ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕೆ ಭಾರತ ತೊರೆಯುವಂತೆ ನೋಟಿಸ್ : ಬಾಂಬೆ ಹೈಕೋರ್ಟ್‌ ಮೊರೆ ಹೋದ ನಟ ಇಮ್ರಾನ್ ಖಾನ್

ಮುಂಬೈ: ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ಬಾಲಿವುಡ್ ನಟ ಇಮ್ರಾನ್ ಖಾನ್ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅಮೆರಿಕದ ಪ್ರಜೆಯಾಗಿರುವ ಹಾಗೂ ಭಾರತದ ಸಾಗರೋತ್ತರ ನಾಗರಿಕ (OCI) ಕಾರ್ಡ್ ಹೊಂದಿರುವ 43 ವರ್ಷದ ನಟ … Continued

ಎಸ್‌ಐಆರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ ನಟ ಇಮ್ರಾನ್ ಖಾನ್‌ಗೆ ಭಾರತ ತೊರೆಯಲು ಸೂಚನೆ

ಮುಂಬೈ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಕೆಲವೇ ದಿನಗಳಲ್ಲಿ ಬಾಲಿವುಡ್ ನಟ ಇಮ್ರಾನ್ ಖಾನ್ ಅವರಿಗೆ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟಿಸ್ ನೀಡಿದ್ದಾರೆ. ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿಯಾಗಿರುವ ಇಮ್ರಾನ್ ಖಾನ್, ಭಾರತೀಯ ಪ್ರಜೆಯಲ್ಲದಿದ್ದರೂ ದೇಶದಲ್ಲಿ ರಾಜಕೀಯ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು … Continued

ಬೆಳಿಗ್ಗೆ 2:30ಕ್ಕೆ ಸ್ನೇಹಿತನಿಗೆ ಸಂದೇಶ, 45 ನಿಮಿಷ ಸಿಪಿಆರ್‌ʼ… : ನಾನಾ ಪಾಟೇಕರ್ ಅಂತಿಮ ಕ್ಷಣಗಳು…

ನಟ ನಾನಾ ಪಾಟೇಕರ್ ಅವರ ಸಾವಿಗೆ ಮುನ್ನದ ಕೊನೆಯ ಕೆಲವು ಗಂಟೆಗಳ ವಿವರಗಳು ಇದೀಗ ಬೆಳಕಿಗೆ ಬಂದಿವೆ. ಅಕ್ಟೋಬರ್ 8ರ ಗುರುವಾರ ತಡರಾತ್ರಿ ಅವರು ಎದೆನೋವಿನ ಬಗ್ಗೆ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದು, ಬಳಿಕ ಅವರ ಆರೋಗ್ಯ ಸ್ಥಿತಿ ವೇಗವಾಗಿ ಹದಗೆಟ್ಟಿದ್ದಾಗಿ ವರದಿಗಳು ತಿಳಿಸಿವೆ. ಗೋವಾದ ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಸಾಲ್ಕರ್ ಅವರ … Continued

ಖ್ಯಾತ ನಟ ನಾನಾ ಪಾಟೇಕರ್‌ ನಿಧನ

ಪಣಜಿ:  ಖ್ಯಾತ ನಟ ನಾನಾ ಪಾಟೇಕರ್ ಅವರು ಗುರುವಾರ ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಗೋವಾದ ಡೋನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಾನಾ ಪಾಟೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಮಣಿಪಾಲ್ ಆಸ್ಪತ್ರೆಯ ಆಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಶೇಖರ … Continued

₹65.54 ಕೋಟಿ ಮಿಥಿ ನದಿ ಹಗರಣ: ನಟ ದಿನೋ ಮೊರಿಯಾ ಬಂಧನ

ಮುಂಬೈ: ಮಿಥಿ ನದಿ ಹೂಳೆತ್ತುವಿಕೆ (ಡಿಸಿಲ್ಟಿಂಗ್) ಹಗರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ದಿನೋ ಮೊರಿಯಾ ಅವರನ್ನು ಮುಂಬೈ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ ಎಂದು ವರದಿಯಾಗಿದೆ. ಮುಂಬೈನ ಬಾಂದ್ರಾದಲ್ಲಿರುವ ಅವರ ನಿವಾಸದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಅಕ್ಟೋಬರ್ 2ರಂದು ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣವು ಮುಂಬೈನ … Continued

ಬಾಲಿವುಡ್‌ನ ಖ್ಯಾತ ನಟ ಖ್ಯಾತ ನಟ ಮುಷ್ತಾಕ್ ಖಾನ್ ನಿಧನ

ಮುಂಬೈ : ‘ವೆಲ್‌ಕಮ್’, ‘ಆಶಿಕಿ’, ‘ಹಮ್ ಹೈ ರಾಹಿ ಪ್ಯಾರ್ ಕೆ’, ‘ಮುಜ್ಸೇ ಶಾದಿ ಕರೋಗಿ’ ಸೇರಿದಂತೆ ಹಲವು ಜನಪ್ರಿಯ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟ ಮುಷ್ತಾಕ್ ಖಾನ್ (56) ಗುರುವಾರ (ಸೆಪ್ಟೆಂಬರ್ 24) ನಿಧನರಾಗಿದ್ದಾರೆ. ಮುಷ್ತಾಕ್ ಖಾನ್ ನಿಧನವನ್ನು ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ಅಧ್ಯಕ್ಷ ಬಿ.ಎನ್. ತಿವಾರಿ … Continued

ವಿಡಿಯೋ | ಬ್ರಿಕ್ಸ್‌ ಶೃಂಗಸಭೆಗೆ ಬಾಲಿವುಡ್‌ ಟಚ್‌ : ಕಿಶೋರಕುಮಾರ ಹಾಡು ಹಾಡಿ ಮನಗೆದ್ದ ಮಲೇಷ್ಯಾ ಪ್ರಧಾನಿ

ನವದೆಹಲಿ: 18ನೇ ಬ್ರಿಕ್ಸ್‌ (BRICS) ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿದ್ದ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಬಾಲಿವುಡ್‌ ಹಾಡಿನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಬಹುಪಕ್ಷೀಯ ರಾಜತಾಂತ್ರಿಕ ಮಾತುಕತೆಗಳ ನಡುವೆಯೇ ಅವರು ಹಿಂದಿ ಸಿನೆಮಾದ ಕಿಶೋರಕುಮಾರ ಅವರ ಅಮರ ಗೀತೆ “ಖ್ವಾಬ್ ಹೋ ತುಮ್ ಯಾ ಕೋಯಿ ಹಕೀಕತ್” ಹಾಡನ್ನು ಹಾಡುವ ಮೂಲಕ ಸಾಮಾಜಿಕ … Continued

ನಟ ಸೈಫ್ ಅಲಿ ಖಾನಗೆ ಚಾಕು ಇರಿತದ ಪ್ರಕರಣ: ತಪ್ಪೊಪ್ಪಿಗೆ ಮುಂದಾದ ಆರೋಪಿ, ಶಿಕ್ಷೆಯಲ್ಲಿ ವಿನಾಯಿತಿಗೆ ಮನವಿ

ಮುಂಬೈ: 2025ರ ಜನವರಿಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರ ಬಾಂದ್ರಾ ನಿವಾಸಕ್ಕೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಾಂಗ್ಲಾದೇಶ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ, ಇದೀಗ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾನೆ. ಬಂಧನದ ಬಳಿಕ ನ್ಯಾಯಾಂಗ ಬಂಧನದಲ್ಲಿರುವ ಶರೀಫುಲ್ ಇಸ್ಲಾಂ, ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಳ್ಳಲು … Continued

ನಟಿಯ ಮೇಲೆ ಅತ್ಯಾಚಾರ ; 73 ವರ್ಷದ ಸಿನೆಮಾ ನಿರ್ದೇಶಕನ ಬಂಧನ

ಮುಂಬೈ: 33 ವರ್ಷದ ನಟಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಶಕೀಲ್ ನೂರಾನಿ (73) ಅವರನ್ನು ಮುಂಬೈನ ಮಾಲ್ವಾಣಿ ಪೊಲೀಸರು ಆಗಸ್ಟ್ 8ರ ಮುಂಜಾನೆ ಬಂಧಿಸಿದ್ದಾರೆ. ‘ಬಡೆ ದಿಲ್ ವಾಲಾ’ (1999) ಹಾಗೂ ‘ಜೋರು ಕಾ ಗುಲಾಮ್’ (2000) ಸೇರಿದಂತೆ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿರುವ ನೂರಾನಿ ಅವರನ್ನು … Continued

ಬಹುಭಾಷಾ ನಟ ಪ್ರದೀಪ ರಾವತ್ ನಿಧನ

ಮುಂಬೈ:  ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಖಳನಾಯಕ ಮತ್ತು ವೈವಿಧ್ಯಮಯ ಪಾತ್ರಗಳ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಖ್ಯಾತ ನಟ ಪ್ರದೀಪ ಸಿಂಗ್ ರಾವತ್ ಅವರು ಮಂಗಳವಾರ ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು. ನಟ ಪ್ರದೀಪ ರಾವತ್ ಮಂಗಳವಾರ ಸಂಜೆ ಸುಮಾರು 6 ಗಂಟೆ ಸುಮಾರಿಗೆ ಕ್ಯಾನ್ಸರ್ ಚಿಕಿತ್ಸೆ … Continued