ರಾಮನಗರ : ಸಾಧಾರಣ ಮಳೆಗೆ ಜಲಾವೃತಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ | ವೀಕ್ಷಿಸಿ

posted in: ರಾಜ್ಯ | 0

ಬೆಂಗಳೂರು: ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕರ್ನಾಟಕದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ರಾಮನಗರದಲ್ಲಿ ಭಾರಿ ಮಳೆಯ ನಂತರ ಕೆರೆಯಾಗಿ ಮಾರ್ಪಟ್ಟಿದೆ. ಇದು ಕೆಲವು ಬಂಪರ್-ಟು ಬಂಪರ್ ಅಪಘಾತಗಳಿಗೆ ಕಾರಣವಾಯಿತು ಮತ್ತು ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ವಾಹನಗಳು ತೆವಳುತ್ತ ಹೋಗಲು ಕಾರಣವಾಯಿತು. ಅಧಿಕಾರಿಗಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ತೋರಿಸುತ್ತಾ, ಕೋಪಗೊಂಡ ವಾಹನ ಸವಾರರು. 8,400 … Continued

ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು

posted in: ರಾಜ್ಯ | 0

ರಾಮನಗರ : ಸಾಲಗಾರರ ಕಾಟಕ್ಕೆ ಹೆದರಿ ಒಂದೇ ಕುಟುಂಬದ ಏಳು ಮಂದಿ ಇಲಿಪಾಷಾಣ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿಯಲ್ಲಿ ನಡೆದಿದೆ. ಇವರಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಆರು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಮೃತಪಟ್ಟ ಮಹಿಳೆಯನ್ನು ಮಂಗಳಮ್ಮ (28) ಎಂದು ಗುರುತಿಸಲಾಗಿದೆ. ಉಳಿದ ಆರು ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಿ ತೀವ್ರ ನಿಗಾ … Continued

ಬೊಲೆರೊ ಡಿಕ್ಕಿ: ಮೂವರು ಮಹಿಳೆಯರು ಸಾವು

posted in: ರಾಜ್ಯ | 0

ಕಾರವಾರ : ಭೀಕರ ಅಪಘಾತವೊಂದರಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ರಾಮನಗರದ ಸೀತಾವಾಡದಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಬೆಳಗಾವಿ ಜಿಲ್ಲೆಯ ಖಾನಾಪುರದ ಫಾರ್ಲಿಯ ಪಾರ್ವತಿ ಗಾವಡಾ (55), ದುರ್ಗೆ ಕೋಲ್ಸೇಕರ್ (55), ತುಳಸಿ ಗಾವಡಾ (50) ಎಂದು ಗುರುತಿಸಲಾಗಿದೆ. ಬಿಪಿನ್‌ ತಾಳ್ವೆ ಎಂಬ … Continued

ಊಟದ ವಿಚಾರಕ್ಕೆ ಜಗಳ: ತಾಯಿ, ಮಗ ಆತ್ಮಹತ್ಯೆ

posted in: ರಾಜ್ಯ | 0

ರಾಮನಗರ: ಕೌಟುಂಬಿಕ ಕಲಹದಿಂದ ನೊಂದು ತಾಯಿ, ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರದ ಕುಮಾರಸ್ವಾಮಿ ಲೇಔಟ್‍ನಲ್ಲಿ ನಡೆದ ವರದಿಯಾಗಿದೆ. ಮೃತರನ್ನು ವಿಜಯಲಕ್ಷ್ಮೀ (50) ಹಾಗೂ ಹರ್ಷ (25) ಎಂದು ಗುರುತಿಸಲಾಗಿದೆ. ತಾಯಿ ವಿಜಯಲಕ್ಷ್ಮೀ ಜೊತೆ ಊಟದ ವಿಚಾರಕ್ಕೆ ಮಗ ಹರ್ಷ ರಾತ್ರಿ ಜಗಳವಾಡಿದ್ದ ಎನ್ನಲಾಗಿದೆ. ಮಗನ ಮಾತಿನಿಂದ ಮನನೊಂದ ವಿಜಯಲಕ್ಷ್ಮಿ ಮನೆಯ ಬಳಿ ಸಂಪಿಗೆ ಬಿದ್ದು … Continued

ಮಗನಿಗಾಗಿ ರಾಮನಗರ ಕ್ಷೇತ್ರ ತ್ಯಾಗ ಮಾಡಿದ ಅನಿತಾ ಕುಮಾರಸ್ವಾಮಿ

posted in: ರಾಜ್ಯ | 0

ರಾಮನಗರ: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ, ರಾಮನಗರ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪುತ್ರ ನಿಖಿಲ್‌ಗಾಗಿ ತಮ್ಮ ಕ್ಷೇತ್ರವನ್ನು ತ್ಯಾಗ ಮಾಡಿದ್ದಾರೆ. 2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದಿಂದ ಪುತ್ರ ನಿಖಿಲ್‌ ಸ್ಪರ್ಧಿಸಲಿದ್ದಾರೆ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಶನಿವಾರ ಘೋಷಿಸಿದ್ದು, ಈ ಮೂಲಕ ಊಹಾಪೋಹಹಳಿಗೆ ತೆರೆ … Continued

ಮಳೆಗೆ ಕೊಟ್ಟಿಗೆ ಗೋಡೆ ಕುಸಿತ: ಶೆಡ್‌ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವು

posted in: ರಾಜ್ಯ | 0

ರಾಮನಗರ: ನಿರಂತರ ಮಳೆಗೆ ಕೊಟ್ಟಿಗೆ ಗೋಡೆ ಕುಸಿದಿದ್ದು, ಪಕ್ಕದಲ್ಲೇ ಮಲಗಿಕೊಂಡಿದ್ದ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಸೋಲೂರು ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ಮಕ್ಕಳನ್ನು ಪರ್ಭಿನ್(4), ಇಷಿಕಾ(3) ಎಂದು ಗುರುತಿಸಲಾಗಿದೆ. ಗೋಡೆ ಕುಸಿದ ಪರಿಣಾಮ ಶೆಡ್‍ನಲ್ಲಿ ಮಲಗಿದ್ದ ಇಬ್ಬರು ಮಕ್ಕಳು ಸಾವಿಗೀಡಾಗಿದ್ದು, ಮತ್ತಿಬ್ಬರಿಗೆ ಗಾಯವಾಗಿದೆ. ನೇಪಾಳ ಮೂಲದ … Continued

ಬಸ್‌-ಇನ್ನೋವಾ ಕಾರ್‌ ಡಿಕ್ಕಿ: ಆರು ತಿಂಗಳ ಮಗು ಸಹಿತ ಮೂವರು ಸ್ಥಳದಲ್ಲೇ ಸಾವು

posted in: ರಾಜ್ಯ | 0

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಕೆಮ್ಮಾಳೆದೊಡ್ಡಿ ಬಳಿ ಶನಿವಾರ ಮುಂಜಾನೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಇನೋವಾ ಕಾರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಉಡುಪಿ ಜಿಲ್ಲೆಯ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತರನ್ನು ಅಕ್ಷತಾ, ಅವರ ಆರು ತಿಂಗಳ‌ ಮಗು ಸುಮಂತ ಹಾಗೂ ಕಾರು ಚಾಲಕ ಉಮೇಶ ಎಂದು ಗುರುತಿಸಲಾಗಿದೆ. ಕಾರಿನಲ್ಲಿ ಇದ್ದ ಇನ್ನೂ ಇಬ್ಬರು ಪ್ರಯಾಣಿಕರಿಗೆ ಗಾಯಗಳಾಗಿದ್ದು, … Continued