ವೀಡಿಯೊ | ಮಿಲಿಟರಿ ಇತಿಹಾಸದಲ್ಲೇ ಅತಿ ದೂರದ ಟಾರ್ಗೆಟ್‌ ಧ್ವಂಸ : 300 ಕಿಮೀ ದೂರದಲ್ಲೇ ವಿಮಾನ ಹೊಡೆದುರುಳಿಸಿದ ಭಾರತದ ಎಸ್-400…!

ನವದೆಹಲಿ: ಭಾರತೀಯ ವಾಯುಪಡೆಯು (IAF) ತನ್ನ ಅತ್ಯಾಧುನಿಕ ದೀರ್ಘ ವ್ಯಾಪ್ತಿಯ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯಾದ S-400 ಸುದರ್ಶನ ಕಾರ್ಯಾಚರಣೆಯ ರೋಚಕ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ವಾಯುಪಡೆ ಬಿಡುಗಡೆ ಮಾಡಿರುವ ಈ ವಿಡಿಯೊದಲ್ಲಿ, ರಾಡಾರ್ ವ್ಯವಸ್ಥೆಯು ಅತೀ ದೂರದಲ್ಲಿರುವ ವೈರಿ ಟಾರ್ಗೆಟ್‌ ಅನ್ನು ಪತ್ತೆಹಚ್ಚುತ್ತದೆ. ಕೂಡಲೇ ಕ್ಷಿಪಣಿಯು ಹಾರಿಹೋಗಿ ಆ ಟಾರ್ಗೆಟ್‌ ಅನ್ನು ಧ್ವಂಸಗೊಳಿಸಿದೆ. “ಸೇನಾ … Continued

S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಂ ಯಶಸ್ಸಿನ ಬೆನ್ನಲ್ಲೇ ರಷ್ಯಾದ ಜೊತೆ S-500 ಜಂಟಿ ಉತ್ಪಾದನೆಗೆ ಭಾರತ ಸಜ್ಜು ; ಮಿಲಿಟರಿಗೆ ಇದು ಯಾಕೆ ಮಹತ್ವದ್ದು…?

ನವದೆಹಲಿ :ಭಾರತದ ವಾಯು ರಕ್ಷಣಾ ಸಾಮರ್ಥ್ಯವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ. ಆಪರೇಷನ್ ಸಿಂದೂರ (Operation Sindoor) ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ರಷ್ಯಾದ ನಿರ್ಮಿತ S-400 ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್‌ ನಂತರ, ಭಾರತವು ಇದೀಗ ಅದರ ಅತ್ಯಾಧುನಿಕ ಅದರ ಮುಂದಿನ ಹಂತದ S-500 ‘ಪ್ರೋಮಿಥಿಯಸ್’ ಕ್ಷಿಪಣಿ ವ್ಯವಸ್ಥೆಯ ಜಂಟಿ ಉತ್ಪಾದನೆ (Co-production) … Continued

ಇದು ಅಮೆರಿಕದ ನಿದ್ದೆಗೆಡಿಸುವ ಆಫರ್‌….! ಭಾರತಕ್ಕೆ ಮಹತ್ವದ ಸ್ಟೆಲ್ತ್ ಯುದ್ಧ ವಿಮಾನದ ತಂತ್ರಜ್ಞಾನ ನೀಡುವ ಆಫರ್‌ ನೀಡಿದ ರಷ್ಯಾ…!

ನವದೆಹಲಿ : ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಮೊದಲು, ರಷ್ಯಾವು ಮಹತ್ವದ ಮಿಲಿಟರಿ ತಂತ್ರಜ್ಞಾನದ ಆಫರ್‌ ಅನ್ನು ಭಾರತಕ್ಕೆ ನೀಡಿದೆ. ಭಾರತದ ಬಹುಕಾಲದ ಮಿತ್ರರಾಷ್ಟ್ರವಾದ ರಷ್ಯಾ, ದೇಶದ ಭವಿಷ್ಯದ ಯುದ್ಧ ವಿಮಾನಗಳ ಅಗತ್ಯಗಳನ್ನು ಪೂರೈಸಲು, ಹೊಸ ಪೀಳಿಗೆಯ ಐದನೇ ತಲೆಮಾರಿನ (Fifth-Generation) ಎಸ್‌ಯು-57 (Su-57) ಸ್ಟೆಲ್ತ್ ಫೈಟರ್ … Continued

ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ನೇಮಿಸಿದ ಜನರಲ್-ಝಡ್ ಪ್ರತಿಭಟನಾಕಾರರು

ಕಠ್ಮಂಡು: ಕಠ್ಮಂಡು: ನೇಪಾಳದಲ್ಲಿ ಮಂಗಳವಾರ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮತ್ತು ಅವರ ಸರ್ಕಾರವನ್ನು ಪದಚ್ಯುತಗೊಳಿಸಿದ ಜನರಲ್-ಝಡ್ ಪ್ರತಿಭಟನಾಕಾರರ ನೇತೃತ್ವದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳ ಮಧ್ಯೆ, ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರನ್ನು ನೇಪಾಳದ ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ ಎಂದು ವರದಿಯಾಗಿದೆ. ಸುಶೀಲಾ ಕರ್ಕಿ ಅವರು ಬಾಲೆನ್ ಶಾ ಗಿಂತ ಹೆಚ್ಚಿನ … Continued

ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಶೇಖ್ ಹಸೀನಾ ರಾಜೀನಾಮೆ ; ಆಡಳಿತ ನಿಯಂತ್ರಣಕ್ಕೆ ತೆಗೆದುಕೊಂಡ ಸೇನೆ

ಅವಾಮಿ ಲೀಗ್‌ ಪಕ್ಷದ ಬೆಂಬಲಿಗರು ಮತ್ತು ಪ್ರತಿಭಟನಾಕಾರರ ನಡುವಿನ ಹಿಂಸಾತ್ಮಕ ಘರ್ಷಣೆಗಳ ನಡುವೆ ಬಾಂಗ್ಲಾದೇಶದ ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಬಾಂಗ್ಲಾದೇಶದ ಸೇನೆಯು ಆಡಳಿತದ ಮೇಲೆ ನಿಯಂತ್ರಣ ತೆಗೆದುಕೊಂಡಿದ್ದು, ಸೇನಾ ಮುಖ್ಯಸ್ಥ ಜನರಲ್ ವಾಕರ್-ಉಜ್-ಝಮಾನ್ ಅವರು ಸೇನೆಯು ಮಧ್ಯಂತರ ಸರ್ಕಾರವನ್ನು ರಚಿಸಲಿದೆ ಎಂದು … Continued

ಮೊಹಮ್ಮದ್ ಡೀಫ್ : ಹಲವು ಬಾರಿ ಇಸ್ರೇಲ್‌ ದಾಳಿಯಿಂದ ತಪ್ಪಿಸಿಕೊಂಡ ಹಮಾಸ್‌ನ ಈ ಹೊಸ ‘ಒಸಾಮಾ ಬಿನ್ ಲಾಡೆನ್’ ಯಾರು..?

ಉಗ್ರಗಾಮಿ ಗುಂಪು ಹಮಾಸ್ ನೂರಾರು ಜನರ ಜೀವವನ್ನು ಬಲಿತೆಗೆದುಕೊಂಡ ಅಭೂತಪೂರ್ವ ದಾಳಿ ನಡೆಸಿ ನೂರಾರು ಇಸ್ರೇಲಿ ನಾಗರಿಕರನ್ನು ಕೊಂದ ನಂತರ ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಗಾಜಾ ಪಟ್ಟಿಯಲ್ಲಿ ಹಿಂಸಾಚಾರವು ಉಲ್ಬಣಗೊಂಡಿದೆ. ಹಮಾಸ್‌ನ ಮಿಲಿಟರಿ ವಿಭಾಗದ ನಾಯಕ ಮೊಹಮ್ಮದ್ ಡೀಫ್ ಇಸ್ರೇಲ್ ವಿರುದ್ಧ ‘ಆಪರೇಷನ್ ಅಲ್-ಅಕ್ಸಾ ಸ್ಟಾರ್ಮ್’ ಎಂದು ಕರೆದ ಹಮಾಸ್‌ ದಾಳಿಯು ಶನಿವಾರ ಪ್ರಾರಂಭವಾಯಿತು. ಈವರೆಗೆ … Continued

ಜಮ್ಮು-ಕಾಶ್ಮೀರದ ಶೋಪಿಯಾನದಲ್ಲಿ ನಾಲ್ವರು ಉಗ್ರರು ಹತ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆಯುತ್ತಿರುವ ಮುಖಾಮುಖಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯನ್ನು ಸೋಮವಾರ ಮುಂಜಾನೆಯಿಂದ ನಡೆಸಿದ್ದು, ಶೋಪಿಯಾನ್‌ನ ಮಣಿಹಾಲ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿದೆ. ಈ ಪ್ರದೇಶಕ್ಕೆ ಮುತ್ತಿಗೆ ಹಾಕಿದ ನಂತರ, ಅಲ್ಲಿ ಅಡಗಿರುವ ಉಗ್ರರನ್ನು ಶರಣಾಗುವಂತೆ ಕೇಳಿಕೊಂಡರು. ಆದರೆ, ಉಗ್ರರು ಈ … Continued

೨೦೨೫ಕ್ಕೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಗುರಿ ೨೫ ಶತಕೋಟಿ ಡಾಲರ್‌: ರಾಜನಾಥ್‌ ಸಿಂಗ್‌

ಬೆಂಗಳೂರು: 2025 ರ ವೇಳೆಗೆ ತನ್ನ ರಕ್ಷಣಾ ಉತ್ಪಾದನಾ ಮೂಲವನ್ನು ೧೧ ಶತಕೋಟಿ ಡಾಲರ್‌ನಿಂದ ೨೫ ಶತಕೋಟಿ ಡಾಲರ್‌ಗೆ ಏರಿಸುವ ಉದ್ದೇಶದಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಮತ್ತು ಇತರ ದೇಶಗಳಿಗೆ ರಕ್ಷಣಾ ಪಾಲುದಾರನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಬಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ಬೆಂಗಲೂರಿನಲ್ಲಿ ಶುಕ್ರವಾರ ಕೊನೆಯ ದಿನದ … Continued