ಸೌದಿ ಜೈಲಿನಲ್ಲಿ 18 ವರ್ಷದಿಂದ ಇರುವ ವ್ಯಕ್ತಿಯ ಬಿಡುಗಡೆಗಾಗಿ ಸಂಗ್ರಹವಾಯ್ತು 34 ಕೋಟಿ ರೂ…!

ಕೋಝಿಕ್ಕೋಡ್ : ಸೌದಿ ಅರೇಬಿಯಾದಲ್ಲಿ 18 ವರ್ಷಗಳಿಂದ ಜೈಲಿನಲ್ಲಿರುವ ಕೋಝಿಕ್ಕೋಡಿನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ನಿಧಿ ಸಂಗ್ರಹವಾಗಿದೆ. ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ಹಾಗೂ ರಾಜ್ಯದ ಹೊರಗೆ ಅಪಾರ ನಿಧಿ ಸಂಗ್ರಹವಾಯಿತು. ಪ್ರಪಂಚದ ಹಲವು ಭಾಗಗಳಲ್ಲಿರುವ ಮಲಯಾಳಿಗಳು ಅಬ್ದುಲ್ … Continued

ವೀಡಿಯೊ…| ಮಹಿಳಾ ವರದಿಗಾರ್ತಿಯನ್ನು ಅನುಚಿತವಾಗಿ ಸ್ಪರ್ಶಿಸಿ ವಿವಾದ ಸೃಷ್ಟಿಸಿದ ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್

ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಲೈವ್ ಕಾರ್ಯಕ್ರಮದಲ್ಲಿ ‘ಅಸಮರ್ಪಕ ನಡತೆ’ ಕಾರಣದಿಂದಾಗಿ ಆನ್‌ಲೈನ್‌ನಲ್ಲಿ ವಿವಾದ ಸೃಷ್ಟಿಸಿದೆ. ಲೈವ್‌ ಕಾರ್ಯಕ್ರಮದ ದೃಶ್ಯಾವಳಿಗಳು ಪುರುಷ ರೋಬೋಟ್, ಮಹಿಳಾ ವರದಿಗಾರ್ತಿ ಕಡೆಗೆ ತನ್ನ ಕೈಯನ್ನು ಚಾಚುವುದನ್ನು ಮತ್ತು ಅನುಚಿತವಾಗಿ ವರದಿಗಾರ್ತಿಯನ್ನು  ಸ್ಪರ್ಷಿಸುವುದನ್ನು ಚಿತ್ರಿಸಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಉಂಟುಮಾಡಿತು, ಅನೇಕರು ರೋಬೋಟ್‌ನ ನಡವಳಿಕೆಯ ಸೂಕ್ತತೆ ಬಗ್ಗೆ ಪ್ರಶ್ನೆ … Continued

ಸೌದಿ ಅರೇಬಿಯಾ ಮಸೀದಿಗಳಲ್ಲಿ ಇಫ್ತಾರ್ ನಿಷೇಧ, ರಂಜಾನ್‌ಗೆ ಮೊದಲು ಇಫ್ತಾರ್‌ ದೇಣಿಗೆ ಸಂಗ್ರಹಿಸಲು ಇಮಾಮ್‌ ಗಳಿಗೆ ನಿರ್ಬಂಧ

ರಿಯಾದ್ : ಈ ವರ್ಷದ ರಂಜಾನ್ ಹಬ್ಬಕ್ಕೆ ಮುನ್ನ ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಮಸೀದಿಗಳಲ್ಲಿ ಇಫ್ತಾರ್ ಕೂಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು ರಂಜಾನ್ ತಿಂಗಳಲ್ಲಿ ಮಸೀದಿ ನೌಕರರು ಅನುಸರಿಸಬೇಕಾದ ಸೂಚನೆಗಳ ಹೇಳಿಕೆಯನ್ನು ಹಂಚಿಕೊಂಡ ನಂತರ ಈ ಆದೇಶವು ಬಂದಿದೆ. ಆದೇಶವು … Continued

ಮುಸ್ಲಿಮೇತರ ರಾಜತಾಂತ್ರಿಕರಿಗಾಗಿ ದೇಶದಲ್ಲಿ ಮೊದಲ ಮದ್ಯದ ಅಂಗಡಿ ತೆರೆಯಲಿದೆ ಸೌದಿ ಅರೇಬಿಯಾ : ವರದಿ

ರಿಯಾದ್‌ : ಸೌದಿ ಅರೇಬಿಯಾ ತನ್ನ ಮೊದಲ ಮದ್ಯದ ಅಂಗಡಿಯನ್ನು ರಾಜಧಾನಿ ರಿಯಾದ್‌ನಲ್ಲಿ ತೆರೆಯಲು ತಯಾರಿ ನಡೆಸುತ್ತಿದೆ, ಇದು ಮುಸ್ಲಿಮೇತರ ರಾಜತಾಂತ್ರಿಕರಿಗೆ ಮಾತ್ರ ಸೇವೆ ಸಲ್ಲಿಸುತ್ತದೆ ಎಂದು ವರದಿಯೊಂದು ಹೇಳಿದೆ. ಗ್ರಾಹಕರು ಮೊಬೈಲ್ ಅಪ್ಲಿಕೇಶನ್ ಮೂಲಕ ನೋಂದಾಯಿಸಿಕೊಳ್ಳಬೇಕು, ವಿದೇಶಾಂಗ ಸಚಿವಾಲಯದಿಂದ ಕ್ಲಿಯರೆನ್ಸ್ ಕೋಡ್ ಪಡೆಯಬೇಕು ಮತ್ತು ತಮ್ಮ ಖರೀದಿಗಳೊಂದಿಗೆ ಮಾಸಿಕ ಕೋಟಾಗಳನ್ನು ಮೀರುವಂತಿಲ್ಲ ಎಂದು ಡಾಕ್ಯುಮೆಂಟ್ … Continued

$30 ಶತಕೋಟಿ ಮೌಲ್ಯದ ಐಪಿಎಲ್‌ ಮೇಲೆ ಸೌದಿ ರಾಜಕುಮಾರ ಕಣ್ಣು

ರಿಯಾದ್: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ಬಹುಕೋಟಿ ಡಾಲರ್ ಪಾಲನ್ನು ಖರೀದಿಸಲು ಸೌದಿ ಅರೇಬಿಯಾ ಆಸಕ್ತಿ ವ್ಯಕ್ತಪಡಿಸಿದೆ ಎಂದು ಬ್ಲೂಮ್‌ಬರ್ಗ್ ನ್ಯೂಸ್ ಶುಕ್ರವಾರ ವರದಿ ಮಾಡಿದೆ. ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಸಲಹೆಗಾರರು ಐಪಿಎಲ್ ಅನ್ನು $ 30 ಶತಕೋಟಿ ಮೌಲ್ಯದ ಹಿಡುವಳಿ ಕಂಪನಿಯಾಗಿ … Continued

ತನ್ನ ಭೇಟಿಗೆ ಅಮೆರಿಕ ವಿದೇಶಾಂಗ ಕಾರ್ಯದರ್ಶಿಗೆ ಗಂಟೆಗಳ ಕಾಲ ಕಾಯುವಂತೆ ಮಾಡಿದ ಸೌದಿ ಕ್ರೌನ್ ಪ್ರಿನ್ಸ್ : ವರದಿ

ವಾಷಿಂಗ್ಟನ್‌ : ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ (MBS) ಅವರ ಜೊತೆ ಭೇಟಿಗಾಗಿ ಆಗಮಿಸಿರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಅವರನ್ನು ಗಂಟೆಗಳ ಕಾಲ ಕಾಯುವಂತೆ ಮಾಡಲಾಯಿತು. ಅವರು ಆ ದಿನ ಭೇಟಿಯಾಗದೆ ಮರುದಿನ ಭೇಟಿ ಮಾಡಿದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ಇಸ್ರೇಲ್‌ನ ಮೇಲೆ ಹಮಾಸ್‌ನ ದಾಳಿಯ ವಿರುದ್ಧ … Continued

ಇಸ್ರೇಲ್‌-ಹಮಾಸ್‌ ಯುದ್ಧ : ಇಸ್ರೇಲ್‌ ಜೊತೆ ಶಾಂತಿ ಒಪ್ಪಂದದ ಮಾತುಕತೆ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ-ವರದಿ

ಇಸ್ರೇಲ್‌ ಹಾಗೂ ಹಮಾಸ್‌ ಮಧ್ಯೆ ನಡೆಯುತ್ತಿರುವ ಯುದ್ಧದ ಮಧ್ಯೆ, ಸೌದಿ ಅರೇಬಿಯಾವು ಇಸ್ರೇಲ್‌ ಜೊತೆಗೆ ಅಮೆರಿಕ ಮಧ್ಯಸ್ಥಿಕೆಯ ಶಾಂತಿ ಒಪ್ಪಂದದ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ. ಸೌದಿ ಅರೇಬಿಯಾ ಸಾಮಾನ್ಯೀಕರಣದ ಮಾತುಕತೆಗಳನ್ನು ಕೊನೆಗೊಳಿಸುತ್ತಿಲ್ಲ ಆದರೆ ಹಿಂಸಾಚಾರ ನಿಲ್ಲುವವರೆಗೂ ಅವುಗಳನ್ನು ಸ್ಥಗಿತಗೊಳಿಸುತ್ತಿದೆ ಎಂದು ಮೂಲಗಳು ತಿಳಿಸಿವೆ ಎಂದು ಜೆರುಸಲೆಮ್ ಪೋಸ್ಟ್ ವರದಿ ಮಾಡಿದೆ. ಸೌದಿಯ ಕ್ರೌನ್ ಪ್ರಿನ್ಸ್ … Continued

ರಾಜಕುಮಾರ ಹಾಗೂ ಸುಧಾರಣೆ : ಸೌದಿ ಅರೇಬಿಯಾದಲ್ಲಿ ಸುಧಾರಣೆಗಳನ್ನು ತರುತ್ತಿರುವ 38 ವರ್ಷದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್

38 ವರ್ಷದ ಸೌದಿ ಅರೇಬಿಯಾದ ಆಡಳಿತಗಾರ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ ಸೌದ್ ಅವರು ತೈಲ ಸಮೃದ್ಧ ದೇಶದ ಸುಧಾರಣೆಗಳ ಬಗ್ಗೆ ಕಟಿಬದ್ಧರಾಗಿದ್ದಾರೆ. ಗಡ್ಡಧಾರಿ ಮತ್ತು ಸಾಂಪ್ರದಾಯಿಕ ಅರಬ್ ನಿಲುವಂಗಿಯನ್ನು ಮತ್ತು ಸ್ಯಾಂಡಲ್‌ಗಳನ್ನು ಧರಿಸುವ ಅವರು ಸೌದಿ ಅರೇಬಿಯಾದ ಆಧುನಿಕ ಇತಿಹಾಸದಲ್ಲಿ ದೇಶದ ಅತಿದೊಡ್ಡ ರೂಪಾಂತರವನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅದೇರೀತಿ ಅವರು ವಿವಾದಗಳಿಂದಲೂ … Continued

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಸೌದಿ ಅರೇಬಿಯಾ ಹಿಂದಿಕ್ಕಿದ ರಷ್ಯಾ

ನವದೆಹಲಿ: ರಷ್ಯಾ ತನ್ನ ಒಪೆಕ್ ಮಿತ್ರ ಸೌದಿ ಅರೇಬಿಯಾಕ್ಕಿಂತ ತೈಲ ಬೆಲೆಯನ್ನು ಕಡಿಮೆಗೊಳಿಸಿದ್ದು, ಇದು ಅತಿದೊಡ್ಡ ಕಚ್ಚಾ ಆಮದುದಾರರಲ್ಲಿ ಒಬ್ಬರಾದ ಭಾರತದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಮಾಸ್ಕೋಗೆ ದಾರಿ ಮಾಡಿಕೊಟ್ಟಿದೆ. ಭಾರತೀಯ ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ಬ್ಲೂಮ್‌ಬರ್ಗ್ ಲೆಕ್ಕಾಚಾರಗಳ ಪ್ರಕಾರ, ರಷ್ಯಾದ ಬ್ಯಾರೆಲ್‌ಗಳು ಸೌದಿಯ ಕಚ್ಚಾ ತೈಲಕ್ಕಿಂತ ಏಪ್ರಿಲ್‌ನಿಂದ ಜೂನ್‌ವರೆಗೆ ಅಗ್ಗವಾಗಿದ್ದು, ಮೇ … Continued

ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ. ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ … Continued