ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯಾಗುವ ಸಾಧ್ಯತೆ: ವಿಶ್ವಸಂಸ್ಥೆ

ಜೆನಿವಾ: ಕೊರೊನಾ ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ಕಾಯಿಲೆಯ ರೂಪ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಹವಾಮಾನ ಬದಲಾವಣೆಯನ್ನು ಆಧಾರವಾಗಿಟ್ಟುಕೊಂಡು ಕೊವಿಡ್‌-೧೯ ಪ್ರಸಾರ ತಡೆಯಲು ಜಾರಿಗೊಳಿಸಿರುವ ಮಾರ್ಗಸೂಚಿಗಳ ಪಾಲನೆ ಅಗತ್ಯವಾಗಿದೆ ಎಂದು ತಿಳಿಸಿದೆ.
ವಿಶ್ವಸಂಸ್ಥೆಯ ಹವಾಮಾನ ಸಂಘಟನೆ, ಕೊರೊನಾ ಪ್ರಸರಣದ ಮೇಲೆ ಹವಾಮಾನ ಬದಲಾವಣೆ ಹಾಗೂ ವಾಯುವಿನ ಗುಣಮಟ್ಟ ಯಾವ ರೀತಿ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ಕೈಗೊಂಡಿದ್ದು, ಇದರಲ್ಲಿ ೧೬ ತಜ್ಞರಿದ್ದಾರೆ. ಉಸಿರಾಟಕ್ಕೆ ತೊಂದರೆ ಉಂಟು ಮಾಡುವ ವೈರಾಣುಗಳು ನಿರ್ದಿಷ್ಟ ಋತುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಇನ್‌ಫ್ಲುಯೆಂಜಾ ಹಾಗೂ ಸಮಶೀತೋಷ್ಣ ವಾತಾವರಣದಲ್ಲಿ ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿ ಕಂಡುಬರಲಿದೆ ಎಂದು ತಜ್ಞರು ತಿಳಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement