ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲಿ ವಸಾಹತು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಮತ ಚಲಾಯಿಸಿದ ಭಾರತ

ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಸಾಹತುಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. “ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್‌ನಲ್ಲಿ” ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಗುರುವಾರ ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಏಳು ದೇಶಗಳಲ್ಲಿ ಅಮೆರಿಕ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು. … Continued

ಹಮಾಸ್‌ ವಿರುದ್ಧ ಯುದ್ಧದಲ್ಲಿ ʼಮಹತ್ವದ ಹಂತʼ ಸಾಧನೆ; ಗಾಜಾ ನಗರಕ್ಕೆ ಸುತ್ತುವರಿದ ಸೇನೆ, ಗಾಜಾ ಪಟ್ಟಿ ‘ಎರಡು ಭಾಗವಾಗಿ ವಿಭಜನೆ : ಇಸ್ರೇಲಿ ಸೇನೆ

ಇಸ್ರೇಲ್-ಹಮಾಸ್ ಯುದ್ಧವು ಪ್ರಾರಂಭವಾಗಿ ಒಂದು ತಿಂಗಳಾಗಲು ಒಂದು ದಿನ ಬಾಕಿಯಿರುವಾಗ, ಇಸ್ರೇಲ್‌ನ ಮಿಲಿಟರಿ ಗಾಜಾ ನಗರವನ್ನು ಸುತ್ತುವರಿಯಲಾಗಿದ್ದು ಅದನ್ನು ಎರಡು ಭಾಗಗಳಾಗಿ ವಿಂಗಡಿಸಿದೆ ಎಂದು ಘೋಷಿಸಿದೆ. ಏತನ್ಮಧ್ಯೆ, ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರು ಪ್ಯಾಲೆಸ್ತೀನ್ ಅಧ್ಯಕ್ಷರನ್ನು ಭೇಟಿಯಾಗಿದ್ದಾರೆ, ನಂತರ ಇರಾಕ್‌ಗೆ ಹಠಾತ್ ಭೇಟಿ ನೀಡಿದ್ದಾರೆ. ಗಾಜಾದಲ್ಲಿ ನಾಲ್ಕು ವಾರಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ … Continued

ಇಸ್ರೇಲ್-ಹಮಾಸ್ ಯುದ್ಧ : ಕದನ ವಿರಾಮಕ್ಕೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯದ ಮೇಲಿನ ಮತದಾನಕ್ಕೆ ಗೈರಾದ ಭಾರತ ; ಯಾಕೆಂದರೆ….

ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಲ್ಲಿ ಭಾರತ ಮತದಾನದಿಂದ ದೂರ ಉಳಿದಿದೆ. ತನ್ನ ಗೈರಾಗುವ ನಿರ್ಧಾರಕ್ಕೆ ವಿವರಿಸಿದ ಭಾರತ, ಭಯೋತ್ಪಾದನೆಯ ವಿರುದ್ಧ ವಿಶ್ವ ಸಂಸ್ಥೆಯು ಸ್ಪಷ್ಟ ಸಂದೇಶವನ್ನು ಕಳುಹಿಸಬೇಕಾಗಿದೆ, ಆದರೆ ಕದನ ವಿರಾಮಕ್ಕೆ ಕರೆ ನೀಡಿದ ನಿರ್ಣಯದಲ್ಲಿ ಹಮಾಸ್ ಬಗ್ಗೆ ಉಲ್ಲೇಖಿಸಿಲ್ಲ ಎಂದು ಹೇಳಿದೆ. … Continued

ವೀಡಿಯೊ…| ಸಂಗೀತ ಉತ್ಸವದಿಂದ ಅಪಹರಿಸಿದ ಒತ್ತೆಯಾಳುವಿನ ಮೊದಲ ವೀಡಿಯೊ ಬಿಡುಗಡೆ ಮಾಡಿದ ಹಮಾಸ್‌

ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಮಾಸ್ ಗುಂಪು ಸೋಮವಾರ, ಒತ್ತೆಯಾಳುವಿನ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಯುವತಿಯೊಬ್ಬಳು ಅಜ್ಞಾತ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದನ್ನು ತೋರಿಸಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಅಕ್ಟೋಬರ್ 7 ರಂದು ಹಮಾಸ್‌ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವೀಗಾಡದ ನಂತರ ಇದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್‌ … Continued

24 ತಾಸಿನಲ್ಲಿ ಹಮಾಸ್‌ನ ಇಬ್ಬರು ನಾಯಕರ ಕೊಂದ ಇಸ್ರೇಲ್ : ಕ್ರೂರ ದಾಳಿ ನೇತೃತ್ವ ವಹಿಸಿದ್ದ ಮತ್ತೊಬ್ಬ ಹಮಾಸ್ ಕಮಾಂಡರನ ಹತ್ಯೆ

ಟೆಲ್‌ ಅವೀವ್‌ : ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಇಸ್ರೇಲ್ ಮೇಲಿನ ಕ್ರೂರ ದಾಳಿಯ ನೇತೃತ್ವ ವಹಿಸಿದ್ದ ಹಮಾಸ್ ಕಮಾಂಡರ್ ಮತ್ತು ಹಮಾಸ್‌ ಗುಂಪಿನ ‘ನುಖ್ಬಾ’ ಕಮಾಂಡೋ ಪಡೆಯ ನಾಯಕ ಅಲಿ ಖಾದಿಯನ್ನು ಕೊಂದಿರುವುದಾಗಿ ಇಸ್ರೇಲಿ ವಾಯುಪಡೆ ಹೇಳಿದೆ. ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಜಂಟಿ ಗುಪ್ತಚರ ಪ್ರಯತ್ನಗಳ ಭಾಗವಾಗಿ ಡ್ರೋನ್ … Continued

ಇಸ್ರೇಲ್‌-ಹಮಾಸ್‌ ಯುದ್ಧ : ಇಸ್ರೇಲ್‌ ಜೊತೆ ಶಾಂತಿ ಒಪ್ಪಂದದ ಮಾತುಕತೆ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ-ವರದಿ

ಇಸ್ರೇಲ್‌ ಹಾಗೂ ಹಮಾಸ್‌ ಮಧ್ಯೆ ನಡೆಯುತ್ತಿರುವ ಯುದ್ಧದ ಮಧ್ಯೆ, ಸೌದಿ ಅರೇಬಿಯಾವು ಇಸ್ರೇಲ್‌ ಜೊತೆಗೆ ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದದ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ಸಾಮಾನ್ಯೀಕರಣದ ಮಾತುಕತೆಗಳನ್ನು ಕೊನೆಗೊಳಿಸುತ್ತಿಲ್ಲ ಆದರೆ ಹಿಂಸಾಚಾರ ನಿಲ್ಲುವವರೆಗೂ ಅವುಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಸೌದಿಯ ಕ್ರೌನ್ ಪ್ರಿನ್ಸ್ … Continued

ವೀಡಿಯೊ…| ಹಮಾಸ್‌-ಇಸ್ರೇಲ್‌ ಯುದ್ಧದ ಮಧ್ಯೆ ಚೀನಾದಲ್ಲಿ ಇಸ್ರೇಲಿ ರಾಯಭಾರ ಕಚೇರಿ ಉದ್ಯೋಗಿಗೆ ಇರಿತ

ಬೀಜಿಂಗ್‌ನಲ್ಲಿರುವ ಇಸ್ರೇಲಿ ರಾಯಭಾರಿ ಕಚೇರಿಯ ಉದ್ಯೋಗಿಯೊಬ್ಬರನ್ನು ಶುಕ್ರವಾರ ದಾಳಿ ನಡೆಸಿ ಇರಿಯಲಾಗಿದೆ. ಉದ್ಯೋಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯನ್ನು ಚೀನಾ ತಕ್ಷಣವೇ ಒಪ್ಪಿಕೊಂಡಿಲ್ಲ. ಹಮಾಸ್‌ನ ಮಾಜಿ ನಾಯಕ ಇಸ್ಲಾಂನ ಎಲ್ಲಾ ಸದಸ್ಯರಿಗೆ “ಜಿಹಾದ್ ದಿನ” ಆಚರಿಸಲು ಕರೆ ನೀಡಿದ ದಿನ ಇದು ಸಂಭವಿಸಿದೆ. ಹೇಳಿಕೆಯಲ್ಲಿ, ಚೀನಾದ ವಿದೇಶಾಂಗ ಸಚಿವಾಲಯವು ರಾಯಭಾರ ಕಚೇರಿಯ ಆಧಾರದ ಮೇಲೆ ದಾಳಿ … Continued

ಇಸ್ರೇಲ್‌ ಮೇಲೆ ಹಮಾಸ್‌ ದಾಳಿಯಲ್ಲಿ 100 ಜನರು ಸಾವು, 740ಕ್ಕೂ ಹೆಚ್ಚು ಜನರಿಗೆ ಗಾಯ : ಇಸ್ರೇಲ್‌ ಪ್ರತಿದಾಳಿ, ಗಾಜಾದಲ್ಲಿ 198 ಮಂದಿ ಸಾವು, 1,610 ಮಂದಿಗೆ ಗಾಯ

ಗಾಜಾ ಪಟ್ಟಿಯಲ್ಲಿರುವ ಆಡಳಿತಾರೂಢ ಹಮಾಸ್ ಉಗ್ರಗಾಮಿ ಗುಂಪು ಶನಿವಾರ ಬೆಳಗಿನ ಜಾವದಲ್ಲಿ ಇಸ್ರೇಲ್ ಮೇಲೆ ಭೀಕರ ದಾಳಿ ನಡೆಸಿತು. ಗಾಜಾ ಪ್ರದೇಶದಿಂದ ಇಸ್ರೇಲ್‌ ಮೇಲೆ ಸಾವಿರಾರು ರಾಕೆಟ್‌ಗಳನ್ನು ಹಾರಿಸಿದರು. ಶನಿವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಕನಿಷ್ಠ 100 ಜನರು ಸಾವಿಗೀಡಾಗಿದ್ದಾರೆ ಮತ್ತು 740 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ … Continued