ಅಂಡರ್‌ಪಾಸ್‌ನಲ್ಲಿ ಅರ್ಧ ಮುಳುಗಿದ ಶಾಲಾ ಬಸ್ : 30 ವಿದ್ಯಾರ್ಥಿಗಳ ರಕ್ಷಣೆ | ವೀಕ್ಷಿಸಿ

ತೆಲಂಗಾಣದಲ್ಲಿ ಭಾರೀ ಮಳೆಯಿಂದಾಗಿ, ಸುಮಾರು 30 ವಿದ್ಯಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಶಾಲಾ ಬಸ್, ಮೆಹಬೂಬ್‌ನಗರದ ಜಲಾವೃತ ರಸ್ತೆಯಲ್ಲಿ ಭಾಗಶಃ ಮುಳುಗಿ ಸಿಲುಕಿಕೊಂಡ ಘಟನೆ ವರದಿಯಾಗಿದೆ.
ತೆಲಂಗಾಣದ ಮಹಬೂಬ್‌ನಗರದಲ್ಲಿ, ಮುಂಗಾರು ಮಳೆಯಿಂದಾಗಿ ರಸ್ತೆಯಲ್ಲಿ ಸಂಪೂರ್ಣವಾಗಿ ಮುಳುಗಿದ ನಂತರ ಖಾಸಗಿ ಶಾಲಾ ಬಸ್ ಅಂಡರ್‌ಪಾಸ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಶುಕ್ರವಾರ ಬೆಳಗ್ಗೆ ಮಹಬೂಬ್‌ನಗರ ಜಿಲ್ಲೆಯ ಮಾಚನ್ನಪಲ್ಲಿ ಮತ್ತು ಕೋಡೂರು ಗ್ರಾಮಗಳ ನಡುವೆ ಶಾಲಾ ಬಸ್‌ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದೆ.

ರಾಮಚಂದ್ರಾಪುರ, ಮಾಚನಪಲ್ಲಿ ಮತ್ತು ಸೂಗುರಗದ್ದಾಫಿ ತಾಂಡಾದಿಂದ ಭಾಷ್ಯಂ ಶಾಲಾ ಬಸ್‌ನಲ್ಲಿ ಮಹಬೂಬ್‌ನಗರ ಪಟ್ಟಣದ ಭಾಷ್ಯಂ ಟೆಕ್ನಾಲಜಿ ಸ್ಕೂಲ್‌ಗೆ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು. ಜಲಾವೃತ ರಸ್ತೆಯಲ್ಲಿ ಭಾಗಶಃ ಮುಳುಗಿದ್ದನ್ನು ಕಂಡು ಸ್ಥಳೀಯರು ಮಕ್ಕಳನ್ನು ರಕ್ಷಿಸಲು ಬಸ್ ಕಡೆಗೆ ಧಾವಿಸಿದರು. ಮೂವತ್ತು ಮಕ್ಕಳನ್ನು ರಕ್ಷಿಸಿದ ನಂತರ ಬಸ್ಸನ್ನೂ ಸ್ಥಳದಿಂದ ಹೊರತರಲಾಯಿತು.

ಅಂಡರ್‌ಪಾಸ್‌ನಲ್ಲಿ ಈಗಾಗಲೇ ನೀರು ತುಂಬಿಕೊಂಡಿದ್ದು, ಇದನ್ನು ಗಮನಿಸಿದರೂ ಚಾಲಕ 30 ವಿದ್ಯಾರ್ಥಿಗಳ ಪ್ರಾಣವನ್ನು ಪಣಕ್ಕಿಟ್ಟು ರಸ್ತೆ ದಾಟಲು ಯತ್ನಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ತೆಲಂಗಾಣವು ಮುಂಬರುವ ದಿನಗಳಲ್ಲಿ ತೀವ್ರ ಮತ್ತು ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ರಾಜ್ಯಕ್ಕೆ ಮೂರು ದಿನಗಳ ಮುಂಗಾರು ಮುನ್ಸೂಚನೆಯನ್ನು ಬಿಡುಗಡೆ ಮಾಡಲಾಗಿದೆ, ಜಗ್ತಿಯಾಲ್, ರಾಜಣ್ಣ ಸಿರ್ಸಿಲ್ಲಾ, ಕರೀಂನಗರ, ಪೆದ್ದಪಲ್ಲಿ, ವಾರಂಗಲ್ (ಗ್ರಾಮೀಣ), ಮತ್ತು ವಾರಂಗಲ್ (ನಗರ) ನಂತಹ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement