ತೆಲಂಗಾಣದಲ್ಲಿ ಕೊರೊನಾ ಲಸಿಕೆ ಎರಡು ಡೋಸ್ ಪಡೆದ ನಂತರವೂ 15 ಮಂದಿಗೆ ಸೋಂಕು..!

ಹೈದರಾಬಾದ್: ಎರಡು ಕೊರೊನಾ ಲಸಿಕೆಯ ಡೋಸ್ ಪಡೆದ ಬಳಿಕವೂ 15 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ. ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯವಾದ ಲಸಿಕೆ ಪಡೆದುಕೊಂಡ ನಂತರ ಬರುವ ಅನಾರೋಗ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯದ ನಿರ್ದೇಶಕ ಡಾ ಜಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.
ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ಮೇಲೆ ಕೂಡ ಸೋಂಕು ಬಂದಿದೆ. ಆದರೆ ಎಲ್ಲಾ ರೋಗಿಗಳಲ್ಲಿ ಸೋಂಕಿನ ತೀವ್ರತೆ ಸಣ್ಣ ಮಟ್ಟದಿಂದ ಮಧ್ಯಮ ಮಟ್ಟದವರೆಗೆ ಇದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಲಸಿಕೆಗಳು ನಾಗರಿಕರ ದೇಹದಲ್ಲಿ ಶೇಕಡಾ 71ರಿಂದ ಶೇಕಡಾ 81ರಷ್ಟು ಕೆಲಸ ಮಾಡುತ್ತದೆ. ಉಳಿತ ಶೇಕಡಾ 20ರಿಂದ ಶೇಕಡಾ 30ರಷ್ಟು ಮಂದಿ ಲಸಿಕೆ ಪಡೆದ ನಂತರವೂ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ. ಅದರೆ ಅದರ ತೀವ್ರತೆ ಕಡಿಮೆಯಿರುತ್ತದೆ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಸಿಗುವ ಲಸಿಕೆಗಳು ಶೇ. 100ರಷ್ಟು ಸಾಮರ್ಥ್ಯ ಹೊಂದಿಲ್ಲ, ಜನಸಂಖ್ಯೆಯ ಸಣ್ಣ ಪ್ರಮಾಣ ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ, ಹಾಗೆಂದು ಅಸಡ್ಡೆಮಾಡಿ ಕೊರೋನಾ ಲಸಿಕೆ ಹಾಕಿಸಿಕೊಳ್ಳದೆ ಇರಬೇಡಿ ಎಂದು ಡಾ ಶ್ರೀನಿವಾಸ್ ರಾವ್ ಹೇಳಿದ್ದಾರೆ.
.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆ ಕೊವ್ಯಾಕ್ಸಿನ್ ಪಡೆದು ವರ್ಷದ ಬಳಿಕ ಶೇ.30ರಷ್ಟು ಜನರಲ್ಲಿ ಆರೋಗ್ಯ ಸಮಸ್ಯೆ: ಬಿಎಚ್‌ಯು ಅಧ್ಯಯನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement