ಮಾರ್ಚ್‌ ತಿಂಗಳಲ್ಲೇ ಗರಿಷ್ಠ ತಾಪಮಾನದತ್ತ ತೆಲಂಗಾಣ..ಹಲವೆಡೆ 41 ಡಿಗ್ರಿ ಸೆಲ್ಸಿಯಸ್‌ ದಾಖಲು

ಮುಂದಿನ ಎರಡು ದಿನಗಳವರೆಗೆ ತೆಲಂಗಾಣದ ವಿವಿಧ ಭಾಗಗಳಲ್ಲಿ ತಾಪಮಾನವು ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮಾಹಿತಿ ನೀಡಿದೆ.
ದೆಹಲಿ ಮಾರ್ಚ್‌ ‌ 28ರಂದು 76 ವರ್ಷಗಳ ಇತಿಹಾದಲ್ಲೇ ಗರಿಷ್ಠ ತಾಪಮಾನ ಕಂಡಿತ್ತು. ಇದಕ್ಕೆ ಕಾರಣ ಬಿಸಿ ಶಾಖದ ಅಲೆ ಎಂದು ಹೇಳಿತ್ತು. ಮಾರ್ಚ್‌ ತಿಂಗಳಲ್ಲೇ ತೆಲಂಗಾಣವೂ ಗರಿಷ್ಠ ತಾಪಮಾನ ಕಾಣುತ್ತಿದೆ.
ತೆಲಂಗಾಣದ ಮೂರು ಜಿಲ್ಲೆಗಳು – ಆದಿಲಾಬಾದ್, ನಿಜಾಮಾಬಾದ್ ಮತ್ತು ರಾಮಗುಂಡಮ್ ಜಿಲ್ಲೆಗಳಲ್ಲಿ ಸೋಮವಾರ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಿಯಾಗಿದೆ. ಹೈದರಾಬಾದ್ ನಗರವು 38.8 ಡಿಗ್ರಿ ದಾಖಲಿಸಿದೆ.
ರಾಜ್ಯದ ರಾಮಗುಂಡಂ ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದರೆ, ಆದಿಲಾಬಾದ್ 40.8 ಡಿಗ್ರಿ ಮತ್ತು ನಿಜಾಮಾಬಾದ್ 40.5 ಡಿಗ್ರಿ ತಾಪಮಾನ ದಾಖಲಿಸಿದೆ. ಮೆಡಕ್‌ನಲ್ಲಿ 19.8 ಡಿಗ್ರಿ ಸೆಲ್ಸಿಯಸ್‌ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ ಎಂದು ನ್ಯೂಸ್‌ ಮಿನಿಟ್‌ ವರದಿ ಮಾಡಿದೆ.
ವರದಿ ಪ್ರಕಾರ, ರಾಜ್ಯದ ಬದ್ರಾಚಲಂ 39.2 ಡಿಗ್ರಿ ಸೆಲ್ಸಿಯಸ್, 37.9 ಕ್ಕೆ ಹಕಿಂಪೇಟ್, 38.1 ಕ್ಕೆ ದುಂಡಿಗಲ್, 38 ಕ್ಕೆ ಹನ್ಮಕೊಂಡ, 37.2 ಕ್ಕೆ ಖಮ್ಮಮ್, ಮಹಾಬೂಬ್‌ನಗರ 39, ಮೆಡಕ್ 38.3, ಮತ್ತು ನಲ್ಗೊಂಡ 38.5 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ.
ಮುಂದಿನ 3-4 ದಿನಗಳಲ್ಲಿ, ಉತ್ತರದ ಕೆಲವು ಸ್ಥಳಗಳು ಮತ್ತು ಮಧ್ಯ ತೆಲಂಗಾಣದ ಕೆಲವು ಭಾಗಗಳು ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿಗಳನ್ನು ದಾಖಲಿಸಿದೆ. ತೆಲಂಗಾಣದಕ್ಕಿ ಶುಷ್ಕ ಹವಾಮಾನದ ಸಾಧ್ಯತೆಯಿದೆ ಮತ್ತು ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಆಗಿರಬಹುದು. ಹೈದರಾಬಾದ್ ಮತ್ತು ಪಕ್ಕದ ಪ್ರದೇಶಗಳಲ್ಲಿ ಸುಮಾರು 38-40 ಡಿಗ್ರಿ ಸೆಲ್ಸಿಯಸ್ ತಾಪಮಾನ ಮತ್ತು ಕನಿಷ್ಠ ತಾಪಮಾನ 22-24 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ” ಹೈದರಾಬಾದ್‌ ಐಎಂಡಿ ತಿಳಿಸಿದೆ.
ಏತನ್ಮಧ್ಯೆ, ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ (ಜಿಎಚ್‌ಎಂಸಿ), ನಾರಾಯಣಗುಡವು ಸೋಮವಾರ 39.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಿಸಿದೆ ಎಂದು ತೆಲಂಗಾಣ ರಾಜ್ಯ ಅಭಿವೃದ್ಧಿ ಯೋಜನಾ ಸೊಸೈಟಿ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement