ಪಂಜಾಬ್ ಸ್ಥಳೀಯ ಸಂಸ್ಥೆ ಚುನಾವಣೆ: ‘ಕೈ’ ಕೋಟೆಯಲ್ಲಿ ಎಎಪಿ ಜಯಭೇರಿ; ಸ್ಥಾನ ಸುಧಾರಿಸಿಕೊಂಡ ಬಿಜೆಪಿ

ಚಂಡೀಗಢ: ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಇರುವಾಗಲೇ ನಡೆದಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ (ಎಎಪಿ) ಜಯಭೇರಿ ಬಾರಿಸಿದೆ. ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಗಳು ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಎಎಪಿ ಸ್ಪಷ್ಟ ಬಹುಮತದೊಂದಿಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಫಲಿತಾಂಶವನ್ನು ತಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಸೂಚಿಗೆ … Continued

ನಾಲ್ಕು ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸಿದ ಬಿಜೆಪಿ

ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನಬಿನ್ ಅವರು ಗುರುವಾರ ಪಕ್ಷದ ಸಂಘಟನಾತ್ಮಕ ವಿಭಾಗದಲ್ಲಿ ಮಹತ್ವದ ಬದಲಾವಣೆಗಳನ್ನು ಪ್ರಕಟಿಸಿದ್ದು, ದೇಶದ ಪ್ರಮುಖ ನಾಲ್ಕು ರಾಜ್ಯಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಪಂಜಾಬ್, ಹರಿಯಾಣ, ದೆಹಲಿ ಮತ್ತು ತ್ರಿಪುರಾ ರಾಜ್ಯಗಳ ಬಿಜೆಪಿ ಘಟಕಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಈ ಕುರಿತು ಪಕ್ಷದ … Continued

ಹೆದ್ದಾರಿಯಲ್ಲಿ ಸಿಸಿಟಿವಿ ಇಟ್ಟು ಸೇನೆಯ ರಹಸ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ವ್ಯಕ್ತಿಯ ಬಂಧನ

ನವದೆಹಲಿ: ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ಸಕ್ರಿಯವಾಗಿದ್ದ ಶಂಕಿತ ಬೇಹುಗಾರಿಕಾ ( espionage) ಜಾಲವನ್ನು ಭೇದಿಸುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳ ಚಲನವಲನದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಹ್ಯಾಂಡ್ಲರ್‌ಗಳಿಗೆ (ನಿರ್ವಹಣಾಕಾರರು) ರವಾನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಚಕ್ ಧರಿವಾಲ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಎಂದು ಗುರುತಿಸಲಾಗಿದೆ. ಈತ ಸೇನೆ … Continued

ಮೈ ಜುಂ ಎನಿಸುವ ವಿಡಿಯೋ | ದೇವಸ್ಥಾನದಿಂದ ಬರುವಾಗ 200 ಅಡಿ ಆಳದ ಪ್ರಪಾತಕ್ಕೆ ಬಿದ್ದ ಕಾರು, ಇಬ್ಬರು ಸಜೀವ ದಹನ

ಉನಾ : ದೇವಿಯ ದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಚಲಿಸುತ್ತಿದ್ದ ಕಾರಿನಲ್ಲೇ ಬೆಂಕಿ ಕಾಣಿಸಿಕೊಂಡು, ನಿಯಂತ್ರಣ ತಪ್ಪಿದ ವಾಹನ ಕಾರು 200 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದು ಇಬ್ಬರು ಭಕ್ತರು ಭೀಕರವಾಗಿ ಸಾವಿಗೀಡಾದ ಘಟನೆ ಪಂಜಾಬ್-ಹಿಮಾಚಲ ಗಡಿಯ ಭರ್ವೈನ್-ಹೋಷಿಯಾರ್‌ಪುರ ರಸ್ತೆಯಲ್ಲಿ ನಡೆದಿದೆ. ಬುಧವಾರ ಮಧ್ಯಾಹ್ನ ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪವಿತ್ರ ಚಿಂತಪೂರ್ಣಿ ದೇವಸ್ಥಾನದಿಂದ … Continued

ಪತಿ ನಾಪತ್ತೆ…ಮೈದುನನನ್ನೇ ಮದುವೆಯಾಗಿದ್ದ ಪತ್ನಿ…25 ವರ್ಷಗಳ ನಂತರ ಮರಳಿ ಬಂದ ಪತಿ…ಪತ್ನಿಗೆ ಈಗ ಧರ್ಮಸಂಕಟ

ಬಿಜ್ನೋರ್​ : ಇದು ಸಿನಿಮೀಯ ತಿರುವುಗಳನ್ನೂ ಮೀರಿಸುವಂತಹ ಒಂದು ಹೃದಯವಿದ್ರಾವಕ ಮತ್ತು ಅಷ್ಟೇ ಸಂಕೀರ್ಣವಾದ ಘಟನೆ. 25 ವರ್ಷಗಳ ಹಿಂದೆ ನಾಪತ್ತೆಯಾಗಿ, ಮನೆಯವರು ಸತ್ತೇ ಹೋಗಿದ್ದಾನೆ ಎಂದು ಭಾವಿಸಿದ್ದ ವ್ಯಕ್ತಿಯೊಬ್ಬ ಹಠಾತ್ ಪ್ರತ್ಯಕ್ಷನಾಗಿದ್ದಾನೆ. ಈತನ ಪುನರಾಗಮನವು ಕುಟುಂಬದಲ್ಲಿ ಸಂತೋಷಕ್ಕಿಂತ ಹೆಚ್ಚಾಗಿ ಕಾನೂನಾತ್ಮಕ ಮತ್ತು ಸಾಮಾಜಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಂಜಾಬ್‌ನ ಕಪುರ್ಥಲಾ ಜಿಲ್ಲೆಯ ಶಿವದಯಾಳ ವಾಲಾ ಗ್ರಾಮದ … Continued

ಚಂಡೀಗಢದ ಪಂಜಾಬ್ ಬಿಜೆಪಿ ಕಚೇರಿ ಬಳಿ ಸ್ಫೋಟ

ಚಂಡೀಗಢ: ಚಂಡೀಗಢದ ಸೆಕ್ಟರ್ 37ರಲ್ಲಿರುವ ಪಂಜಾಬಿನ ಬಿಜೆಪಿ ರಾಜ್ಯ ಕಚೇರಿಯ ಪಾರ್ಕಿಂಗ್ ಪ್ರದೇಶದಲ್ಲಿ ಬುಧವಾರ ಸಂಜೆ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಸಾವು-ನೋವು ಅಥವಾ ಗಾಯಗಳಾದ ಬಗ್ಗೆ ವರದಿಯಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಇಬ್ಬರು ವ್ಯಕ್ತಿಗಳು ಈ ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಒಬ್ಬ ವ್ಯಕ್ತಿ ಕೈಯಲ್ಲಿ ಹೆಲ್ಮೆಟ್ ಹಿಡಿದಿದ್ದರೆ, ಮತ್ತೊಬ್ಬ ವಿಡಿಯೋ … Continued

ಪತ್ನಿ ಕೊಲೆ ಪ್ರಕರಣ : 4 ವರ್ಷದಿಂದ ತಲೆಮರೆಸಿಕೊಂಡಿದ್ದ ಮಾಜಿ ಸೇನಾಧಿಕಾರಿ ಸಿಕ್ಕಿಬಿದ್ದಿದ್ದೇ ರೋಚಕ ; ಮುಳುವಾಯ್ತು ಗ್ಯಾಸ್ ಬುಕ್ಕಿಂಗ್…!

ಭೋಪಾಲ: ತನ್ನ ಪತ್ನಿಯನ್ನೇ ಹತ್ಯೆಗೈದು, ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡು ಬೇರೆ ಬೇರೆ ರಾಜ್ಯಗಳಲ್ಲಿ ಅಲೆದಾಡುತ್ತಿದ್ದ ಮಾಜಿ ಸೇನಾ ಕ್ಯಾಪ್ಟನ್ ಸಂದೀಪ ತೋಮರ್ ಎಂಬಾತ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಧ್ಯಪ್ರದೇಶದ ಪಾಂಡುರ್ನಾ ಜಿಲ್ಲೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ರಾಷ್ಟ್ರೀಯ ಗುಪ್ತಚರ ಗ್ರಿಡ್ (NATGRID) ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಿವೆ. ಎಲ್‌ಪಿಜಿ … Continued

88ನೇ ವಯಸ್ಸಿನಲ್ಲೂ ಪ್ರತಿನಿತ್ಯ ಚಂಡಿಗಢದ ಬೀದಿಗಳನ್ನು ಸ್ವಚ್ಛಗೊಳಿಸುವ ನಿವೃತ್ತ ಡಿಐಜಿಗೆ ಒಲಿದ ಪದ್ಮಶ್ರೀ

ಚಂಡೀಗಢ: ವಯಸ್ಸು ಎಂಬುದು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಸಾಬೀತುಪಡಿಸಿದ ಪಂಜಾಬ್ ಪೊಲೀಸ್ ಇಲಾಖೆಯ 80 ವರ್ಷದ ನಿವೃತ್ತ ಡಿಐಜಿ, ಐಪಿಎಸ್‌ ಇಂದರ್ಜಿತ್ ಸಿಂಗ್ ಸಿಧು ಅವರಿಗೆ ಕೇಂದ್ರ ಸರ್ಕಾರವು ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ಘೋಷಿಸಿದೆ. ಗಣರಾಜ್ಯೋತ್ಸವದ ಮುನ್ನಾದಿನವಾದ ಭಾನುವಾರ ಪ್ರಕಟವಾದ ಪಟ್ಟಿಯಲ್ಲಿ ಇವರ ಹೆಸರು ಪ್ರಮುಖವಾಗಿ ಗಮನ ಸೆಳೆದಿದೆ.  ಇಂದರ್ಜಿತ್ ಸಿಂಗ್ ಸಿಧು ಅವರು 1963ರಲ್ಲಿ … Continued

ಕಬಡ್ಡಿ ಆಟಗಾರನ ಹತ್ಯೆ ಆರೋಪಿ ಪೊಲೀಸ್ ಎನ್‌ ಕೌಂಟರಿನಲ್ಲಿ ಸಾವು

ಮೊಹಾಲಿ: ಪ್ರಖ್ಯಾತ ಕಬಡ್ಡಿ ಕ್ರೀಡಾಪಟು ಹಾಗೂ ಆಯೋಜಕ ಕನ್ವರ್ ದಿಗ್ವಿಜಯ ಸಿಂಗ್ ಅಲಿಯಾಸ್ ರಾಣಾ ಬಾಲಚೌರಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಕರಣ ಪಾಠಕ್ ಅಲಿಯಾಸ್ ಕರಣ್ ಡಿಫಾಲ್ಟರ್ ಎಂಬಾತ ಶನಿವಾರ ಪಂಜಾಬ್ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿದೆ. ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಈತನನ್ನು ಮೊಹಾಲಿಯ ಖರಾರ್ ಎಂಬಲ್ಲಿ ಪೊಲೀಸರು … Continued

ಸೋಫಾದಿಂದ ಏಳುವಾಗ ಸೊಂಟದಲ್ಲಿದ್ದ ಪಿಸ್ತೂಲ್ ಸಿಡಿದು ಅನಿವಾಸಿ ಭಾರತೀಯ ಸಾವು

ಫಿರೋಜಪುರ: ಸೋಫಾದಿಂದ ಎದ್ದೇಳುವಾಗ ಸೊಂಟದ ಪಟ್ಟಿಯಲ್ಲಿದ್ದ ಲೋಡ್ ಆಗಿದ್ದ ಪಿಸ್ತೂಲ್ ಆಕಸ್ಮಿಕವಾಗಿ ಸಿಡಿದ ಪರಿಣಾಮ ಅನಿವಾಸಿ ಭಾರತೀಯರೊಬ್ಬರು (NRI) ಮೃತಪಟ್ಟ ದಾರುಣ ಘಟನೆ ಪಂಜಾಬಿನ ಫಿರೋಜ್‌ಪುರ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಮೃತರನ್ನು ಧನಿ ಸುಚಾ ಸಿಂಗ್ ಗ್ರಾಮದ ನಿವಾಸಿ ಹರ್ಪಿಂದರ ಸಿಂಗ್ ಅಲಿಯಾಸ್ ಸೋನು ಎಂದು ಗುರುತಿಸಲಾಗಿದೆ. ಹರ್ಪಿಂದರ ಅವರು ಇತ್ತೀಚೆಗಷ್ಟೇ ವಿದೇಶದಿಂದ ಮರಳಿ ಗ್ರಾಮದಲ್ಲಿ … Continued