ಧಾರವಾಡ : ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಇಬ್ಬರು ಸಾವು

ಧಾರವಾಡ: ಕಾರು ಪಲ್ಟಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡ ತಾಲೂಕಿನ ತೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಮೃತರನ್ನು ವಿನಯ ಹಿರೇಮಠ (24) ಹಾಗೂ ಸಂದೀಪ (29) ಎಂದು ಗುರುತಿಸಲಾಗಿದೆ. ಧಾರವಾಡದಿಂದ ದಾಬಾಕ್ಕೆ ಊಟಕ್ಕೆಂದು ಹೋಗಿದ್ದ ಇವರು ಊಟ ಮಾಡಿಕೊಂಡು ವಾಪಸ್‌ ಬರುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದರಿಂದ ಓರ್ವ ಸ್ಥಳದಲ್ಲೇ … Continued

ಉಡುಪಿ: ಸೀತಾನದಿ ಬಳಿ ಭೀಕರ ಅಪಫಾತ ; ಇಬ್ಬರು ಶಿಕ್ಷಕರು ಸಾವು, ಮತ್ತೊಬ್ಬರು ಗಂಭೀರ

ಉಡುಪಿ: ಖಾಸಗಿ ಬಸ್‌ ಮತ್ತು ಕಾರಿನ ನಡುವೆ ನಡೆದ ಡಿಕ್ಕಿಯಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ–ಆಗುಂಬೆ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಸೋಮೇಶ್ವರದ ಸೀತಾನದಿ ಎಂಬಲ್ಲಿ ಭಾನುವಾರ ಸಂಭವಿಸಿದೆ ಎಂದು ವರದಿಯಾಗಿದೆ. ಸೀತಾನದಿ ಜಕ್ಕನಮಕ್ಕಿ ಬಳಿ ನಡೆದ ಈ ಅಪಘಾತದಲ್ಲಿ ಉಡುಪಿ ಮೂಲದ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, … Continued

ನಿಂತಿದ್ದ ಬಸ್‌ಗೆ ಟೆಂಪೋ ಟ್ರಾವಲ್ಸ್‌ ಡಿಕ್ಕಿ; ಇಬ್ಬರ ಸಾವು, ನಾಲ್ವರಿಗೆ ಗಂಭೀರ ಗಾಯ

ತುಮಕೂರು: ನಿಂತಿದ್ದ ಬಸ್‌ಗೆ ವೇಗವಾಗಿ ಬಂದ ಟೆಪೋ ಟ್ರಾವಲ್ಸ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಡಿ ಹೊಸಹಳ್ಳಿ ಗ್ರಾಮದ ಬಳಿ (ರಾಜ್ಯ ಹೆದ್ದಾರಿ 33) ನಡೆದಿದೆ ಎಂದು ವರದಿಯಾಗಿದೆ. ಮೃತರನ್ನು ರಾಯಚೂರು ಜಿಲ್ಲೆ ಸಿಂಧನೂರು ನಿವಾಸಿಗಳಾದ ಟಿಟಿ … Continued

ಸಿದ್ದಾಪುರ: ಹೊಳೆಯ ಗುಂಡಿಗೆ ಬಿದ್ದು ಇಬ್ಬರು ಸಾವು

ಸಿದ್ದಾಪುರ: ಜಮೀನಿನ ಪಕ್ಕದಲ್ಲಿರುವ ಹೊಳೆಯ ಗುಂಡಿಯ ಬದಿಯಲ್ಲಿನ ಗಿಡಗಂಟಿಗಳನ್ನು ಸವರುತ್ತಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಸಮೀಪದ ಇರಾಸೆಯಲ್ಲಿ ಶನಿವಾರ ಸಂಜೆ ನಡೆದ ವರದಿಯಾಗಿದೆ. ಮೃತರನ್ನು ಹಾರ್ಸಿಕಟ್ಟಾ ಕಂಚಿಮನೆಯ ದೇವಾನಂದ ಧರ್ಮ ಮಡಿವಾಳ(೩೫) ಹಾಗೂ ಮಾಬ್ಲೇಶ್ವರ ಮಂಜ ಮಡಿವಾಳ(೪೮) ಎಂದು ಗುರುತಿಸಲಾಗಿದೆ. ಇರಾಸೆಯ ಮಂಜುನಾಥ … Continued

ಮುಲ್ಕಿ : ಟ್ಯಾಂಕರ್ -ಸ್ಕೂಟರ್‌ ಡಿಕ್ಕಿ-ಇಬ್ಬರು ಸ್ಥಳದಲ್ಲೇ ಸಾವು

ಮಂಗಳೂರು : ಸ್ಕೂಟರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಗಂಡ ಹೆಂಡತಿ ಇಬ್ಬರೂ ಮೃತಪಟ್ಟ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ನಡೆದ ಬಗ್ಗೆ ವರದಿಯಾಗಿದೆ. ಮೃತರನ್ನು ತೀರ್ಥಹಳ್ಳಿ ಕೋಳಿಕಾಲುಗುಡ್ಡೆ ನಿವಾಸಿಗಳಾದ ಅಕ್ಬರ್ ಭಾಷಾ (61) ಹಾಗೂ ಖತೀಜಾ ಬಿ (46) ಎಂದು ಗುರುತಿಸಲಾಗಿದೆ. ಪಾಸ್ ಪೋರ್ಟ್ ಮಾಡಿಸಲೆಂದು … Continued

ಕಡಬ: ಕಾಡಾನೆ ದಾಳಿಗೆ ಯುವತಿ ಸೇರಿ ಇಬ್ಬರು ಸಾವು

ಮಂಗಳೂರು: ಇಂದು, ಸೋಮವಾರ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಯಿಂದ ಯುವತಿ ಸೇರಿ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ರೆಂಜಿಲಾಡಿ ಗ್ರಾಮದ ಬಳಿ ನೈಲ ಎಂಬಲ್ಲಿ ನಡೆದ ವರದಿಯಾಗಿದೆ. ಇಂದು, ಸೋಮವಾರ ಬೆಳಿಗ್ಗೆ 6:30ರ ಸುಮಾರಿಗೆ ಕಾಡಾನೆ ದಾಳಿ ನಡೆಸಿದೆ. ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ(21) ಎಂಬವರು ಸೋಮವಾರ ಮನೆಯಿಂದ ಹಾಲು ಡೈರಿಗೆ … Continued

ಯಲ್ಲಾಪುರ: ಲಾರಿ ಕಂದಕಕ್ಕೆ ಉರುಳಿ ಸ್ಥಳದಲ್ಲೇ ಇಬ್ಬರ ಸಾವು

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರ ಅರಬೈಲ್ ಘಾಟ್’ನ ಯು ಟರ್ನ್ ಬಳಿ ಲಾರಿಯೊಂದು ಕಂದಕಕ್ಕೆ ಉರುಳಿ ಬಿದ್ದು ಭೀಕರ ಅಪಘಾತ ಸಂಭವಿಸಿದ್ದು ಲಾರಿ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇದು ಆಂಧ್ರಪ್ರದೇಶದ ಲಾರಿಯಾಗಿದ್ದು ಗ್ರಾನೈಟ್ ತುಂಬಿಕೊಂಡು ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿತ್ತು ಎಂದು ಹೇಳಲಾಗಿದೆ. ಈ … Continued

ಶಾಲಾ ಬಸ್ – ಗೂಡ್ಸ್ ವಾಹನದ ನಡುವೆ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬೆಳಗಾವಿ : ಶನಿವಾರ ಬೆಳ್ಳಂಬೆಳಿಗ್ಗೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣ ಹೊರವಲಯದಲ್ಲಿ ವಿದ್ಯಾರ್ಥಿನಿಯರಿದ್ದ ಶಾಲಾ ಬಸ್‌ ಹಾಗೂ ಗೂಡ್ಸ್‌ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಥಣಿ ಪಟ್ಟಣದ ಬಣಜವಾಡ ಶಾಲೆಗೆ ಸೇರಿದ ವಾಹನ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಅಸುನೀಗಿದ್ದಾರೆ. ಬಸ್‌ನಲ್ಲಿದ್ದ 10 … Continued

ಕೊಪ್ಪಳ ಜಿಲ್ಲೆಯಲ್ಲಿ ಎರಡು ಗುಂಪಿನ ನಡುವೆ ಮಾರಾಮಾರಿ: ಇಬ್ಬರ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಕೊಪ್ಪಳ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಗುರುವಾರ ಬೆಳಗ್ಗೆ ಮಾರಾಮಾರಿ ನಡೆದು ಇಬ್ಬರು ಸಾವಿಗೀಡಾದ ಘಟನೆ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ. ಓರ್ವ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತರನ್ನು ಯಕಪ್ಪ ತಳವಾರ (60) ಮತ್ತು ಬಾಷಾಸಾಬ(22) ಎಂದು ಗುರುತಿಸಲಾಗಿದೆ. ಧರ್ಮಣ್ಣ ಎಂಬವರಿನಿಗೆ ಗಂಭೀರ ಗಾಯವಾಗಿದ್ದು, … Continued

ಯಲ್ಲಾಪುರ: ಗುಳ್ಳಾಪುರ ಸಮೀಪ ಬೈಕ್‌ಗೆ ಲಾರಿ ಡಿಕ್ಕಿ, ಇಬ್ಬರ ಸಾವು

ಯಲ್ಲಾಪುರ: ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ಸೋಮವಾರ ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಉತ್ತರ ಕನ್ನಡ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸಮೀಪದ ಇಂಚರ ಹೊಟೇಲ್ ಬಳಿ ನಡೆದಿದೆ. ಮೃತರನ್ನು ಮಹಂತೇಶ ರೇವಣಪ್ಪ ಶೀಲವಂತರ( ೨೩) ಹುಬ್ಬಳ್ಳಿ, ಹಾಗೂ ಸುಮಿತ್ ಅಶೋಕ ಬಸವಾ (೨೫) ಹಳೆ ಹುಬ್ಬಳ್ಳಿ ಎಂದು ಗುರುತಿಸಲಾಗಿದೆ. … Continued