ಕಾಂಗ್ರೆಸ್‌ಗೆ ಶಾಕ್‌ ನೀಡಿದ ʼಹಿಂದಿ ಬೆಲ್ಟ್‌; ಮೂರು ರಾಜ್ಯಗಳಲ್ಲಿ ಬಿಜೆಪಿಗೆ ಗೆಲುವು, ತೆಲಂಗಾಣ ಕಾಂಗ್ರೆಸ್‌ ತೆಕ್ಕೆಗೆ, ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ

 ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಆಘಾತಕಾರಿ ಫಲಿತಾಂಶವಾಗಿದೆ . 2018ರಲ್ಲಿ ಗೆಲುವು ಸಾಧಿಸಿದ್ದ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಎದುರು ಕಾಂಗ್ರೆಸ್‌ ಸೋಲನುಭವಿಸಿದೆ.
ದೇಶದ ‘ಹಿಂದಿ ಬೆಲ್ಟ್‌’ನ ಪ್ರಮುಖ 3 ರಾಜ್ಯಗಳಲ್ಲಿ ಮತದಾರರು ಕಾಂಗ್ರೆಸ್‌ಗೆ ಆಘಾತ ನೀಡಿದ್ದಾರೆ . ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ರಾಹುಲ್ ಗಾಂಧಿ ಅವರ ಇಮೇಜ್‌ಗೂ ಧಕ್ಕೆ ತಂದಿದೆ. ಲೋಕಸಭೆ ಚುನಾವಣೆಗೆ ಸೆಮಿಫೈನಲ್‌ ಎಂದು ಬಿಂಬಿತವಾಗಿದ್ದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ತೆಂಗಾಣ ಹೊರತುಪಡಿಸಿ ಬೇರೆಡೆ ಸೋಲನುಭವಿಸಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಕನಸು ಕಾಣುತ್ತಿರುವ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಮೈತ್ರಿ ಕೂಟದ ಮೇಲೂ ಈ ಫಲಿತಾಂಶ ಪರಿಣಾಮ ಬೀರುವ ಸಾಧ್ಯತೆಗಳು ದಟ್ಟವಾಗಿವೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಭಾನುವಾರ ಮತಗಳ ಎಣಿಕೆ ನಡೆದಿದ್ದು, ಕಾಂಗ್ರೆಸ್ ಅನ್ನು ದಂಗುಬಡಿಸುವಂತೆ ತನ್ನ ಪ್ರಬಲವಾದ ಚುನಾವಣಾ ಪ್ರದರ್ಶನದಲ್ಲಿ ಭಾರತೀಯ ಜನತಾ ಪಕ್ಷವು ಛತ್ತೀಸ್‌ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳನ್ನು ಗೆದ್ದಿದೆ. ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ. ತೆಲಂಗಾಣದಲ್ಲಿ ಆಡಳಿತಾಋಊ ಪಕ್ಷವಾದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ ಕಾಂಗ್ರೆಸ್‌ ಮುಂದೆ ಮಂಡಿಯೂರಿದ್ದು, ಕಾಂಗ್ರೆಸ್‌ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ ಅವರ ಪಕ್ಷಕ್ಕೆ ಹ್ಯಾಟ್ರಿಕ್‌ ಗೆಲುವಿಗೆ ಅವಕಾಶ ನೀಡಲಿಲ್ಲ.ಮಿಜೋರಾಂನ ಫಲಿತಾಂಶಗಳು ಸೋಮವಾರ (ಡಿಸೆಂಬರ್‌೪) ಹೊರಬೀಳಲಿವೆ.

ಪ್ರಮುಖ ಸುದ್ದಿ :-   ವೀಡಿಯೊ: ತಾಪಮಾನ ಹೆಚ್ಚಳದಿಂದ ವಿದ್ಯಾರ್ಥಿಗಳು ಪಾರಾಗಲು ಕ್ಲಾಸ್‌ ರೂಮ್‌ ಅನ್ನೇ ಈಜುಕೊಳವಾಗಿ ಪರಿವರ್ತಿಸಿದ ಶಾಲೆ...!

ಮಧ್ಯಪ್ರದೇಶದಲ್ಲಿ ಬಿಜೆಪಿ…

ಮಧ್ಯಪ್ರದೇಶದ 230 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿಯು ಪ್ರಸ್ತುತ 167 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ, ಬಹುಮತಕ್ಕೆ 116 ಸ್ಥಾನಗಳನ್ನು ಗೆಲ್ಲಬೇಕು. ಕಾಂಗ್ರೆಸ್ ದೂರದ ಎರಡನೇ ಸ್ಥಾನದಲ್ಲಿದೆ, 62 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.ತಮ್ಮ ಭದ್ರಕೋಟೆಯಾದ ಬುಧ್ನಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಶಿವರಾಜ ಚೌಹಾಣ ಅವರು 50,000ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿರುವ ಶಿವರಾಜ ಚೌವಾಣ ಅವರು, ಪಕ್ಷದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ ಮನ್ನಣೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಛತ್ತೀಸ್‌ಗಢದಲ್ಲಿ ಬಿಜೆಪಿಗೆ ಅಧಿಕಾರ…
90 ವಿಧಾನಸಭೆ ಸ್ಥಾನಗಳ ಛತ್ತೀಸ್‌ಗಢದ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕೆಳಗಿಳಿಸಿ ಬಿಜೆಪಿ ಪ್ರಬಲ ಗೆಲುವು ದಾಖಲಿಸಲು ಮುಂದಾಗಿದೆ. ಪಕ್ಷವು 55 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್ 34 ಸ್ಥಾನಗಳಲ್ಲಿ ಮುಂದಿದೆ. ಆರಂಭದಲ್ಲಿ ಹಿಂದುಳಿದಿದ್ದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಈಗ ಪಟಾನ್ ಕ್ಷೇತ್ರದಲ್ಲಿ ತಮ್ಮ ಸೋದರಳಿಯ ಮತ್ತು ಬಿಜೆಪಿ ಅಭ್ಯರ್ಥಿ ವಿಜಯ್ ಬಘೇಲ್ ವಿರುದ್ಧ ಮುನ್ನಡೆ ಸಾಧಿಸಿದ್ದಾರೆ.

ರಾಜಸ್ಥಾನದಲ್ಲಿ ಕಾಂಗ್ರೆಸ್‌ಗೆ ಸೋಲು
ಆಡಳಿತ-ವಿರೋಧಿ ಅಲೆ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಾಯ ಮಾಡಿತು. ಅಲ್ಲದೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಪಕ್ಷದ ಸಹೋದ್ಯೋಗಿ ಸಚಿನ್ ಪೈಲಟ್ ಅವರ ನಡುವಿನ ಭಿನ್ನಮತ ಸಹ ಕಾಂಗ್ರೆಸ್‌ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.
ಬಿಜೆಪಿ 115 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 69 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಚಿನ್‌ ಪೈಲಟ್ ಅವರು ಟೋಂಕ್‌ನಲ್ಲಿ 887 ಮತಗಳ ಅಲ್ಪ ಅಂತರದಿಂದ ಮುಂದಿದ್ದಾರೆ. ಸರ್ದಾರ್‌ಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಗೆಹ್ಲೋಟ್ 14,231 ಮತಗಳಿಂದ ಮುನ್ನಡೆಯಲ್ಲಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಮಣೆ…
ಬಿಆರ್‌ಎಸ್ ವಿರುದ್ಧ ಪಕ್ಷವು ಸ್ಪಷ್ಟ ಗೆಲುವು ದಾಖಲಿಸುವ ಹಾದಿಯಲ್ಲಿರುವ ಕಾಂಗ್ರೆಸ್‌ಗೆ ಇದು ಸಮಾಧಾನಕರ ಗೆಲುವಾಗಿದೆ. ಪ್ರಸ್ತುತ ಕಾಂಗ್ರೆಸ್ 67 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಆರ್‌ಎಸ್ 37 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಒಂದು ಸ್ಥಾನ ಗೆದ್ದಿದ್ದ ಬಿಜೆಪಿ ಈ ಚುನಾವಣೆಯಲ್ಲಿ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮುಖ್ಯಮಂತ್ರಿ ಕೆಸಿಆರ್ ಅವರು ಗಜ್ವೆಲ್ ಕ್ಷೇತ್ರದಲ್ಲಿ 11,714 ಮತಗಳಿಂದ ಮುನ್ನಡೆಯಲ್ಲಿದ್ದಾರೆ, ಆದರೆ ಕಾಮರೆಡ್ಡಿ ಕ್ಷೇತ್ರದಲ್ಲಿ 3,335 ಮತಗಳಿಂದ ಹಿಂದುಳಿದಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಮುಂದಿದ್ದಾರೆ.

ಪ್ರಮುಖ ಸುದ್ದಿ :-   ಬಾಬಾ ರಾಮದೇವ ಕಂಪನಿ ತಯಾರಿಸಿದ 14 ಔಷಧಗಳ ತಯಾರಿಕಾ ಪರವಾನಗಿ ಅಮಾನತು ಮಾಡಿದ ಉತ್ತರಾಖಂಡ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement