೨೦೨೫ಕ್ಕೆ ಭಾರತದ ರಕ್ಷಣಾ ಉತ್ಪನ್ನಗಳ ರಫ್ತಿನ ಗುರಿ ೨೫ ಶತಕೋಟಿ ಡಾಲರ್‌: ರಾಜನಾಥ್‌ ಸಿಂಗ್‌

ಬೆಂಗಳೂರು: 2025 ರ ವೇಳೆಗೆ ತನ್ನ ರಕ್ಷಣಾ ಉತ್ಪಾದನಾ ಮೂಲವನ್ನು ೧೧ ಶತಕೋಟಿ ಡಾಲರ್‌ನಿಂದ ೨೫ ಶತಕೋಟಿ ಡಾಲರ್‌ಗೆ ಏರಿಸುವ ಉದ್ದೇಶದಿಂದ ಭಾರತವು ಹಿಂದೂ ಮಹಾಸಾಗರ ಪ್ರದೇಶದ ದೇಶಗಳಿಗೆ ಮತ್ತು ಇತರ ದೇಶಗಳಿಗೆ ರಕ್ಷಣಾ ಪಾಲುದಾರನಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ ಎಂದು ಬಾರತದ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು.
ಬೆಂಗಲೂರಿನಲ್ಲಿ ಶುಕ್ರವಾರ ಕೊನೆಯ ದಿನದ ಏರ್‌ ಶೋದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, 2015-2020ರ ಅವಧಿಯಲ್ಲಿ ಭಾರತದ ರಕ್ಷಣಾ ರಫ್ತು 2,000 ಕೋಟಿಯಿಂದ 9,000 ಕೋಟಿ ರೂ.ಗೆ ಏರಿದೆ ಎಂದು ಹೇಳಿದರು..
ನಮ್ಮ ರಕ್ಷಣಾ ರಫ್ತಿನ ಬಹುಪಾಲು ಖಾಸಗಿ ವಲಯದ ನೇತೃತ್ವದಲ್ಲಿದೆ ಎಂಬುದನ್ನು ಗಮನಿಸುವುದು ಮುಖ್ಯ. ದೇಶೀಯ ಉತ್ಪಾದನೆಯು ರಕ್ಷಣಾ ರಫ್ತು ಸಾಮರ್ಥ್ಯಕ್ಕೆ ನೇರವಾಗಿ ಸಂಬಂಧಿಸಿದೆ. “ನಾವು 2025 ರ ವೇಳೆಗೆ 11 ಶತಕೊಟಿ ಡಾಲರ್‌ನಿಂದ 25 ಶತಕೋಟಿ ಡಾಲರ್‌ಗಳಿಗೆ ನಮ್ಮ ರಕ್ಷಣಾ ಉತ್ಪನ್ನದ ರಫ್ತನ್ನು ಹೆಚ್ಚಿಸಲು ಯೋಜಿಸಿದ್ದೇವೆ. ಇದರಲ್ಲಿ, ನಾವು ೫ ಶತಕೋಟಿ ಡಾಲರ್‌ ವೆಚ್ಚದಲ್ಲಿ ರಫ್ತು ಘಟಕ ರಚನೆಗೆ ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.
ಈ ಗುರಿಯನ್ನು ತಲುಪಬೇಕಾದರೆ ಏರೋಸ್ಪೇಸ್ ವಲಯಕ್ಕೆ ಮಹತ್ವದ ಪಾತ್ರವಿದೆ ಎಂದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಿಂದೂ ಮಹಾಸಾಗರ ರಕ್ಷಣಾ ಮಂತ್ರಿಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಿಂಗ್ ಹೇಳಿದರು.
.ಇರಾನ್‌ನಿಂದ ಮಡಗಾಸ್ಕರ್‌ವರೆಗೆ ಸುಮಾರು 50 ದೇಶಗಳು ವಾಯು ಪ್ರದರ್ಶನದಲ್ಲಿ ಭಾಗವಹಿಸಿದ್ದು, ಇದು ಕೋವಿಡ್ ಸಾಂಕ್ರಾಮಿಕ ರೋಗದ ನಂತರ ವಿಶ್ವದಲ್ಲೇ ಮೊದಲ ಬಾರಿಗೆ ನಡೆಯಿತು. ಅನೇಕ ದೇಶಗಳು ತಮ್ಮ ರಕ್ಷಣಾ ಮಂತ್ರಿಗಳು, ಸೇವಾ ಮುಖ್ಯಸ್ಥರು ಅಥವಾ ಪ್ರತಿನಿಧಿಗಳನ್ನು ಕಳುಹಿಸಿದ್ದವು.
ಪ್ರದರ್ಶನ: ಏರೋ ಪ್ರದರ್ಶನದ ಕೇಂದ್ರಬಿಂದುವಾಗಿ ಸ್ಥಳೀಯ ಉತ್ಪನ್ನಗಳ ಒಂದು ಶ್ರೇಣಿಯಿದೆ. ಇದು ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ಒಳಗೊಂಡಿದೆ. ಹಲವಾರು ಭಾರತೀಯ ಖಾಸಗಿ ಸಂಸ್ಥೆಗಳು ಮತ್ತು ಸ್ಟಾರ್ಟ್ ಅಪ್‌ಗಳು ಡ್ರೋನ್‌ಗಳು ಮತ್ತು ಬುಲೆಟ್ ಪ್ರೂಫ್ ಜಾಕೆಟ್‌ಗಳ ವರೆಗಿನ ಉತ್ಪನ್ನಗಳನ್ನು ಪ್ರದರ್ಶಿಸಿದವು.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement