ ಹೋರಾಟ: ನರೇಂದ್ರ ಟಿಕಾಯತ್‌

ಮುಜಫ್ಫರನಗರ: ಕೇಂದ್ರದ ಮೋದಿ ಸರಕಾರ ಅಧಿಕಾರದಲ್ಲಿರುವವರೆಗೆ ಮೂರು ಕೃಷಿ ಕಾನೂನುಗಳ ವಿರುದ್ಧ ದೆಹಲಿ ಗಡಿಯಲ್ಲಿ ರೈತರು ಹೋರಾಟ ಮುಂದುವರೆಸಲು ಸನ್ನದ್ಧರಾಗಿದ್ದಾರೆ ಎಂದು ಕೃಷಿಕರ ಮುಖಂಡ ನರೇಂದ್ರ ಟಿಕಾಯತ್‌ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ಅವಧಿ ಇನ್ನೂ ಮೂರುವರೆ ವರ್ಷಗಳಿವೆ. ಅಲ್ಲಿಯವರೆಗೂ ನಾವು ಬೇಡಿಕೆ ಈಡೇರಿಕೆಗೆ ಹೋರಾಟ ಮುಂದುವರೆಸುತ್ತೇವೆ. ಕೇಂದ್ರ ಸರಕಾರದ ಯಾವುದೇ ಪ್ರಚೋದನೆಗೂ ನಾವು ಒಳವಾಗುವುದಿಲ್ಲ ಎಂದರು.
ತಮ್ಮ ಇಬ್ಬರು ಸಹೋದರರು ಸೇರಿದಂತೆ ಇಡೀ ಟಿಕಾಯತ್‌ ಕುಟುಂಬದ ಯಾವುದೇ ಸದಸ್ಯರ ವಿರುದ್ಧವೂ ಯಾವುದೇ ಸಣ್ಣಪುಟ್ಟ ಆರೋಪಗಳನ್ನು ಸಾಬೀತುಪಡಿಸಿದರೆ ಪ್ರತಿಭಟನೆಯನ್ನು ಕೈಬಿಡುವುದಾಗಿ ಹೇಳಿದರು. ಟಿಕಾಯತ್‌ ಸೋದರರು ಆಂದೋಕನದಿಂದ ಹಣ ಸಂಪಾದಿಸುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಹೇಳಿಕೆ ನೀಡಿದ್ದಾರೆ.
ಹಿರಿಯ ಸಹೋದರ ನರೇಶ್ ಟಿಕಾಯತ್‌ ಬಿಕೆಯು ಅಧ್ಯಕ್ಷರಾಗಿದ್ದರೆ, ರಾಕೇಶ್ ಟಿಕಾಯತ್ ಸಂಘಟನೆಯ ರಾಷ್ಟ್ರೀಯ ವಕ್ತಾರ ಸ್ಥಾನವನ್ನು ಹೊಂದಿದ್ದಾರೆ, 1988 ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್‌ ಅವರ ನೇತೃತ್ವದಲ್ಲಿ ಕಬ್ಬಿಗೆ ಹೆಚ್ಚಿನ ಬೆಲೆ, ಸಾಲ ರದ್ದತಿ ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಮೀರತ್‌ಗೆ ಮುತ್ತಿಗೆ ಹಾಕಲಾಗಿತ್ತು. 2011 ರಲ್ಲಿ ಮಹೇಂದ್ರ ಸಿಂಗ್ ಟಿಕಾಯತ್‌ ಅವರ ಮರಣದ ನಂತರ, ನರೇಶ್ ಮುಖ್ಯ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement