ಮೈ ಜುಂ ಎನ್ನುವ ವೀಡಿಯೊ…| ಕುಸಿದ ಸುರಂಗದ ಒಳಗೆ ಸಿಕ್ಕಿಬಿದ್ದ 8 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ದೃಶ್ಯಾವಳಿ

ಹೈದರಾಬಾದ್: ತೆಲಂಗಾಣದಲ್ಲಿ ಶನಿವಾರ ಕುಸಿದು ಬಿದ್ದ ಸುರಂಗದ ಒಂದು ಭಾಗದದಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ರಕ್ಷಿಸಲು ರಕ್ಷಣಾ ಕಾರ್ಯಕರ್ತರು ಹರಸಾಹಸ ಪಡುತ್ತಿದ್ದು, ರಕ್ಷಣಾ ಕಾರ್ಯಕರ್ತರು ಸುರಂಗದೊಳಗೆ ಹೋಗಿ ಸಿಕ್ಕಿಬಿದ್ದ ಕಾರ್ಮಿಕರ ಹೆಸರನ್ನು ಕರೆಯುತ್ತಿರುವ ದೃಶ್ಯಾವಳಿಗಳ ವೀಡಿಯೊ ಹೊರಹೊಮ್ಮಿದೆ. ನಾಗರ್‌ಕರ್ನೂಲ್‌ನಲ್ಲಿ ಸುರಂಗ ಶನಿವಾರ ಕುಸಿದಿದ್ದು, ಕನಿಷ್ಠ ಎಂಟು ಕಾರ್ಮಿಕರು ಅದರೊಳಗೆ ಸಿಕ್ಕಿಬಿದ್ದಿದ್ದಾರೆ. ರಕ್ಷಣಾ ಕಾರ್ಯಕ್ಕೆ ಉನ್ನತ ರಕ್ಷಣಾ ತಂಡಗಳನ್ನು … Continued

ರಂಜಾನ್ ಮಾಸದಲ್ಲಿ ಮುಸ್ಲಿಂ ಸರ್ಕಾರಿ ನೌಕರರಿಗೆ ಕಚೇರಿಯಿಂದ ಬೇಗನೆ ಹೊರಡಲು ಅನುಮತಿ ನೀಡಿದ ತೆಲಂಗಾಣ ಸರ್ಕಾರ

ಹೈದರಾಬಾದ್: ಕಾಂಗ್ರೆಸ್ ನೇತೃತ್ವದ ತೆಲಂಗಾಣ ಸರ್ಕಾರವು ಸೋಮವಾರ ರಂಜಾನ್ ಉಪವಾಸದ ಸಮಯದಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಕೆಲಸದ ಸಮಯವನ್ನು ಕಡಿತಗೊಳಿಸಿದೆ. ಚಂದ್ರನ ದರ್ಶನದ ಆಧಾರದ ಮೇಲೆ ಮಾರ್ಚ್ 1 ಅಥವಾ 2 ರಂದು ಪ್ರಾರಂಭವಾಗುವ ರಂಜಾನ್ ತಿಂಗಳಲ್ಲಿ ಮುಸ್ಲಿಂ ಉದ್ಯೋಗಿಗಳಿಗೆ ಒಂದು ಗಂಟೆ ಮುಂಚಿತವಾಗಿ ಕಚೇರಿಗಳಿಂದ ಹೋಗಲು ತೆಲಂಗಾಣ ಮುಖ್ಯ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದೇಶಗಳು ಮುಸ್ಲಿಂ … Continued

ವೀಡಿಯೊ…| ರಿಯಲ್ ಎಸ್ಟೇಟ್ ಬ್ರೋಕರ್​ ಕೆನ್ನೆಗೆ ಬಾರಿಸಿದ ಬಿಜೆಪಿ ಸಂಸದ…

ಬಿಜೆಪಿ ಸಂಸದ ಎಟೆಲಾ ರಾಜೇಂದರ ತೆಲಂಗಾಣದ ಮೇಡ್ಚಲ್ ಜಿಲ್ಲೆಯ ಪೋಚಾರಂನಲ್ಲಿ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ಪ್ರದೇಶದಲ್ಲಿ ಬಡವರ ಜಮೀನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಬ್ರೋಕರ್‌ ಒಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳೀಯರು ಸಂಸದರ ಬಳಿ ತಮಗಾದ ಸಂಕಷ್ಟವನ್ನು ವಿವರಿಸಿದ … Continued

ಹೊಸ ವರ್ಷದ ಪಾರ್ಟಿಗೆ ಮದ್ಯ ಕದಿಯಲು ಬಾರ್‌ ಗೆ ಹೊಕ್ಕಿದ ಕಳ್ಳ ; ಕಂಠಪೂರ್ತಿ ಕುಡಿದು ಅಲ್ಲಿಯೇ ಮಲಗಿ ಸಿಕ್ಕಿಬಿದ್ದ…!

ಹೈದರಾಬಾದ್: ತೆಲಂಗಾಣದ(Telangana) ಮೇದಕ್‌ನಲ್ಲಿ ಹೊಸ ವರ್ಷದ ಆಚರಣೆಗೆಂದು(New Year) ಮದ್ಯ ಕದಿಯಲು ಯತ್ನಿಸಿದ ಐನಾತಿ ಕಳ್ಳ ಕಂಠಪೂರ್ತಿ ಕುಡಿದು ಅಲ್ಲೇ ಮಲಗಿದ ಘಟನೆ ವರದಿಯಾಗಿದೆ. ಮದ್ಯವನ್ನು ಅಲ್ಲಿಯೇ ಕಂಠಪೂರ್ತಿ ಕುಡಿದು ಅಮಲೇರಿ ಅಂಗಡಿಯಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಅಂಗಡಿ ಮಾಲೀಕ ಬಾಗಿಲು ತೆಗೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಾಲೀಕ ತಕ್ಷಣವೇ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಆತನನ್ನು … Continued

ಪೊಲಿಸ್‌ ಎನ್‌ಕೌಂಟರ್‌ ನಲ್ಲಿ ಉನ್ನತ ಕಮಾಂಡರ್‌ ಸೇರಿ 7 ನಕ್ಸಲರು ಸಾವು

ಹೈದರಾಬಾದ್‌: ತೆಲಂಗಾಣದ ಮುಲುಗು ಜಿಲ್ಲೆಯಲ್ಲಿ ಇಂದು, ಭಾನುವಾರ ಬೆಳಗ್ಗೆ ಪೊಲೀಸರು ಎನ್‌ಕೌಂಟರ್‌ನಲ್ಲಿ ಏಳು ಮಾವೋವಾದಿಗಳು (Naxal Encounter). ಹೊಡೆದುರುಳಿಸಿದ್ದಾರೆ. ಪೊಲೀಸ್ ಮಾಹಿತಿ ನೀಡುತ್ತಿದ್ದರು ಎಂಬ ಅನುಮಾನದ ಮೇಲೆ ಇಬ್ಬರು ಬುಡಕಟ್ಟು ಜನರನ್ನು ಮಾವೋವಾದಿಗಳು ಬರ್ಬರವಾಗಿ ಕೊಂದ ನಂತರ ನಕ್ಸಲ್‌ ವಿರೋಧಿ ಕಾರ್ಯಾಚರಣೆ ಚುರುಕುಗೊಂಡಿತ್ತು ಚಲ್ಬಾಕ್‌ ಅರಣ್ಯ ಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ … Continued

8 ಕೋಟಿ ರೂ. ಕೊಡಲು ನಿರಾಕರಿಸಿದ್ದಕ್ಕೆ ಪತಿಯನ್ನು ಕೊಂದ ಮಹಿಳೆ… ದೇಹ ಸುಡಲು 800 ಕಿ.ಮೀ. ಪ್ರಯಾಣ…ಕರ್ನಾಟಕದಲ್ಲಿ ಮೂವರ ಬಂಧನ

ಬೆಂಗಳೂರು : ಕೊಡಗು ಜಿಲ್ಲೆಯ ಎಸ್ಟೇಟ್‌ ಒಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾದ ತೆಲಂಗಾಣ ಉದ್ಯಮಿಯ ಹತ್ಯೆ ಪ್ರಕಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದಾರೆ. ಆತನ ಎರಡನೇ ಪತ್ನಿ ಹಾಗೂ ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಕಬಳಿಸಲು ಮಹಿಳೆ ಆತನನ್ನು ಕೊಂದಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಮೃತ ಉದ್ಯಮಿಯನ್ನು ರಮೇಶ … Continued

ಎನ್‌ಕೌಂಟರ್‌ನಲ್ಲಿ 6 ಮಾವೋವಾದಿಗಳ ಹತ್ಯೆ

ಭದ್ರಾದ್ರಿ ಕೊತಗುಡೆಂ (ತೆಲಂಗಾಣ): ಕರಕಗೂಡು ಮಂಡಲದ ರಘುನಾಥಪಾಲೆಂ ಸಮೀಪದ ಅರಣ್ಯ ಪ್ರದೇಶದಲ್ಲಿ ಗುರುವಾರ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಆರು ಮಾವೋವಾದಿಗಳು ಸಾವಿಗೀಡಾಗಿದ್ದಾರೆ. ಮಾವೋವಾದಿ ಪೀಡಿತ ಪ್ರದೇಶದಲ್ಲಿ ಪೊಲೀಸರು ನಡೆಸಿದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ. ತೆಲಂಗಾಣ ಪೊಲೀಸರ ಗಣ್ಯ ನಕ್ಸಲ್ ವಿರೋಧಿ ಪಡೆಯ … Continued

ಅತಿದೊಡ್ಡ ಸೈಬರ್ ವಂಚನೆಯಲ್ಲಿ ₹ 13 ಕೋಟಿ ಕಳೆದುಕೊಂಡ 75 ವರ್ಷದ ವೃದ್ಧ…!

ಹೈದರಾಬಾದ್: ತೆಲಂಗಾಣದ ಸೈಬರ್ ಸೆಕ್ಯುರಿಟಿ ಬ್ಯೂರೋಗೆ ವ್ಯಕ್ತಿಯೊಬ್ಬರಿಂದ ಅತಿದೊಡ್ಡ ಸೈಬರ್ ಹಣಕಾಸು ವಂಚನೆ ದೂರು ಬಂದಿದ್ದು, 75 ವರ್ಷದ ವ್ಯಕ್ತಿಯೊಬ್ಬರು ₹ 13 ಕೋಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಸಂತ್ರಸ್ತ ವ್ಯಕ್ತಿ ಸಾರ್ವಜನಿಕ ವಲಯದ ಘಟಕದ ಹಿರಿಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ. ಈ ವ್ಯಕ್ತಿ ಜುಲೈ 1 ರಂದು ವಾಟ್ಸ್‌ಆ್ಯಪ್ ಮೂಲಕ ಹೂಡಿಕೆಯ ಪ್ರಸ್ತಾಪವನ್ನು … Continued

ಜಿಪಿಎಸ್ ಸಿಗ್ನಲ್ ಸಿಗದೆ ಸೌದಿ ಅರೇಬಿಯಾ ಮರುಭೂಮಿಯಲ್ಲಿ ಜೀವ ಕಳೆದುಕೊಂಡ ತೆಲಂಗಾಣ ವ್ಯಕ್ತಿ, ಸಹೋದ್ಯೋಗಿ

ಹೈದರಾಬಾದ್: ಸೌದಿ ಅರೇಬಿಯಾದ ರಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣದ 27 ವರ್ಷದ ಯುವಕ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವಿಗೀಡಾಗಿದ್ದಾನೆ. ಸೌದಿ ಅರೇಬಿಯಾದಲ್ಲಿ ಮೂರು ವರ್ಷಗಳಿಂದ ಟೆಲ್ಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣದ ಕರೀಂನಗರದ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ಎಂಬವರು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದಾದ ಮರುಭೂಮಿಯ ನಿರ್ಜನ ಮತ್ತು ಅಪಾಯಕಾರಿ ಖಾಲಿ … Continued

ʼನವಿಲು ಕರಿʼ ವೀಡಿಯೊ ವೈರಲ್‌ ಆದ ನಂತರ ತೆಲಂಗಾಣ ಯೂ ಟ್ಯೂಬರ್ ಬಂಧನ

ತೆಲಂಗಾಣದ ಸಿರ್ಸಿಲ್ಲಾದ ಯೂಟ್ಯೂಬರ್‌ ನನ್ನು ಭಾನುವಾರ ಬಂಧಿಸಲಾಗಿದ್ದು, ಭಾರತದ ರಾಷ್ಟ್ರೀಯ ಪಕ್ಷಿಯಾದ ‘ನವಿಲು ಕರಿ’ ತಯಾರಿಸಿ ಸೇವಿಸುತ್ತಿರುವ ವೀಡಿಯೊ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ. ಕೋಡಂ ಪ್ರಣಯಕುಮಾರ ಪೋಸ್ಟ್ ಮಾಡಿದ ವೀಡಿಯೊ ವೈರಲ್‌ ಆದ ಬೆನ್ನಿಗೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆತನನ್ನು ಬಂಧಿಸಲಾಗಿದೆ. ಆತ ಯೂಟ್ಯೂಬನಲ್ಲಿ ನವಿಲು ಕರಿಯ ಸಂಪ್ರದಾಯಿಕ ವಿಧಾನ … Continued