ವೀಡಿಯೊ..| ‘ನಿಲ್ಲಿ, ನಿಮ್ಮ ಗುರುತಿನ ಚೀಟಿ ಎಲ್ಲಿ..? ‘: ಮ್ಯೂನಿಚ್ ಸಮ್ಮೇಳನದಲ್ಲಿ ಪಾಕ್ ಸೇನಾ ಮುಖ್ಯಸ್ಥಗೆ ಐಡಿ ಕಾರ್ಡ್ ಕೇಳಿದ ಭದ್ರತಾ ಸಿಬ್ಬಂದಿ..!

ಮ್ಯೂನಿಚ್: ಪಾಕಿಸ್ತಾನದಲ್ಲಿ ಅಪಾರ ಅಧಿಕಾರ ಹೊಂದಿರುವ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೀವ್ರ ಮುಖಭಂಗವಾಗಿದೆ. ಜರ್ಮನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ‘ಮ್ಯೂನಿಚ್ ಭದ್ರತಾ ಸಮ್ಮೇಳನ’ಕ್ಕೆ (MSC) ಆಹ್ವಾನಿತರಾಗಿ ತೆರಳಿದ್ದ ಅವರಿಗೆ ಭದ್ರತಾ ತಪಾಸಣೆಯ ವೇಳೆ ಶಿಷ್ಟಾಚಾರದ (Protocol) ಗೌರವ ಸಿಗದೇ ಇರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಮ್ಮೇಳನದ … Continued

ವೀಡಿಯೊಗಳು | ಭದ್ರಾ ಅಭಯಾರಣ್ಯದ ಅಪರೂಪದ ದೃಶ್ಯ: ಅಕ್ಕಪಕ್ಕವೇ ಕುಳಿತು ನೀರು ಕುಡಿದ ಕಪ್ಪು ಚಿರತೆ-ಸಾಮಾನ್ಯ ಚಿರತೆ !

ಕರ್ನಾಟಕದ ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (Bhadra Tiger Reserve) ವನ್ಯಜೀವಿ ಪ್ರೇಮಿಗಳ ಕಣ್ಮನ ಸೆಳೆಯುವ ಅತ್ಯಂತ ಅಪರೂಪದ ದೃಶ್ಯವೊಂದು ಕಂಡುಬಂದಿದೆ. ಏಕಾಂತವಾಗಿ ಇರಲು ಬಯಸುವ ಕಾಡಿನ ಕ್ರೂರ ಮೃಗಗಳಾದ ಕಪ್ಪು ಚಿರತೆ (Black Panther) ಮತ್ತು ಸಾಮಾನ್ಯ ಮಚ್ಚೆಯುಳ್ಳ ಚಿರತೆಯು ಯಾವುದೇ ಸಂಘರ್ಷವಿಲ್ಲದೆ, ಅಕ್ಕಪಕ್ಕದಲ್ಲೇ ಕುಳಿತು ನೀರು ಕುಡಿಯುತ್ತಿರುವ ಅದ್ಭುತ ಕ್ಷಣ ಕ್ಯಾಮರಾದಲ್ಲಿ ಸೆರೆಯಾಗಿದೆ. … Continued

ವೀಡಿಯೊ..| ಬೆಂಗಳೂರು : ರಸ್ತೆ ಜಗಳ ; ