ʼಭಾರತೀಯರು ಸೋಮಾರಿಗಳು, ಕಡಿಮೆ ಬುದ್ಧಿವಂತರೆಂದು ನೆಹರೂ ಭಾವಿಸಿದ್ರು, ಇಂದಿರಾ ಗಾಂಧಿ ಇದಕ್ಕಿಂತ ಭಿನ್ನವಾಗಿ ಯೋಚಿಸಲಿಲ್ಲ’: ಪ್ರಧಾನಿ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ ನೆಹರೂ ಅವರು ಅಮೆರಿಕ ಮತ್ತು ಚೀನಾದವರಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆಯುಳ್ಳವರು ಎಂದು ಭಾವಿಸಿದ್ದರು ಎಂದು ಹೇಳಿದ್ದಾರೆ.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ‘ಧನ್ಯವಾದಗಳ ನಿರ್ಣಯ’ಕ್ಕೆ ನೀಡಿದ ಉತ್ತರದಲ್ಲಿ, ಪ್ರಧಾನಿ ಮೋದಿ ಸುಮಾರು 2 ಗಂಟೆಗಳ ತಮ್ಮ ಭಾಷಣದಲ್ಲಿ, ಭಾರತೀಯರು ಕಷ್ಟಕ್ಕೆ ಹೆದರಿ ಓಡಿಹೋಗುತ್ತಾರೆ ಎಂಬ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇಳಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.
“ಪ್ರಧಾನಿ ನೆಹರೂ ಅವರು ಕೆಂಪು ಕೋಟೆಯಿಂದ ಹೇಳಿದ್ದನ್ನು ನಾನು ಓದುತ್ತೇನೆ. ‘ಭಾರತೀಯರಿಗೆ ಸಾಮಾನ್ಯವಾಗಿ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವಿಲ್ಲ, ನಾವು ಯುರೋಪ್ ಅಥವಾ ಜಪಾನ್ ಅಥವಾ ಚೀನಾ ಅಥವಾ ರಷ್ಯಾ ಅಥವಾ ಅಮೆರಿಕದ ಜನರಂತೆ ನಾವು ಕೆಲಸ ಮಾಡುವುದಿಲ್ಲ ಎಂದು ನೆಹರೂ ಹೇಳಿಕೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು “ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂದು ನೆಹರೂ ಭಾವಿಸಿದ್ದರು” ಎಂದು ಕಾಂಗ್ರೆಸ್ ಸಂಸದರ ಘೋಷಣೆಗಳ ನಡುವೆ ಅವರು ಹೇಳಿದರು.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಇಂದಿರಾ ಗಾಂಧಿಯವರ ಚಿಂತನೆಯೂ ನೆಹರೂ ಅವರ ಚಿಂತನೆಗಿಂತ ಭಿನ್ನವಾಗಿರಲಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನದಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೆಂಪು ಕೋಟೆಯ ಕೋಟೆಯಿಂದ ಹೇಳಿದ ಉಲ್ಲೇಖವನ್ನು ಪ್ರಸ್ತಾಪಿಸಿದರು. “ದುರದೃಷ್ಟವಶಾತ್, ನಮ್ಮ ಅಭ್ಯಾಸ ಏನೆಂದರೆ, ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳುವಾಗ, ನಾವು ಆತ್ಮತೃಪ್ತರಾಗುತ್ತೇವೆ, ಯಾವುದೇ ಕಷ್ಟ ಬಂದಾಗ ನಾವು ಹತಾಶರಾಗುತ್ತೇವೆ, ಕೆಲವೊಮ್ಮೆ ಇಡೀ ದೇಶವೇ ವಿಫಲವಾಗಿದೆ ಎಂದು ತೋರುತ್ತದೆ, ನಾವು ಸೋಲಿನ ಭಾವನೆಯನ್ನು ಅಳವಡಿಸಿಕೊಂಡಂತೆ ತೋರುತ್ತದೆ ಎಂದು ಇಂದಿರಾ ಗಾಂಧಿ ಹೇಳಿದ್ದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು.
ಇಂದಿನ ಕಾಂಗ್ರೆಸ್‌ನಲ್ಲಿರುವ ಜನರನ್ನು ನೋಡಿದರೆ, ಇಂದಿರಾ ಗಾಂಧಿಯವರಿಗೆ ದೇಶದ ಜನರನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಲಿಲ್ಲ, ಆದರೆ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸರಿಯಾಗಿ ನಿರ್ಣಯಿಸಿದ್ದಾರೆ ಎಂದು ತೋರುತ್ತದೆ” ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ…
ಕಾಂಗ್ರೆಸ್‌ನ ಮನಸ್ಥಿತಿಯು ದೇಶದ ಸಾಮರ್ಥ್ಯವನ್ನು ಎಂದಿಗೂ ನಂಬುವುದಿಲ್ಲ ಎಂದು ಹೇಳಿದ ಅವರು, “ಅದು ತನ್ನನ್ನು ತಾನು ಆಡಳಿತಗಾರ ಮತ್ತು ಸಾರ್ವಜನಿಕರು ಯಾರೇ ಆದರೂ ಅವರು ತನಗಿಂತ ಕಡಿಮೆ, ಸಣ್ಣವರು ಎಂದು ಪರಿಗಣಿಸಿದೆ” ಎಂದು ಹೇಳಿದರು. ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, ಮತ್ತೆ ಮತ್ತೆ ಅದೇ ಉತ್ಪನ್ನವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಂಗಡಿ ಮುಚ್ಚುವ ಹಂತದಲ್ಲಿದೆ” ಎಂದು ಪ್ರಧಾನಿ ಮೋದಿ ಹೇಳಿದರು.
ಮೂರನೇ ಅವಧಿಗೆ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, 2024 ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ರ ಗಡಿ ದಾಟಲಿದೆ ಎಂದು ಹೇಳಿದರು. “ನಮ್ಮ ಸರ್ಕಾರದ ಮೂರನೇ ಅವಧಿಯು ಈಗ ಬಹಳ ದೂರವಿಲ್ಲ … ನಾನು ದೇಶದ ಮನಸ್ಥಿತಿಯನ್ನು ನೋಡುತ್ತೇನೆ. ಇದು ಎನ್‌ಡಿಎ 400 ದಾಟುತ್ತದೆ ಮತ್ತು ಬಿಜೆಪಿ ಖಂಡಿತವಾಗಿಯೂ 370 ಸ್ಥಾನಗಳನ್ನು ಪಡೆಯುತ್ತದೆ … ಮೂರನೇ ಅವಧಿಯು ಬಹಳ ದೊಡ್ಡ ನಿರ್ಧಾರ ತೆಗೆದುಕೊಳ್ಳುವ ಅವಧಿಯಾಗಿದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement