ಬೆಂಗಳೂರು: ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿ ಗುಂಡಿನ ದಾಳಿ, ಇಬ್ಬರಿಗೆ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ಚಿನ್ನಾಭರಣ ಮಳಿಗೆಯೊಂದರ ದರೋಡೆ ಮಾಡುವ ಯತ್ನ ನಡೆದಿದೆ ಎಂದು ವರದಿಯಾಗಿದೆ. ಬೆಂಗಳೂರು ನಗರದ ಕೊಡಿಗೇ ಹಳ್ಳಿಯಲ್ಲಿರುವ ಜ್ಯುವೆಲ್ಲರಿ ಮಳಿಗೆಗೆ ಗುರುವಾರ ಮಧ್ಯಾಹ್ನ ನುಗ್ಗಿದ ದರೋಡೆಕೋರರು ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಆತಂಕ ಸೃಷ್ಟಿಸಿದರು.
ಮಧ್ಯಾಹ್ನದ ಹೊತ್ತಲ್ಲಿ ಚಿನ್ನಾಭರಣ ಮಳಿಗೆಗೆ ನುಗ್ಗಿದ ದರೋಡೆಕೋರರು ಮಳಿಗೆಯ ಮಾಲೀಕರು ಹಾಗೂ ನೌಕರರನ್ನು ಬೆದರಿಸಿ ದರೋಡೆಗೆ ಯತ್ನಿಸಿದರು. ಈ ವೇಳೆ ಮಳಿಗೆ ಮಾಲೀಕ ಹಾಗೂ ನೌಕರರು ಪ್ರತಿರೋಧ ತೋರಿದಾಗ ದರೋಡೆಕೋರರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಸುತ್ತಲಿದ್ದ ಜನರು ಓಡಿಬಂದಿದ್ದಾರೆ. ಆಗ ಈ ದರೋಡೆಕೋರರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಭರದಲ್ಲಿ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುವೆಲ್ಲರಿಯ ಸಿಸಿಟಿವಿ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.
ದರೋಡೆಕೋರರು ಮೂರು ಸುತ್ತು ಗುಂಡು ಹಾರಿಸಿ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಪರಾರಿಯಾಗುವ ಭರದಲ್ಲಿ ದುಷ್ಕರ್ಮಿಗಳು ತಾವು ತಂದಿದ್ದ ನಾಡ ಪಿಸ್ತೂಲನ್ನೂ ಘಟನಾ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

ಮಾಹಿತಿ ತಿಳಿದ ಕೂಡಲೇ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿತು. ವಿಧಿ ವಿಜ್ಞಾನ ತಜ್ಞರ ತಂಡ ಕೂಡಾ ಸ್ಥಳಕ್ಕೆ ಆಗಮಿಸಿದೆ.
ಕೊಡಿಗೇ ಹಳ್ಳಿಯಲ್ಲಿ ಇರುವ ಈ ಚಿನ್ನಾಭರಣ ಮಳಿಗೆಯು ದೊಡ್ಡ ಶೋ ರೂಂ ಅಲ್ಲ, ಈ ಅಂಗಡಿಯು ಒಳ ಭಾಗದಲ್ಲಿ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದರೋಡೆಕೋರರು ಎರಡು ಬೈಕ್ ಗಳಲ್ಲಿ ಬಂದು ಮೂರು ಸುತ್ತು ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡ ಬಳಿಕ ಪಿಸ್ತೂಲು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement