ಸಂಸತ್‌ ಭವನದ ಬಳಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ; ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಸಂಸತ್ ಭವನದ (Parliament Building) ಬಳಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಕ್ಷಣವೇ ರೈಲ್ವೆ ಪೊಲೀಸ್, ಅಲ್ಲಿದ್ದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇ.95 ರಷ್ಟು ದೇಹ ಸುಟ್ಟುಹೋಗಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, … Continued

ವೀಡಿಯೊ…| ಪೆಟ್ರೋಲ್ ತುಂಬುತ್ತಿರುವಾಗಲೇ ಪಂಪ್‌ ನಲ್ಲಿ ಲೈಟರಿನಲ್ಲಿ ಬೆಂಕಿ ಹಚ್ಚಿದ ಕುಡುಕ ; ಭುಗಿಲೆದ್ದ ಬೆಂಕಿ ….!

ಹೈದರಾಬಾದ್: ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪೆಟ್ರೋಲ್ ಪಂಪ್‌ನಲ್ಲಿ ಲೈಟರ್ ಹಚ್ಚಿ ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ಹೈದರಾಬಾದಿನಲ್ಲಿ ನಡೆದಿದ್ದು, ನಂತರ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಚಿರನ್ ಎಂದು ಗುರುತಿಸಲಾಗಿದೆ. ಆತ ಕುಡಿದ ಸ್ಥಿತಿಯಲ್ಲಿ ಕೈಯಲ್ಲಿ ಸಿಗರೇಟ್ ಲೈಟರ್‌ ಹಿಡಿದು … Continued

ಶಾರ್ಟ್ ಸರ್ಕ್ಯೂಟ್‌ನಿಂದ ಭಾರಿ ಬೆಂಕಿ : ಒಂದೇ ಕುಟುಂಬದ 7 ಮಂದಿ ಸಾವು

ಮುಂಬೈ: ಮುಂಬೈನ ಚೆಂಬೂರಿನಲ್ಲಿ ಎರಡು ಅಂತಸ್ತಿನ ಅಂಗಡಿ ಮತ್ತು ವಸತಿ ಕಟ್ಟಡದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಏಳು ಜನರು ಸಾವಿಗೀಡಾಗಿದ್ದಾರೆ. ಸಿದ್ದಾರ್ಥ ಕಾಲೋನಿಯಲ್ಲಿರುವ ಕಟ್ಟಡದಲ್ಲಿ ಭಾನುವಾರ ಮುಂಜಾನೆ 5:20ರ ಸುಮಾರಿಗೆ ಅಪಘಾತ ಸಂಭವಿಸಿದೆ. ಕಟ್ಟಡದ ನೆಲ ಮಹಡಿಯನ್ನು ಅಂಗಡಿಯಾಗಿ ಮತ್ತು ಮೇಲಿನ ಮಹಡಿಯನ್ನು ನಿವಾಸವಾಗಿ ಬಳಸಲಾಗುತ್ತಿತ್ತು ಎಂದು … Continued

ವೀಡಿಯೊ..| ರಸ್ತೆ ಪಕ್ಕ ನಿಂತು ಬೀಡಿಗೆ ಬೆಂಕಿ ಹಚ್ಚಿ ಹೊಗೆ ಬಿಡುವ ಮುನ್ನವೇ ಅಂಗಡಿ-ವಾಹನಗಳು ಬೆಂಕಿ ಜ್ವಾಲೆಗೆ ಸುಟ್ಟು ಭಸ್ಮ..!

ಹೈದರಾಬಾದ್: ಆಘಾತಕಾರಿ ವಿದ್ಯಮಾನದಲ್ಲಿ, ಬೀಡಿ ಸೇದಿ ಎಸೆದ ಬೆಂಕಿ ಕಡ್ಡಿ ಬೆಂಕಿ ಅವಘಡಕ್ಕೆ ಕಾರಣವಾಗಿ, ಅನೇಕ ವಾಹನಗಳು-ಅಂಗಡಿಗಳು ಬೆಂಕಿಗೆ ಆಹುತಿಯಾದ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ಸಂಭವಿಸಿದೆ. ಸ್ಥಳೀಯರ ಕ್ಷಿಪ್ರ ಕ್ರಮದಿಂದಾಗಿ ಹೆಚ್ಚಿನ ಹಾನಿಯನ್ನು ತಡೆಯಲಾಗಿದೆ. ಆ ವ್ಯಕ್ತಿ ಬೀಡಿ ಹಚ್ಚಿ ನೆಲಕ್ಕೆ ಬೆಂಕಿಕಡ್ಡಿ ಎಸೆದ ನಂತರ ಬೆಂಕಿ ಹೊತ್ತುಕೊಂಡ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ … Continued

ವೀಡಿಯೊ..| 27 ಮಂದಿ ಮೃತಪಟ್ಟ ರಾಜ​ಕೋಟ್​ ಗೇಮ್​ ಝೋನ್​ ದುರಂತ ; ವೆಲ್ಡಿಂಗ್‌ ಕಿಡಿಗಳಿಂದ ಬೆಂಕಿ ಹೊತ್ತಿಕೊಂಡಿದ್ದನ್ನು ತೋರಿಸಿದ ವೀಡಿಯೊ..

ಎರಡು ದಿನಗಳ ಹಿಂದೆ ಗುಜರಾತಿನ ರಾಜ್‌ಕೋಟದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ 27 ಜನರು ಸಾವಿಗೆ ಕಾರಣವಾದ ಬೆಂಕಿ ಅವಘಡವು ವೆಲ್ಡಿಂಗ್ ಯಂತ್ರದ ಕಿಡಿಗಳಿಂದ ಸಂಭವಿಸಿದೆ ಎಂದು ವರದಿಯಾಗಿದೆ. ಅದು ಅಮ್ಯೂಸ್‌ಮೆಂಟ್ ಪಾರ್ಕ್‌ನ ಗೇಮ್ ಝೋನ್‌ನಲ್ಲಿ ಸಂಗ್ರಹಿಸಿಟ್ಟಿದ್ದ ದಹನಕಾರಿ ವಸ್ತುಗಳ “ರಾಶಿ” ಮೇಲೆ ಬೆಂಕಿ ಕಿಡಿ ಬಿದ್ದಿದೆ. ಮೇ 25ರ ಸಂಜೆ, ಬೇಸಿಗೆ ರಜೆಯ ವಿಹಾರವನ್ನು … Continued

ಒಂದೇ ಕುಟುಂಬದ ಮೂವರು ಸಜೀವ ದಹನ : ಮತ್ತೊಬ್ಬ ಗಂಭೀರ

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಅರಳಸುರಳಿ ಬಳಿಯ ಕೆಕೋಡ ಗ್ರಾಮದಲ್ಲಿ ಒಂದೇ ಮನೆಯ ಮೂವರು ಸುಟ್ಟುಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಈ ಘಟನೆ ಶನಿವಾರ ರಾತ್ರಿ ನಡೆದಿದೆ ಎನ್ನಲಾಗಿದ್ದು, ಮತ್ತೊಬ್ಬರು ಗೋಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅರ್ಚಕ ವೃತ್ತಿಯಲ್ಲಿದ್ದ ರಾಘವೇಂದ್ರ ಕೆಕೋಡ್ (63), ಅವರ ಪತ್ನಿ ನಾಗರತ್ನಾ (55), ಹಿರಿಯ … Continued

ಸಿಎಂ ಬೊಮ್ಮಾಯಿ ಇದ್ದ ಹೆಲಿಕಾಪ್ಟರ್‌ ಲ್ಯಾಂಡ್‌ ಆದ ಹೆಲಿಪ್ಯಾಡ್‌ ಬಳಿ ಆಕಸ್ಮಿಕ ಬೆಂಕಿ : ಕೆಲಕಾಲ ಆತಂಕ

ಉಡುಪಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿದ್ದ ಹೆಲಿಕಾಪ್ಟರ್‌ ಹಾರಾಟ ನಡೆಸುವ ಹೆಲಿಪ್ಯಾಡ್‌ ಬಳಿ ಕಾಣಿಸಿಕೊಂಡ ಬೆಂಕಿ ಕೆಲಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ವರದಿಯಾಗಿದೆ. ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಹೋಗುವ ಸಲುವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಉಡುಪಿ ಜಿಲ್ಲೆಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್‌ಗೆ ಬಂದಿದ್ದರು. ಅಲ್ಲಿಂದ ಕೊಲ್ಲೂರಿಗೆ ಹೋಗಲು ಅಲ್ಲಿಂದ ನಿರ್ಗಮಿಸಿದ ಬಳಿಕ ಹೆಲಿಪ್ಯಾಡ್‌ … Continued

ಪ್ಲಾಸ್ಟಿಕ್ ಅಂಗಡಿಯಲ್ಲಿ ಬೆಂಕಿ ಅವಘಡ: ಇಬ್ಬರು ಸಜೀವ ದಹನ

ವಿಜಯಪುರ: ಪ್ಲಾಸ್ಟಿಕ್ ಅಂಗಡಿಯೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವ ದಹನಗೊಂಡ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 50ರಲ್ಲಿನ ಬಸವನಬಾಗೇವಾಡಿ ಕ್ರಾಸ್ ಬಳಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಅಶೋಕ ದೇಸ್ನೂಯಿ(25), ಲಿಂಬಾರಾಮ ದೇಸ್ನೂಯಿ(35) ಸಜೀವ ದಹನಗೊಂಡವರು ಎಂದು ಗುರುತಿಸಲಾಗಿದೆ. ರಾತ್ರಿ ಅಂಗಡಿಯಲ್ಲೇ ಮಲಗಿದ್ದ ಇವರಿಬ್ಬರು ಸಜೀವ ದಹನವಾಗಿದ್ದಾರೆ. ಈ … Continued

ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ, ಜೀವಹಾನಿಯಾಗಿಲ್ಲ: ಸ್ಪಷ್ಟನೆ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶನಿವಾರ ಶತಾಬ್ದಿ ಎಕ್ಸ್ ಪ್ರೆಸ್ ಜನರೇಟರ್ ಮತ್ತು ಲಗೇಜ್‌ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 6-45ರ ಸುಮಾರಿನಲ್ಲಿ ಘಟನೆ ಸಂಭವಿಸಿದ್ದು, ನವದೆಹಲಿ- ಲಖನೌ ಶತಾಬ್ದಿ ಎಕ್ಸ್ ಪ್ರೆಸ್ ಬೆಳಗ್ಗೆ 6-41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ಬಂದಾಗ ಜನರೇಟರ್ ಮತ್ತು ಲಗ್ಗೇಜ್ … Continued

ರಮೇಶ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ವೇಳೆ ಮೈಗೆ ತಗುಲಿದ ಬೆಂಕಿ

ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದು, ಅವರ ಕ್ಷೇತ್ರವಾದ ಬೆಳಗಾವಿ ಜಿಲ್ಲೆಯ ಗೋಕಾಕಿನಲ್ಲಿ ಅವರ ಬೆಂಬಲಿಗರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ವೇಳೆ ಬೆಂಬಲಿಗನ ಮೈಗೆ ಬೆಂಕಿ ತಗುಲಿದ ಘಟನೆಯೂ ವರದಿಯಾಗಿದೆ. ಗೋಕಾಕಿನಲ್ಲಿ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ ಹೆಚ್ಚುತ್ತಿದ್ದು, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಸಂರ್ಭದಲ್ಲಿ ಆವೇಸಕ್ಕೊಳಗಾದ … Continued