ವೀಡಿಯೊ…| ಸಂಗೀತ ಉತ್ಸವದಿಂದ ಅಪಹರಿಸಿದ ಒತ್ತೆಯಾಳುವಿನ ಮೊದಲ ವೀಡಿಯೊ ಬಿಡುಗಡೆ ಮಾಡಿದ ಹಮಾಸ್‌

ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಮಾಸ್ ಗುಂಪು ಸೋಮವಾರ, ಒತ್ತೆಯಾಳುವಿನ ಮತ್ತೊಂದು ವೀಡಿಯೊವನ್ನು ಬಿಡುಗಡೆ ಮಾಡಿದೆ, ಅದರಲ್ಲಿ ಯುವತಿಯೊಬ್ಬಳು ಅಜ್ಞಾತ ಸ್ಥಳದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವುದನ್ನು ತೋರಿಸಿದೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ.
ಅಕ್ಟೋಬರ್ 7 ರಂದು ಹಮಾಸ್‌ ದಾಳಿಯಲ್ಲಿ 1,300 ಕ್ಕೂ ಹೆಚ್ಚು ಇಸ್ರೇಲಿ ಜನರು ಸಾವೀಗಾಡದ ನಂತರ ಇದಕ್ಕೆ ಪ್ರತೀಕಾರವಾಗಿ ಗಾಜಾ ಮೇಲೆ ಇಸ್ರೇಲ್‌ ಬಾಂಬ್‌ ದಾಳಿ ನಡೆಸುತ್ತಿರುವ ಮಧ್ಯೆ ಹಮಾಸ್‌ ಒತ್ತೆಯಾಳಾಗಿರಿಸಿಕೊಂಡಿರುವ ಇಸ್ರೇಲಿ ಮಹಿಳೆಯ ವೀಡಿಯೊವನ್ನು ಹಮಾಸ್ ಬಿಡುಗಡೆ ಮಾಡಿದೆ. ದಾಳಿಯ ಸಮಯದಲ್ಲಿ ಸುಮಾರು 200 ಜನರನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಹಮಾಸ್‌ನ ಮಿಲಿಟರಿ ವಿಭಾಗ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಸೋಮವಾರ (ಅಕ್ಟೋಬರ್‌ ೧೬) ತನ್ನನ್ನು 21 ವರ್ಷದ ಮಿಯಾ ಸ್ಕೆಮ್ ಎಂದು ಗುರುತಿಸಿಕೊಂಡ ಯುವತಿಯ ವೀಡಿಯೊವನ್ನು ಬಿಡುಗಡೆ ಮಾಡಿದೆ. ವೀಡಿಯೊದಲ್ಲಿ, ಯುವತಿಯ ತೋಳಿಗೆ ಬ್ಯಾಂಡೇಜ್‌ ಸುತ್ತಲಾಗಿದೆ.

ವೀಡಿಯೊದಲ್ಲಿ, ಅವಳು ಗಾಜಾ ಗಡಿಯ ಸಮೀಪವಿರುವ ಸಣ್ಣ ಇಸ್ರೇಲಿ ನಗರವಾದ ಸ್ಡೆರೋಟ್‌ನಿಂದ ಬಂದವಳು ಎಂದು ಹೇಳಿದ್ದಾಳೆ. ದಾಳಿಯ ದಿನ , ಅವರು ಕಿಬ್ಬುಟ್ಜ್ ರೀಮ್‌ನಲ್ಲಿ ನಡೆದ ಸೂಪರ್‌ನೋವಾ ಸುಕ್ಕೋಟ್ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದರು. ಆಗ ಹಮಾಸ್ ಕಾರ್ಯಕರ್ತರು ಸಭೆಯ ಮೇಲೆ ದಾಳಿ ಮಾಡಿದರು. ಸಂಗೀತ ಉತ್ಸವದಲ್ಲಿ ಕನಿಷ್ಠ 260 ಜನರು ಕೊಲ್ಲಲ್ಪಟ್ಟರು ಮತ್ತು ಮಿಯಾ ಸೇರಿದಂತೆ ಇತರರನ್ನು ಒತ್ತೆಯಾಳಾಗಿನ್ನಾಗಿಸಿ ಹಮಾಸ್‌ ಕಾರ್ಯಕರ್ತರು ಗಾಜಾಕ್ಕೆ ಕರೆದೊಯ್ದಿದ್ದಾರೆ.
ಕೇವಲ ಒಂದು ನಿಮಿಷದ ವೀಡಿಯೊದಲ್ಲಿ ಮಿಯಾಳ ಗಾಯಕ್ಕೆ ಆರೋಗ್ಯ ರಕ್ಷಣೆ ನೀಡುತ್ತಿರುವುದನ್ನು ನೋಡಬಹುದು. ತನ್ನ ಗಾಯಕ್ಕೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ ಎಂದು ಇಸ್ರೇಲಿ ಮಹಿಳೆ ಹೇಳಿದ್ದಾಳೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

“ಅವರು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ, ಅವರು ನನಗೆ ಚಿಕಿತ್ಸೆ ನೀಡುತ್ತಿದ್ದಾರೆ, ಔಷಧಿಗಳನ್ನು ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ” ಎಂದು ಅವಳು ಹೇಳಿದ್ದಾಳೆ. “ನನ್ನ ಕುಟುಂಬಕ್ಕೆ, ನನ್ನ ಹೆತ್ತವರಿಗೆ, ನನ್ನ ಒಡಹುಟ್ಟಿದವರಿಗೆ ಆದಷ್ಟು ಬೇಗ ಮನೆಗೆ ಹಿಂತಿರುಗಬೇಕೆಂದು ಹೇಳಲು ಬಯಸುತ್ತೇನೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಆದಷ್ಟು ಬೇಗ ಕರೆದುಕೊಂಡು ಹೋಗಿ ಎಂದು ಹೇಳಿದ್ದಾಳೆ.
ಕಳೆದ ವಾರ ಮಿಯಾಳನ್ನು ಅಪಹರಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಖಚಿತಪಡಿಸಿವೆ ಮತ್ತು ಅಧಿಕಾರಿಗಳು ಮಿಯಾ ಕುಟುಂಬವನ್ನು ತಲುಪಿದ್ದಾರೆ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.

ಹಮಾಸ್ ಪ್ರಕಟಿಸಿದ ವೀಡಿಯೊದಲ್ಲಿ, ಅವರು ತಮ್ಮನ್ನು ಮಾನವೀಯವಾಗಿ ಎಲ್ಲರನ್ನೂ ನಡೆಸುಕೊಳ್ಳುತ್ತಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಆದಾಗ್ಯೂ, ಹಮಾಸ್‌ ಶಿಶುಗಳು, ಮಕ್ಕಳು, ಪುರುಷರು, ಮಹಿಳೆಯರು ಮತ್ತು ವೃದ್ಧರ ಹತ್ಯೆ ಮತ್ತು ಅಪಹರಣಕ್ಕೆ ಕಾರಣವಾದ ಭಯಾನಕ ಭಯೋತ್ಪಾದಕ ಸಂಘಟನೆಯಾಗಿದೆ ಎಂದು ಇಸ್ರೇಲಿ ರಕ್ಷಣಾ ಪಡೆ (IDF) ನ ಪೋಸ್ಟ್ ಎಕ್ಸ್ ನಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಇಂಟರ್ನೆಟ್ ನಲ್ಲಿ ಭಾರೀ ಗಮನ ಸೆಳೆದ ರೋಬೋಟ್ ನಾಯಿ ಡ್ಯಾನ್ಸ್‌ ಮಾಡುವ ವೀಡಿಯೊ

ಈ ಸಮಯದಲ್ಲಿ, ಮಿಯಾ ಸೇರಿದಂತೆ ಎಲ್ಲಾ ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಮರಳಿ ಕರೆತರುವಂತೆ ಮಾಡಲು ನಾವು ಎಲ್ಲಾ ಗುಪ್ತಚರ ಮತ್ತು ಕಾರ್ಯಾಚರಣೆಯ ಕ್ರಮಗಳನ್ನು ನಿಯೋಜಿಸುತ್ತಿದ್ದೇವೆ” ಎಂದು ಐಡಿಎಫ್‌ ತಿಳಿಸಿದೆ.
ಮಿಯಾ ಅವರ ಕುಟುಂಬವು ಕ್ಲಿಪ್‌ಗೆ ಪ್ರತಿಕ್ರಿಯಿಸಿದೆ, ಅವಳು ಸುರಕ್ಷಿತವಾಗಿರುವುದನ್ನು ನೋಡಲು ಸಂತೋಷವಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್‌ ಅವರನ್ನು ಉಲ್ಲೇಖಿಸಿ ವರದಿ ಮಾಡಿದೆ.
ಮಿಯಾ ಇಸ್ರೇಲಿ-ಫ್ರೆಂಚ್ ಪ್ರಜೆ. ತಮ್ಮ ಸಂಬಂಧಿಕರನ್ನು ಮುಕ್ತಗೊಳಿಸಲು ಸಹಾಯ ಮಾಡುವಂತೆ ಕೋರಿ ಕಳೆದ ವಾರ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಮನವಿ ಮಾಡಿದ ಫ್ರೆಂಚ್ ಕುಟುಂಬಗಳಲ್ಲಿ ಅವರ ಕುಟುಂಬವೂ ಸೇರಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement