ಕಬಡ್ಡಿ ಆಟಗಾರನ ಹತ್ಯೆ ಆರೋಪಿ ಪೊಲೀಸ್ ಎನ್‌ ಕೌಂಟರಿನಲ್ಲಿ ಸಾವು

ಮೊಹಾಲಿ: ಪ್ರಖ್ಯಾತ ಕಬಡ್ಡಿ ಕ್ರೀಡಾಪಟು ಹಾಗೂ ಆಯೋಜಕ ಕನ್ವರ್ ದಿಗ್ವಿಜಯ ಸಿಂಗ್ ಅಲಿಯಾಸ್ ರಾಣಾ ಬಾಲಚೌರಿಯಾ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಕರಣ ಪಾಠಕ್ ಅಲಿಯಾಸ್ ಕರಣ್ ಡಿಫಾಲ್ಟರ್ ಎಂಬಾತ ಶನಿವಾರ ಪಂಜಾಬ್ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿದೆ.
ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ ಈತನನ್ನು ಮೊಹಾಲಿಯ ಖರಾರ್ ಎಂಬಲ್ಲಿ ಪೊಲೀಸರು ಎನ್‌ಕೌಂಟರ್ ಮಾಡಿದ್ದಾರೆ. ಘಟನೆಯ

ಡಿಸೆಂಬರ್ 15, 2025 ರಂದು ಮೊಹಾಲಿಯ ಸೊಹಾನಾದಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯ ವೇಳೆ ಕಬಡ್ಡಿ ಆಟಗಾರ 30 ವರ್ಷದ ರಾಣಾ ಬಾಲಚೌರಿಯಾ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಸರದ ಕರಣ ಪಾಠಕ್, ಆತನ ಸಹಚರ ತರಣದೀಪ್ ಸಿಂಗ್ ಎಂಬಾತನನ್ನು ಪಶ್ಚಿಮ ಬಂಗಾಳದಲ್ಲಿ ಪಂಜಾಬ್ ಪೊಲೀಸರ ಎಂಟಿ ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ (AGTF) ಇತ್ತೀಚೆಗಷ್ಟೇ ಬಂಧಿಸಿತ್ತು.ಮೊಹಾಲಿ ಎಸ್‌ಎಸ್‌ಪಿ ಹರ್ಮನ್‌ದೀಪ್ ಸಿಂಗ್ ಹನ್ಸ್ ಅವರ ಪ್ರಕಾರ, ಕರಣ ಪಾಠಕ್ ಸಿಐಎ (CIA) ವಶದಲ್ಲಿದ್ದನು. ಶುಕ್ರವಾರ ರಾತ್ರಿ 11:30 ರ ಸುಮಾರಿಗೆ ಆತ ಎದೆನೋವು ಎಂದು ಹೇಳಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ದಟ್ಟವಾದ ಮಂಜಿನಿಂದಾಗಿ ಪೊಲೀಸ್ ವಾಹನವು ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದಾಗ, ಆ ಸಂದರ್ಭವನ್ನು ಬಳಸಿಕೊಂಡು ಕರಣ್ ಪೊಲೀಸರಿಂದ ತಪ್ಪಿಸಿಕೊಂಡಿದ್ದ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಆರೋಪಿ ತಪ್ಪಿಸಿಕೊಳ್ಳುತ್ತಿದ್ದಂತೆ ಪೊಲೀಸರು ತೀವ್ರ ಶೋಧ ಕಾರ್ಯ ಆರಂಭಿಸಿದ್ದರು. ಶನಿವಾರ ಬೆಳಿಗ್ಗೆ 6:30 ರ ಸುಮಾರಿಗೆ ಖರಾರ್ ಬಳಿ ಆತ ಪತ್ತೆಯಾದಾಗ, ಶರಣಾಗುವಂತೆ ಪೊಲೀಸರು ಸೂಚಿಸಿದರು. ಆದರೆ, ಆತ ಪೊಲೀಸರ ಮೇಲೆ ಸುಮಾರು 6 ರಿಂದ 7 ಸುತ್ತು ಗುಂಡು ಹಾರಿಸಿದ್ದಾನೆ. ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಕರಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಅಧಕಾರಿಗಳು ತಿಳಿಸಿದ್ದಾರೆ.
ತಪ್ಪಿಸಿಕೊಂಡಿದ್ದ ಕೆಲವೇ ಗಂಟೆಗಳಲ್ಲಿ ಆರೋಪಿಗೆ ಶಸ್ತ್ರಾಸ್ತ್ರ ಎಲ್ಲಿಂದ ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್‌ಎಸ್‌ಪಿ, ಆತ ತಲೆಮರೆಸಿಕೊಂಡಿದ್ದ 6-7 ಗಂಟೆಗಳ ಅವಧಿಯಲ್ಲಿ ತಾನು ಮೊದಲೇ ಬಚ್ಚಿಟ್ಟಿದ್ದ ಜಾಗದಿಂದ ಆಯುಧವನ್ನು ಪಡೆದಿರಬಹುದು ಎಂದು ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement