ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲಿ ವಸಾಹತು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಮತ ಚಲಾಯಿಸಿದ ಭಾರತ

ನವದೆಹಲಿ: ಪ್ಯಾಲೆಸ್ತೀನ್‌ನಲ್ಲಿ ಇಸ್ರೇಲ್ ವಸಾಹತುಗಳನ್ನು ಖಂಡಿಸುವ ವಿಶ್ವಸಂಸ್ಥೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. “ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಪ್ರಾಂತ್ಯದಲ್ಲಿ ಮತ್ತು ಆಕ್ರಮಿತ ಸಿರಿಯನ್ ಗೋಲನ್‌ನಲ್ಲಿ” ವಸಾಹತು ಚಟುವಟಿಕೆಗಳನ್ನು ಖಂಡಿಸುವ ನಿರ್ಣಯವನ್ನು ಗುರುವಾರ ಅಂಗೀಕರಿಸಲಾಯಿತು. ಇದನ್ನು ವಿರೋಧಿಸಿದ ಏಳು ದೇಶಗಳಲ್ಲಿ ಅಮೆರಿಕ ಮತ್ತು ಕೆನಡಾ ಸೇರಿವೆ. ಹದಿನೆಂಟು ದೇಶಗಳು ಮತದಾನದಿಂದ ದೂರ ಉಳಿದವು. … Continued

1,20,000 ವರ್ಷಗಳಲ್ಲಿ ಭೂಮಿಯು ಇಷ್ಟು ಬಿಸಿಯಾಗಿರಲಿಲ್ಲ’: ಈ ಜುಲೈ ತಿಂಗಳು ವಿಶ್ವದ ಈವರೆಗಿನ ಅತ್ಯಂತ ʼಬಿಸಿʼಯಾದ ತಿಂಗಳಾಗಲಿದೆ…!

ಈ ಜುಲೈ ತಿಂಗಳು ಇತಿಹಾಸದಲ್ಲಿ ಈವರೆಗೆ ದಾಖಲಾದ ಅತ್ಯಂತ ʼಬಿಸಿʼಯಾದ ತಿಂಗಳು ಎಂದು ಕರೆಸಿಕೊಳ್ಳುವ ʼಅತ್ಯಂತ ಹೆಚ್ಚು ಸಾಧ್ಯತೆ” ಇದೆ ಎಂದು ವಿಶ್ವಸಂಸ್ಥೆಯು (UN) ಹೇಳಿದೆ. ಏಕೆಂದರೆ ಸುಡುವ ಶಾಖದ ಅಲೆಗಳು ಪ್ರಪಂಚದ ವಿವಿಧ ಪ್ರದೇಶಗಳಲ್ಲಿ ಕಂಡುಬಂದಿವೆ. ಯುರೋಪಿಯನ್ ಒಕ್ಕೂಟದ ಕೋಪರ್ನಿಕಸ್ ಹವಾಮಾನ ಬದಲಾವಣೆ ಸರ್ವೀಸ್‌ ಮತ್ತು ವಿಶ್ವ ಹವಾಮಾನ ಸಂಸ್ಥೆ (WMO)ಯ ಮಾಹಿತಿಯು ಜುಲೈ … Continued

ಈ ವರ್ಷವೇ ಚೀನಾ ಹಿಂದಿಕ್ಕಿ ವಿಶ್ವದಲ್ಲಿ ಅತಿಹೆಚ್ಚು ಜನಸಂಖ್ಯೆಯುಳ್ಳ ರಾಷ್ಟ್ರವಾಗಲಿರುವ ಭಾರತ…!

ನವದೆಹಲಿ: ಈ ವರ್ಷದ ಮಧ್ಯಭಾಗದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗುವ ಹಾದಿಯಲ್ಲಿದೆ ಎಂದು ವಿಶ್ವಸಂಸ್ಥೆ ಬುಧವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) “ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್-2023” ರ ಜನಸಂಖ್ಯಾ ದತ್ತಾಂಶವು ಭಾರತದ ಜನಸಂಖ್ಯೆಯನ್ನು 142.86 ಕೋಟಿ ಜನಸಂಖ್ಯೆ ಹೊಂದಲಿದೆ ಎಂದು … Continued

800 ಕೋಟಿ ಮೈಲಿಗಲ್ಲು ದಾಟಿದ ಜಾಗತಿಕ ಜನಸಂಖ್ಯೆ, ಭಾರತದ್ದೇ ಅತಿದೊಡ್ಡ ಕೊಡುಗೆ ; 2023ರಲ್ಲಿ ಚೀನಾ ಮೀರಿಸಲಿರುವ ಭಾರತದ ಜನಸಂಖ್ಯೆ : ವಿಶ್ವಸಂಸ್ಥೆ

ನವದೆಹಲಿ: ಮಂಗಳವಾರ ವಿಶ್ವದ ಜನಸಂಖ್ಯೆಯು 800 ಕೋಟಿಯನ್ನು ಮುಟ್ಟಿದೆ. ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ಈ ಶತಕೋಟಿಗೆ ಭಾರತವು 17.7 ಕೋಟಿ ಜನರನ್ನು ಸೇರಿಸಿದ್ದು, ಮೈಲಿಗಲ್ಲಿಗೆ ಅತಿದೊಡ್ಡ ಕೊಡುಗೆ ನೀಡಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಮುಂದಿನ ಶತಕೋಟಿಗೆ ಚೀನಾದ ಕೊಡುಗೆಯು ಋಣಾತ್ಮಕವಾಗಿರುತ್ತದೆ … Continued

ವಿಶ್ವಸಂಸ್ಥೆಯಲ್ಲಿ ಚೀನಾ ವಿರುದ್ಧದ ಮತದಾನಕ್ಕೆ ಗೈರಾದ ಒಂದು ದಿನದ ನಂತರ, ಉಯಿಘರ್ ಮುಸ್ಲಿಮರ ಮಾನವ ಹಕ್ಕುಗಳ ಪರ ಬ್ಯಾಟಿಂಗ್ ಮಾಡಿದ ಭಾರತ

ನವದೆಹಲಿ: ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿ ಚೀನಾ ಉಯ್ಘರ್ ಮುಸ್ಲಿಮರನ್ನು ನಡೆಸಿಕೊಳ್ಳುವುದರ ವಿರುದ್ಧದ ಮತದಾನಕ್ಕೆ ಗೈರುಹಾಜರಾದ ಒಂದು ದಿನದ ನಂತರ, ಭಾರತವು ಶುಕ್ರವಾರ ಕ್ಸಿನ್‌ಜಿಯಾಂಗ್ ಜನರ ಮಾನವ ಹಕ್ಕುಗಳನ್ನು ಚೀನಾ ಗೌರವಿಸಬೇಕು ಎಂದು ಹೇಳಿದೆ. ಪತ್ರಿಕಾಗೋಷ್ಠಿಯಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, “ಎಲ್ಲಾ ಮಾನವ ಹಕ್ಕುಗಳನ್ನು ಎತ್ತಿಹಿಡಿಯಲು ಭಾರತ ಬದ್ಧವಾಗಿದೆ. ದೇಶದ … Continued

2035ರಲ್ಲಿ ಭಾರತದ ನಗರಗಳ ಜನಸಂಖ್ಯೆ 67.5 ಕೋಟಿಗೆ ತಲುಪಲಿದೆ, ಚೀನಾ ನಂತರ ಎರಡನೇ ಸ್ಥಾನ: ವಿಶ್ವಸಂಸ್ಥೆ

ವಿಶ್ವಸಂಸ್ಥೆ: ಭಾರತದ ನಗರಗಳ ಜನಸಂಖ್ಯೆಯು 2035 ರಲ್ಲಿ 675 ಮಿಲಿಯನ್ (67.5 ಕೋಟಿ) ತಲುಪಲಿದೆ ಎಂದು ಅಂದಾಜಿಸಲಾಗಿದೆ, ಇದು ಚೀನಾದ 100 ಕೋಟಿಗೆ ಹೋಲಿಸಿದರೆ ಎರಡನೇ ಅತಿ ಹೆಚ್ಚು ಎಂದು ವಿಶ್ವಸಂಸ್ಥೆ ವರದಿಯಲ್ಲಿ ತಿಳಿಸಿದೆ, ಕೋವಿಡ್‌-19 ಸಾಂಕ್ರಾಮಿಕದ ನಂತರ, ಜಾಗತಿಕ ನಗರ ಜನಸಂಖ್ಯೆಯನ್ನು ಗಮನಿಸಿದೆ. 2050 ರ ವೇಳೆಗೆ ಇನ್ನೂ 2.2 ಶತಕೋಟಿಗಳಷ್ಟು ಬೆಳೆಯುವ ಹಾದಿಯಲ್ಲಿದೆ. … Continued

ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗುವ ಸಾಧ್ಯತೆ: ವಿಶ್ವಸಂಸ್ಥೆ

ಜೆನಿವಾ: ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಹವಾಮಾನ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು ಕೊವಿಡ್‌-೧೯ ಪ್ರಸಾರ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ ಎಂದು ತಿಳಿಸಿದೆ. ವಿಶ್ವಸಂಸ್ಥೆಯ ಹವಾಮಾನ ಸಂಘಟನೆ, ಕೊರೊನಾ ಪ್ರಸರಣದ ಮೇಲೆ ಹವಾಮಾನ ಬದಲಾವಣೆ ಹಾಗೂ ವಾಯುವಿನ ಗುಣಮಟ್ಟ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು … Continued

ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌‌ ನಿರ್ಬಂಧ

ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲ ನಿರ್ಬಂಧಗಳನ್ನು ಹೇರಿದೆ. ಅಮೆರಿಕ ಹಾಗೂ ಕೆಲವು ಯುರೋಪ್‌ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ನಿರ್ಬಂಧ ಹೇರಿದೆ. ಅಣ್ವಸ್ತ್ರಗಳ ಪರಿಶೀಲನೆಗೆ ಬರುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಗೆ (ಐಎಇಎ) ಸೀಮಿತ ಅನುಮತಿ ನೀಡುವುದಾಗಿ ತಿಳಿಸಿದೆ. … Continued

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ಮೂಲದ ಆಕಾಂಕ್ಷಾ ಸ್ಪರ್ಧೆ

ವಿಶ್ವ ಸಂಸ್ಥೆ : ಭಾರತೀಯ ಮೂಲದ ವಿಶ್ವಸಂಸ್ಥೆ ಉದ್ಯೋಗಿ ಕಾಂಕ್ಷಾ ಆರೋರಾ (34) ವಿಶ್ವಸಂಸ್ಥೆಯ ಮುಂದಿನ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಘೋಷಿಸಿದ್ದಾರೆ. ಪ್ರಸ್ತುತ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ವಿರುದ್ಧ ಸ್ಪರ್ಧಿಸಲು ಬಯಸಿರುವ ಮೊದಲ ಮಹಿಳಾ ಅಭ್ಯರ್ಥಿ ಇವರಾಗಿದ್ದಾರೆ. ಭಾರತದಲ್ಲಿ ಜನಿಸಿದ ಆಕಾಂಕ್ಷಾ ಕೆನಡಾ ಪಾಸ್‍ಫೋರ್ಟ್ ಹೊಂದಿದ್ದಲ್ಲದೆ ಸಾಗರೋತ್ತರ ಪೌರತ್ವದ ಮೊದಲ ಅಭ್ಯರ್ಥಿ … Continued

ಪುನಃ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಸೇರಲು ಅಮರಿಕ ನಿರ್ಧಾರ

ವಾಷಿಂಗ್ಟನ್‌: ಸುಮಾರು ಮೂರು ವರ್ಷಗಳ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ಹಿಂದೆ ಸರಿದಿದ್ದ ನಿರ್ಧಾರವನ್ನು ಈಗಿನ ಅಧ್ಯಕ್ಷ ಬಿಡೆನ್ ಆಡಳಿತವು ರದ್ದುಪಡಿಸಿ ಪುನಃ ಅದನ್ನು ಸೇರಲು ಸಜ್ಜಾಗಿದೆ. ಹಿಂದಿನ ಟ್ರಂಪ್‌ ಆಡಳಿತದ ಒಂದೊಂದೇ ನಿರ್ಣಯವನ್ನು ಬದಲಿಸುತ್ತಿರುವ ಬಿಡೆನ್‌ ಈಗ ಇದನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು … Continued