ಬುರ್ಖಾ ಧರಿಸಿ ಬಂದು ಮನೆಯಲ್ಲಿ ತಂಗಿಯ ಮದುವೆಗೆಂದು ಇಟ್ಟಿದ್ದ ಆಭರಣ ದೋಚಿದ ಅಕ್ಕ..!

ನವದೆಹಲಿ: ತನ್ನ ತಂಗಿ ಬಗ್ಗೆಯೇ ಅಸೂಯೆ ಪಟ್ಟ ಸಹೋದರಿಯೊಬ್ಬಳು ಆಕೆಯ ಮದುವೆಗೆಂದು ಸಂಗ್ರಹಿಸಿಟ್ಟಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿರುವ ಘಟನೆಯೊಂದು ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.
ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ನಲ್ಲಿರುವ ತನ್ನ ಮನೆಯಲ್ಲಿ ಹಣ ಹಾಗೂ ಚಿನ್ನಾಭರಣಗಳು ನಾಪತ್ತೆಯಾಗಿದೆ ಎಂದು ಜನವರಿ 30 ರಂದು ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು, ತನಿಖೆ ಆರಂಭಿಸಿದ್ದರು.
ತನಿಖೆ ವೇಳೆ ಮನೆಯೊಳಗೆ ಬೀಗ ಮುರಿದಿರುವುದಾಗಲೀ, ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದಾಗಲೀ ಕಂಡು ಬಾರದ ಕಾರಣ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬುರ್ಖಾ ಧರಿಸಿದ್ದ ಮಹಿಳೆಯೊಬ್ಬರು ಮನೆಯೊಳಗೆ ಬಂದಿರುವುದು ಕಂಡು ಬಂದಿದೆ. ಇದೇ ವೇಳೆ ದೂರು ನೀಡಿದ ವ್ಯಕ್ತಿಯ ಹಿರಿಯ ಮಗಳ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ.

ನಂತರ ಆಕೆಯನ್ನು ವಿಚಾರಣೆಗೊಳಪಡಿಸಿದಾಗ ಕಳ್ಳತನದ ವಿಷಯ ಹೊರಬಂದಿದೆ. ಆಕೆ ಸಾಲ ಮಾಡಿಕೊಂಡಿದ್ದು, ಇದೇ ವೇಳೆ ತಂಗಿಯ ಮದುವೆಗೆಂದು ಪೋಷಕರು ಚಿನ್ನಾಭರಣ ಹಾಗೂ ಹಣ ಮನೆಯಲ್ಲಿ ಇರಿಸಿರುವುದು ಅವಳಿಗೆ ಗೊತ್ತಾಗಿದೆ. ತಂಗಿಯ ಮೇಲೆ ಅಸೂಯೆ ಪಡುತ್ತಿದ್ದ ಆಕೆ ಹಣ ಹಾಗೂ ಚಿನ್ನಾಭರಣವನ್ನು ಕದ್ದು, ತನ್ನ ಸಾಲ ತೀರಿಸಲು ಈ ಕೃತ್ಯವೆಸಗಿದ್ದಾಳೆ.
ಇದಕ್ಕಾಗಿ ಸಂಚು ರೂಪಿಸಿ ಜನವರಿಯಲ್ಲಿ ಮೋಹನ್ ಗಾರ್ಡನ್‌ನಿಂದ ದೆಹಲಿಯ ಉತ್ತಮ್ ನಗರದ ಸೇವಕ್ ಪಾರ್ಕ್‌ಗೆ ಬಳಿಗೆ ಮನೆಯನ್ನು ಬದಲಿಸಲು ಮುಂದಾಗಿದ್ದಳು.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

ಮೋಹನ್ ಗಾರ್ಡನ್ ಪ್ರದೇಶದಿಂದ ಉತ್ತಮ್ ನಗರಕ್ಕೆ ತನ್ನ ಮನೆಯನ್ನು ಸ್ಥಳಾಂತರಿಸುವಾಗ ಸಹಾಯ ಮಾಡುವಂತೆ ಅವಳು ತನ್ನ ತಾಯಿಯನ್ನು ಕೇಳಿದ್ದಳು. ಜನವರಿ 30 ರಂದು, ಅವಳು ತನ್ನ ಮನೆ ಸ್ಥಳಾಂತರಿಸಲು ತನ್ನ ಸಾಮಾನುಗಳನ್ನು ಪ್ಯಾಕ್ ಮಾಡುತ್ತಿದ್ದಾಗ, ಅವಳು ತನ್ನ ತಾಯಿಯ ಮನೆಯ ಕೀಲಿಗಳನ್ನು ಜಾಣತನದಿಂದ ಕದ್ದಿದ್ದಾಳೆ” ಎಂದು ಡಿಸಿಪಿ ಹೇಳಿದರು.
ಈ ವೇಳೆ ಮನೆಯ ಕೀಲಿ ಕೈಯನ್ನು ಕದ್ದಿದ್ದ ಸೀಮಾ ತರಕಾರಿ ತರುವ ನೆಪ ಹೇಳಿ ಹೊರಗೆ ಹೋಗಿದ್ದ ಸೀಮಾ, ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾ ಧರಿಸಿ ಮನೆಯಲ್ಲಿ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಮಾರಾಟ ಮಾಡಿದ್ದಾಳೆ. ತಾಯಿ ತಂಗಿಯ ಬಗ್ಗೆ ಅತೀ ಹೆಚ್ಚು ಪ್ರೀತಿ ತೋರುತ್ತಿದ್ದರಿಂದ ಸೀಮಾ ತಂಗಿಯ ಮೇಲೆ ಅಸೂಯೆ ಪಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement