ಇಸ್ರೇಲ್-ಹಮಾಸ್ ಯುದ್ಧ : ತಪ್ಪಾಗಿ ತಿಳಿದು ಮೂವರು ಇಸ್ರೇಲಿ ಒತ್ತೆಯಾಳುಗಳನ್ನು ಕೊಂದ ಇಸ್ರೇಲಿ ಪಡೆಗಳು

ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಉತ್ತರ ಗಾಜಾದ ಶೆಜೈಯಾ ಪ್ರದೇಶದಲ್ಲಿ ನಡೆದ ಹೋರಾಟದ ಸಮಯದಲ್ಲಿ ತಮಗೆ ಬೆದರಿಕೆ ಎಂದು ತಪ್ಪಾಗಿ ಗುರುತಿಸಿ ಮೂವರು ಇಸ್ರೇಲಿ ಒತ್ತೆಯಾಳುಗಳ ಮೇಲೆ ಗುಂಡು ಹಾರಿಸಿದರು ಎಂದು ಮಿಲಿಟರಿ ವಕ್ತಾರ ಡೇನಿಯಲ್ ಹಗರಿ ಶುಕ್ರವಾರ ಹೇಳಿದ್ದಾರೆ.
“ಸೈನಿಕರು ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ ಅನೇಕ ಭಯೋತ್ಪಾದಕರನ್ನು ಎದುರಿಸಿದ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಹಾಗೂ ಅವರ ಸಾವಿಗೆ ಸಂಪೂರ್ಣ ಹೊಣೆಗಾರಿಕೆಯನ್ನು ಮಿಲಿಟರಿ ಹೊರುತ್ತದೆ ಎಂದು ಹೇಳಿದ್ದಾರೆ.
“ಶೆಜೈಯಾದಲ್ಲಿನ ಯುದ್ಧದ ಸಮಯದಲ್ಲಿ, ಐಡಿಎಫ್ (IDF) 3 ಇಸ್ರೇಲಿ ಒತ್ತೆಯಾಳುಗಳನ್ನು ʼಬೆದರಿಕೆʼ ಎಂದು ತಪ್ಪಾಗಿ ಗುರುತಿಸಿತು ಮತ್ತು ಅದರ ಪರಿಣಾಮವಾಗಿ, ಅವರ ಕಡೆಗೆ ಗುಂಡು ಹಾರಿಸಲಾಯಿತು ಮತ್ತು ಒತ್ತೆಯಾಳುಗಳು ಕೊಲ್ಲಲ್ಪಟ್ಟರು… ಐಡಿಎಫ್ (IDF) ದುರಂತ ಘಟನೆಯ ಬಗ್ಗೆ ತೀವ್ರ ಪಶ್ಚಾತ್ತಾಪವನ್ನು ವ್ಯಕ್ತಪಡಿಸುತ್ತದೆ ಮತ್ತು ಕುಟುಂಬಗಳಿಗೆ ಸಂತಾಪವನ್ನು ಕಳುಹಿಸುತ್ತದೆ. ಕಾಣೆಯಾದವರನ್ನು ಪತ್ತೆ ಮಾಡುವುದು ಮತ್ತು ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿ ಕರೆತರುವುದು ರಾಷ್ಟ್ರೀಯ ಧ್ಯೇಯವಾಗಿದೆ” ಎಂದು IDF ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಒತ್ತೆಯಾಳುಗಳನ್ನು ಕಿಬ್ಬುತ್ಜ್ ಕ್ಫರ್ ಅಜಾದಿಂದ ಹಮಾಸ್ ಅಪಹರಿಸಿದ ಯೋತಮ್ ಹೈಮ್, ನಿರ್ ಆಮ್ ನಿಂದ ಅಪಹರಿಸಿದಸಮರ್ ಫೌದ್ ತಲಲ್ಕಾ ಮತ್ತು ಕ್ಫರ್ ಆಜಾದಿಂದ ಲೋನ್ ಶಮ್ರಿಜ್ ಅವರನ್ನು ಅಪಹರಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಇಸ್ರೇಲಿ ಮಿಲಿಟರಿ ಮತ್ತು ಹಮಾಸ್ ಹೋರಾಟಗಾರರ ನಡುವೆ ಕೆಲವು ಭಾರೀ ಹೋರಾಟವನ್ನು ಕಂಡಿರುವ ಗಾಜಾ ನೆರೆಹೊರೆಯಲ್ಲಿ ಘಟನೆ ಸಂಭವಿಸಿದೆ ಎಂದು ಇಸ್ರೇಲ್‌ ಟೈಮ್ಸ್ ವರದಿ ಮಾಡಿದೆ.
