ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗುವ ಮೂಲಕ ಇತಿಹಾಸ ಬರೆದ ಇಬ್ಬರು ತೃತೀಯ ಲಿಂಗಿಗಳು..!

ಹೈದರಾಬಾದ್‌: ತೆಲಂಗಾಣದಲ್ಲಿ ಇಬ್ಬರು ತೃತೀಯ ಲಿಂಗಿಗಳು ವೈದ್ಯರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ರುತ್ ಜಾನ್ ಪಾಲ್ ಮತ್ತು ಪ್ರಾಚಿ ರಾಥೋಡ್ ಅವರು ಸರ್ಕಾರಿ ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ (OGH) ವೈದ್ಯಕೀಯ ಅಧಿಕಾರಿಗಳಾಗಿ ಸೇರ್ಪಡೆಯಾಗಿದ್ದಾರೆ. ಲಿಂಗದ ಕಾರಣದಿಂದ ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸದಿಂದ ವಜಾಗೊಂಡಿರುವ ರಾಥೋಡ್ ಅವರು, ಸಾಮಾಜಿಕ ಕಳಂಕ ಮತ್ತು ಪೂರ್ವಾಗ್ರಹದ ಸವಾಲುಗಳನ್ನು ಎದುರಿಸಿ … Continued

ಇದೇ ಮೊದಲ ಬಾರಿಗೆ, ಬ್ರಿಟನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ ಹುಮನಾಯ್ಡ್ ರೋಬೋಟ್…! ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿತು …ವೀಕ್ಷಿಸಿ

ಲಂಡನ್‌: ಬ್ರಿಟನ್‌ ಸಂಸತ್ತು ಮಂಗಳವಾರ ವಿಶೇಷ ಸ್ಪೀಕರ್ ಒಬ್ಬರನ್ನು ಹೊಂದಿತ್ತು. ಹ್ಯೂಮನಾಯ್ಡ್ ರೋಬೋಟ್, ಐ-ಡಾ, ಹೌಸ್ ಆಫ್ ಲಾರ್ಡ್ಸ್ ಅನ್ನು ಉದ್ದೇಶಿಸಿ ಮಾತನಾಡಿತು ಮತ್ತು ಕೃತಕ ಬುದ್ಧಿಮತ್ತೆ (Artificial Intelligence) ಸೃಜನಶೀಲ ಉದ್ಯಮಕ್ಕೆ ಯಾವುದೇ ಬೆದರಿಕೆಯನ್ನು ಉಂಟುಮಾಡುತ್ತದೆಯೇ ಎಂಬುದರ ಬಗ್ಗೆ ಸಂವಾದ ನಡೆಸಿತು. ಹೊಸ ತಂತ್ರಜ್ಞಾನಗಳು ಸೃಜನಾತ್ಮಕ ಉದ್ಯಮಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬ … Continued

ಇದೇ ಮೊದಲ ಬಾರಿಗೆ ಅಂಟಾರ್ಕ್ಟಿಕಾದಲ್ಲಿ ಐಸ್‌ ರನ್‌ವೇ ಮೇಲೆ ಇಳಿದ 190 ಟನ್ ತೂಕದ A340 ವಿಮಾನ..! ವೀಕ್ಷಿಸಿ

ನವದೆಹಲಿ:ಇತಿಹಾಸದಲ್ಲಿ ಮೊದಲ ಬಾರಿಗೆ, ವಾಣಿಜ್ಯ ಏರ್‌ಬಸ್ ವಿಮಾನವು ಅಂಟಾರ್ಕ್ಟಿಕಾದ ಹಿಮ ಖಂಡದಲ್ಲಿ ಯಶಸ್ವಿ ಲ್ಯಾಂಡಿಂಗ್ ಮಾಡಿದೆ. ಕಂಪನಿಯ A340 ವಿಮಾನಗಳಲ್ಲಿ ಒಂದು ಈ ತಿಂಗಳ ಆರಂಭದಲ್ಲಿ ಹಿಮದ ರನ್‌ವೇ ಸ್ಪರ್ಶಿಸಿತು, ಇದು ಹೆಪ್ಪುಗಟ್ಟಿದ ಭೂಪ್ರದೇಶದಲ್ಲಿ ಹೆಚ್ಚಿನ ಪ್ರವಾಸೋದ್ಯಮಕ್ಕೆ ದಾರಿ ಮಾಡಿಕೊಟ್ಟಿತು. A340 ನವೆಂಬರ್ 2ರ ಬೆಳಿಗ್ಗೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದ 2,500 ನಾಟಿಕಲ್ ಮೈಲುಗಳು … Continued

ಇದೇ ಮೊದಲ ಬಾರಿಗೆ, ಭಾರತದಲ್ಲಿ ಎರಡೂ ಕೋವಿಡ್-19 ಲಸಿಕೆ ಪಡೆದವರ ಸಂಖ್ಯೆ ಒಂದೇ ಲಸಿಕೆ ಪಡೆದವರಿಗಿಂತ ಹೆಚ್ಚಾಯ್ತು..!

ನವದೆಹಲಿ: ಇದೇ ಮೊದಲ ಬಾರಿಗೆ, ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆ ಪಡೆದ ಭಾರತೀಯರ ಸಂಖ್ಯೆ ಭಾಗಶಃ ಲಸಿಕೆ ಪಡೆದ ಅರ್ಹ ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಬುಧವಾರ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಹರ್ ಘರ್ ದಸ್ತಕ್’ ಅಭಿಯಾನದಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಆರೋಗ್ಯ ಸಚಿವರು ಹೇಳಿದರು. … Continued

ಕೊರೊನಾ ಸಾಂಕ್ರಾಮಿಕ ರೋಗದ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಒಂದೂ ಕೋವಿಡ್ ಸಾವು ದಾಖಲಿಸದ ಮುಂಬೈ..!

ಮುಂಬೈ: ಭಾರತದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕದ ಆರಂಭವಾದ ನಂತರ ಇದೇ ಮದಲ ಬಾರಿಗೆ ಮುಂಬೈ ಭಾನುವಾರ ಒಂದೇ ಒಂದು ಕೋವಿಡ್ -19 ಸಾವನ್ನು ದಾಖಲಿಸಲಿಲ್ಲ. ಟ್ವೀಟ್‌ನಲ್ಲಿ, ಮುಂಬೈ ಆಯುಕ್ತ ಇಕ್ಬಾಲ್ ಸಿಂಗ್ ಚಾಹಲ್ ಅವರು ಮಾರ್ಚ್ 26, 2020 ರ ನಂತರ ಇದೇ ಮೊದಲ ಬಾರಿಗೆ ಮುಂಬೈ ಭಾನುವಾರ ಕೊರೊನಾ ವೈರಸ್ಸಿನಿಂದ ಶೂನ್ಯ ಸಾವುಗಳನ್ನು ವರದಿ … Continued

ಇದೇ ಮೊದಲ ಬಾರಿಗೆ ಮೂವರು ಮಹಿಳೆಯರು ಸೇರಿದಂತೆ 9 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಒಟ್ಟಿಗೇ ಪ್ರಮಾಣವಚನ ಸ್ವೀಕಾರ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಮಂಗಳವಾರ ಸುಪ್ರೀಂ ಕೋರ್ಟ್‌ನ ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಹೊಸ ನ್ಯಾಯಾಧೀಶರಿಗೆ ಪ್ರಮಾಣವಚನ ಬೋಧಿಸಿದರು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂಬತ್ತು ನ್ಯಾಯಾಧೀಶರು ಒಂದೇ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಕಟ್ಟಡ ಸಂಕೀರ್ಣದ ಸಭಾಂಗಣದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ … Continued

ಹೈದರಾಬಾದ್ ಮೃಗಾಲಯದ ಎಂಟು ಏಷ್ಯಾಟಿಕ್ ಸಿಂಹಗಳಿಗೆ ಕೊರೊನಾ ಪಾಸಿಟಿವ್‌…!

ಹೈದರಾಬಾದ್: ಆತಂಕಕಾರಿಯಾದ ಬೆಳವಣಿಗೆಯಲ್ಲಿ, ಎಂಟು ಏಷ್ಯಾಟಿಕ್ ಸಿಂಹಗಳು ನಗರದ ನೆಹರೂ ಝೂಲಾಜಿಕಲ್ ಪಾರ್ಕ್‌ನಲ್ಲಿ ಕೋವಿಡ್‌ ಸೋಂಕಿಗೆ ಒಳಗಾಗಿದೆ. ಸೆಂಟರ್ ಫಾರ್ ಸೆಲ್ಯುಲರ್ ಮತ್ತು ಮಾಲೆಕ್ಯೂಲರ್ ಬಯಾಲಜಿ (ಸಿಸಿಎಂಬಿ) ನಡೆಸಿದ ಪರೀಕ್ಷೆಯಲ್ಲಿ ಎಂಟು ದೊಡ್ಡ ಬೆಕ್ಕುಗಳು – ನಾಲ್ಕು ಗಂಡು ಮತ್ತು ನಾಲ್ಕು ಹೆಣ್ಣು – ಹಳೆಯ ಕೋವಿಡ್ -19 ಸೋಂಕಿಗೆ ಒಳಗಾಗಿದೆ ಎಂದು ದೃಢಪಡಿಸಿದೆ. ಸಿಂಹಗಳು … Continued