ಅಣ್ವಸ್ತ್ರ ಪರಿಶೀಲನೆ: ವಿಶ್ವಸಂಸ್ಥೆ ಕ್ರಮಕ್ಕೆ ಇರಾನ್‌‌ ನಿರ್ಬಂಧ

ದೇಶ ಹೊಂದಿರುವ ಅಣ್ವಸ್ತ್ರಗಳನ್ನು ಪರಿಶೀಲನೆ ನಡೆಸಲು ಮುಂದಾದ ವಿಶ್ವಸಂಸ್ಥೆಯ ಕ್ರಮಕ್ಕೆ ಇರಾನ್‌ ಕೆಲ ನಿರ್ಬಂಧಗಳನ್ನು ಹೇರಿದೆ.
ಅಮೆರಿಕ ಹಾಗೂ ಕೆಲವು ಯುರೋಪ್‌ ದೇಶಗಳು ತನ್ನ ವಿರುದ್ಧ ಜಾರಿಗೊಳಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಡ ಹೇರುವ ಉದ್ದೇಶದಿಂದ ನಿರ್ಬಂಧ ಹೇರಿದೆ. ಅಣ್ವಸ್ತ್ರಗಳ ಪರಿಶೀಲನೆಗೆ ಬರುವ ಇಂಟರ್‌ನ್ಯಾಷನಲ್‌ ಅಟೋಮಿಕ್‌ ಎನರ್ಜಿ ಏಜೆನ್ಸಿಗೆ (ಐಎಇಎ) ಸೀಮಿತ ಅನುಮತಿ ನೀಡುವುದಾಗಿ ತಿಳಿಸಿದೆ. ಅಲ್ಲದೇ ಅಣ್ವಸ್ತ್ರ ಪರಿಶೀಲನೆ ನಡೆಸುವ ಸಂಬಂಧ ಐಎಇಎದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ರದ್ದುಗೊಳಿಸುವುದಾಗಿ ತಿಳಿಸಿದೆ ಎಂದು ವರದಿಯಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಡಿಯೋ | ನೇಪಾಳ ಮಹಾವಿನಾಶಕ್ಕೆ ಕಾರಣವಾದ ಪರ್ವತದಿಂದ ಹಿಮನದಿ ಕುಸಿದ ಕ್ಷಣದ ದೃಶ್ಯ ಡ್ರೋನ್‌ನಲ್ಲಿ ಸೆರೆ

ನಿಮ್ಮ ಕಾಮೆಂಟ್ ಬರೆಯಿರಿ

advertisement