ಈ ಘಟನೆ ಬಗ್ಗೆ ರಾಜಕೀಯ ನಾಯಕರು ಆಘಾತ ವ್ಯಕ್ತಪಡಿಸಿದ್ದಾರೆ ಆದರೆ ದುರಂತ ಘಟನೆಯಿಂದ ಕಲಿತ ಪಾಠಗಳನ್ನು ಇಸ್ರೇಲಿ ಮಿಲಿಟರಿ ಕಾರ್ಯಗತಗೊಳಿಸುತ್ತದೆ ಮತ್ತು ಹಮಾಸ್ ವಿರುದ್ಧ ಆಕ್ರಮಣವನ್ನು ಮುಂದುವರೆಸುತ್ತದೆ ಎಂದು ಪ್ರತಿಪಾದಿಸಿದರು. ಒತ್ತೆಯಾಳುಗಳ ಕುಟುಂಬಗಳಿಂದ ಹೊಸ ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಇದು ಬಂದಿದೆ.

ನೆತನ್ಯಾಹು ಹೇಳಿದ್ದೇನು?
ದುರಂತ ಬೆಳವಣಿಗೆಗೆ ಪ್ರತಿಕ್ರಿಯಿಸಿದ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದನ್ನು “ಅಸಹನೀಯ ದುರಂತ” ಎಂದು ಕರೆದರು ಮತ್ತು ಗಾಜಾದಲ್ಲಿ ಐಡಿಎಫ್ ಪಡೆಗಳಿಂದ ತಪ್ಪಾಗಿ ಕೊಲ್ಲಲ್ಪಟ್ಟ ಮೂವರು ಇಸ್ರೇಲಿ ಒತ್ತೆಯಾಳುಗಳ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
“ಇದೊಂದು ಅಸಹನೀಯ ದುರಂತವಾಗಿದೆ ಮತ್ತು ಇಸ್ರೇಲ್ ಅವರ ಸಾವಿನ ಬಗ್ಗೆ ದುಃಖಿಸುತ್ತಿದೆ. ಈ ಕಷ್ಟದ ಸಮಯದಲ್ಲಿ ದುಃಖಿತ ಕುಟುಂಬಗಳ ಜೊತೆ ಇದ್ದೇನೆ. ನಮ್ಮ ಧೈರ್ಯಶಾಲಿ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮ ಒತ್ತೆಯಾಳುಗಳನ್ನು ಮನೆಗೆ ಕರೆತರುವ ಪವಿತ್ರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು X ನಲ್ಲಿ ಹೇಳಿದ್ದಾರೆ.
ಹಮಾಸ್ ಗುಂಪು ಅಕ್ಟೋಬರ್ 7 ರಂದು ನಡೆಸಿದ ದಾಳಿಯ ಸಮಯದಲ್ಲಿ 1,200 ಇಸ್ರೇಲಿಗಳನ್ನು ಜನರನ್ನು ಕೊಂದಿತು ಮತ್ತು ಸುಮಾರು 240 ಜನರನ್ನು ಅಪಹರಿಸಿತು, ಇದು ಯುದ್ಧಕ್ಕೆ ಕಾರಣವಾಯಿತು. ಹಾಗೂ ಇಸ್ರೇಲ್‌ ಗಾಜಾವನ್ನು ಧ್ವಂಸಗೊಳಿಸಿತು ಮತ್ತು 19,000 ಪ್ಯಾಲೆಸ್ಟೀನಿಯನ್ನರನ್ನು ಕೊಂದಿತು. ಹಮಾಸ್ ಇನ್ನೂ 120 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಹಿಡಿದಿಟ್ಟುಕೊಂಡಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement