ವಿಡಿಯೋಗಳು | ರಷ್ಯಾದ ಕ್ಷಿಪಣಿ ದಾಳಿಗೆ ಉಕ್ರೇನ್‌ ತತ್ತರ ; ಕೀವ್‌ನಲ್ಲಿ ಮಹಾವಿನಾಶ ; ಈ ʼಒರೆಶ್ನಿಕ್ʼ ಕ್ಷಿಪಣಿ ಮಹಾಘಾತಕ ಯಾಕೆ ?

ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷ ಭೀಕರ ಸ್ವರೂಪ ಪಡೆದುಕೊಂಡಿದ್ದು, ಇತ್ತೀಚಿನ ವಾರಗಳಲ್ಲೇ ಅತ್ಯಂತ ಭೀಕರ ಎನ್ನಲಾದ ದಾಳಿಗೆ ಉಕ್ರೇನ್ ರಾಜಧಾನಿ ಕೀವ್ ತತ್ತರಗೊಂಡಿದೆ. ರಷ್ಯಾ ಆಕ್ರಮಿತ ಪೂರ್ವ ಉಕ್ರೇನ್‌ ಮೇಲೆ ಇತ್ತೀಚೆಗೆ ನಡೆದ ದಾಳಿಗಳಿಗೆ ಪ್ರತಿಕಾರ ತೀರಿಸಿಕೊಳ್ಳುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೀವ್ ನಗರದ ಮೇಲೆ ರಷ್ಯಾ ರಾಕೆಟ್ … Continued

ಅಬುಧಾಬಿ : ಕ್ಷಿಪಣಿ ಹೊಡೆದುರುಳಿಸಿದಾಗ ಅದರ ಭಾಗಗಳು ಬಿದ್ದು ಭಾರತೀಯ ಸಾವು

ಅಬುಧಾಬಿ : ಗುರುವಾರ ಅಬುಧಾಬಿಯ ಮೇಲೆ ಹಾರಿದ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಹೊಡೆದುರುಳಿಸಿದ ನಂತರ ಅದರ ಅವಶೇಷಗಳು ಬಿದ್ದ ಪರಿಣಾಮ ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಪಾಕಿಸ್ತಾನ ಮೂಲದ ಮತ್ತೊಬ್ಬ ವ್ಯಕ್ತಿ ಕೂಡ ಈ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ, ಮತ್ತೊಬ್ಬ ಭಾರತೀಯ ಸೇರಿದಂತೆ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದಾರೆ. ಕ್ಷಿಪಣಿಯನ್ನು ತಡೆಯಲು ವಾಯು ರಕ್ಷಣಾ ವ್ಯವಸ್ಥೆಗಳನ್ನು … Continued

ಹಾರ್ಮುಜ್ ಜಲಸಂಧಿ ಬಳಿ ಇರಾನ್ ಕ್ಷಿಪಣಿ ನೆಲೆಗಳ ಮೇಲೆ 2,200 ಕೆಜಿ ತೂಕದ ‘ಬಂಕರ್ ಬಸ್ಟರ್’ ಬಾಂಬ್ ಹಾಕಿದ ಅಮೆರಿಕ

ವಿಶ್ವದ ಪ್ರಮುಖ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯ  (Strait of Hormuz) ಮೇಲೆ ನಿಯಂತ್ರಣ ಪಡೆಯಲು ಅಮೆರಿಕ ಸೇನೆಯು ತನ್ನ ಮೊದಲ ಪ್ರಮುಖ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದೆ. ಇರಾನ್‌ನ ಕರಾವಳಿ ತೀರದಲ್ಲಿರುವ ಕ್ಷಿಪಣಿ ಉಡಾವಣಾ ಕೇಂದ್ರಗಳ ಮೇಲೆ ಅಮೆರಿಕ ತನ್ನ ಅತ್ಯಂತ ಶಕ್ತಿಶಾಲಿ ‘ಬಂಕರ್ ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ನಡೆಸಿರುವುದಾಗಿ ಪ್ರಕಟಿಸಿದೆ. ಅಮೆರಿಕದ … Continued

ಅಮೆರಿಕ ಜೊತೆಗಿನ ಯುದ್ಧದ ಮಧ್ಯೆ ಬೃಹತ್‌ ಕ್ಷಿಪಣಿ-ಡ್ರೋನ್ ಸಂಗ್ರಹದ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್‌

ತೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಗೆ ಪ್ರತಿಯಾಗಿ ದಾಳಿ ನಡೆಸುತ್ತಿರುವ ಇರಾನ್ ತನ್ನ ಬೃಹತ್ ಭೂಗತ ಶಸ್ತ್ರಾಸ್ತ್ರ ಸಂಗ್ರಹದ ಸುರಂಗವನ್ನು ಜಗತ್ತಿಗೆ ಪರಿಚಯಿಸಿದೆ. ಸೋಮವಾರ (ಮಾರ್ಚ್ 2), ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಸರ್ಕಾರಿ ಮಾಧ್ಯಮಗಳ ಮೂಲಕ ಸುದೀರ್ಘ ಸುರಂಗದ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ಸಾಲು ಸಾಲಾಗಿ … Continued

ವೀಡಿಯೊ | ಮಿಲಿಟರಿ ಇತಿಹಾಸದಲ್ಲೇ ಅತಿ ದೂರದ ಟಾರ್ಗೆಟ್‌ ಧ್ವಂಸ : 300 ಕಿಮೀ ದೂರದಲ್ಲೇ ವಿಮಾನ ಹೊಡೆದುರುಳಿಸಿದ ಭಾರತದ ಎಸ್-400…!

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಅತ್ಯಾಧುನಿಕ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾದ S-400 ಸುದರ್ಶನ ಕಾರ್ಯಾಚರಣೆಯ ರೋಚಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ವಾಯುಪಡೆ ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ, ರಾಡಾರ್ ವ್ಯವಸ್ಥೆಯು ಅತೀ ದೂರದಲ್ಲಿರುವ ವೈರಿ ಟಾರ್ಗೆಟ್‌ ಅನ್ನು ಪತ್ತೆಹಚ್ಚುತ್ತದೆ. ಕೂಡಲೇ ಕ್ಷಿಪಣಿಯು ಹಾರಿಹೋಗಿ ಆ ಟಾರ್ಗೆಟ್‌ ಅನ್ನು ಧ್ವಂಸಗೊಳಿಸಿದೆ. “ಸೇನಾ … Continued

ರ‍್ಯಾಂಪೇಜ್ ಕ್ಷಿಪಣಿಗಳು, ಐಸ್ ಬ್ರೇಕರ್‌ ಗಾಗಿ ಇಸ್ರೇಲ್ ಜೊತೆ 78,217 ಕೋಟಿ ರೂ. ರಕ್ಷಣಾ ಒಪ್ಪಂದಕ್ಕೆ ಮುಂದಾದ ಭಾರತ

ನವದೆಹಲಿ: ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಗೆ ಒತ್ತು ನೀಡುತ್ತಿರುವ ಬೆನ್ನಲ್ಲೇ, ಭಾರತವು ಇಸ್ರೇಲ್‌ನೊಂದಿಗೆ ಸುಮಾರು 8.7 ಬಿಲಿಯನ್ ಡಾಲರ್ (ಅಂದಾಜು ₹78,217 ಕೋಟಿ) ಮೌಲ್ಯದ ಬೃಹತ್ ರಕ್ಷಣಾ ಒಪ್ಪಂದ ಮಾಡಿಕೊಳ್ಳಲು ಸಜ್ಜಾಗಿದೆ. ಈ ಒಪ್ಪಂದದ ಮೂಲಕ ಅತ್ಯಾಧುನಿಕ ಕ್ಷಿಪಣಿಗಳು ಮತ್ತು ನಿಖರ ದಾಳಿಯ ಬಾಂಬ್‌ಗಳನ್ನು ಪಡೆಯುವ ಮೂಲಕ ಭಾರತೀಯ ವಾಯುಪಡೆ (IAF) ತನ್ನ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಲಿದೆ … Continued

ವೀಡಿಯೊಗಳು..| ಅಮೆರಿಕ ದಾಳಿಗೆ ಪ್ರತಿ ದಾಳಿ : ಕತಾರ್, ಇರಾಕಿನಲ್ಲಿನ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌

ಮಧ್ಯಪ್ರಾಚ್ಯ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಇರಾನ್ ಸೋಮವಾರ ತನ್ನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ವಾಯುದಾಳಿಗೆ ಪ್ರತೀಕಾರವಾಗಿ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ ಸೋಮವಾರ ಕತಾರ್ ಮತ್ತು ಇರಾಕ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ. ಇರಾನ್ ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಆರು ಕ್ಷಿಪಣಿಗಳನ್ನು ಹಾರಿಸಿತು ಎಂದು ಇಸ್ರೇಲಿ … Continued

ನೇರ ಪ್ರಸಾರದ ವೇಳೆ ಇರಾನ್‌ ಸರ್ಕಾರಿ ಟಿವಿ ಕೇಂದ್ರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ; ಅರ್ಧಕ್ಕೇ ಹೊರನಡೆದ ನಿರೂಪಕಿ ; ದೃಶ್ಯ ವೀಡಿಯೊದಲ್ಲಿ ಸೆರೆ

ಇರಾನ್‌ನ ಬಹುತೇಕ ಭಾಗಗಳಲ್ಲಿ, ವಿಶೇಷವಾಗಿ ಅದರ ರಾಜಧಾನಿ ತೆಹ್ರಾನ್‌ನಲ್ಲಿ ಆಕಾಶದಿಂದ ಇಸ್ರೇಲ್‌ ಕ್ಷಿಪಣಿಗಳ ಮಳೆ ಗೈಯುತ್ತಿದೆ. ಈಗಾಗಲೇ ಇಸ್ರೇಲ್ ತಾನು ಇರಾನ್‌ ಮೇಲೆ ʼಸಂಪೂರ್ಣ ವಾಯು ಪ್ರಾಬಲ್ಯʼವನ್ನು ಹೊಂದಿರುವುದಾಗಿ ಹೇಳಿಕೊಂಡಿದೆ. ಎರಡು ಪ್ರಮುಖ ಪ್ರತಿಸ್ಪರ್ಧಿಗಳ ನಡುವಿನ ಸಂಘರ್ಷವು ಘಾತೀಯವಾಗಿ ಬೆಳೆಯುತ್ತಿದೆ. ಈಗ ಇಸ್ರೇಲಿನ ಅಂತಹ ಒಂದು ವಾಯು ದಾಳಿಯಲ್ಲಿ, ಇಸ್ರೇಲಿ ಕ್ಷಿಪಣಿಯು ನೇರ ಪ್ರಸಾರ ಕಾರ್ಯಕ್ರಮ … Continued

ವೀಡಿಯೊಗಳು…| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

ನವದೆಹಲಿ: ಶನಿವಾರ (ಮೇ 10) ಭಾರತವು ಪಾಕಿಸ್ತಾನದ ಕನಿಷ್ಠ ನಾಲ್ಕು ವಾಯುನೆಲೆಗಳ ಮೇಲೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿಗಳು ತಿಳಿಸಿವೆ. ಪಾಕಿಸ್ತಾನದ ಮೂರು ಪ್ರಮುಖ ಮಿಲಿಟರಿ ವಾಯುನೆಲೆಗಳ ಮೇಲೆ ಹಾಗೂ ಸಿಯಾಲ್‌ಕೋಟ್ ಮತ್ತು ನರೋವಾಲ್‌ನಲ್ಲಿರುವ ಪಾಕಿಸ್ತಾನಿ ಪೋಸ್ಟ್‌ಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದೆ. ಟ್ಯೂಬ್-ಲಾಂಚಡ್ ಡ್ರೋನ್‌ಗಳನ್ನು ಸಹ … Continued

ವೀಡಿಯೊಗಳು..| ಇಸ್ರೇಲಿನತ್ತ ನೂರಾರು ಬ್ಯಾಲಿಸ್ಟಿಕ್ ಕ್ಷಿಪಣಿ ಹಾರಿಸಿದ ಇರಾನ್ : ಕ್ಷಿಪಣಿ ಅಪ್ಪಳಿಸಿ ಮೊಸಾದ್ ಮುಖ್ಯ ಕಚೇರಿ ಬಳಿ ಬೃಹತ್‌ ಕುಳಿ ಸೃಷ್ಟಿ

ನವದೆಹಲಿ: ಇಸ್ರೇಲ್ ವಿರುದ್ಧ ಇರಾನ್ ದೊಡ್ಡ ಪ್ರಮಾಣದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿದೆ. ಕಳೆದ ಏಳು ತಿಂಗಳಲ್ಲಿ ಇದು ಇಸ್ರೇಲ್‌ ಮೇಲೆ ಇರಾನಿನ ಎರಡನೆಯ ದೊಡ್ಡ ಪ್ರಮಾಣದ ದಾಳಿಯಾಗಿದೆ. ಮಂಗಳವಾರ, ‘ಆಪರೇಷನ್ ಟ್ರೂ ಪ್ರಾಮಿಸ್ II’ ಎಂದು ಕರೆಯಲಾದ ದಾಳಿಯಲ್ಲಿ ಇಸ್ರೇಲಿನ ಮಿಲಿಟರಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ನೂರಾರು ಕ್ಷಿಪಣಿಗಳು ಉಡಾಯಿಸಲಾಗಿದೆ. ಕಳೆದ ವಾರ ಇರಾನ್‌ ಬೆಂಬಲಿತ ಲೆಬನಾನಿನ … Continued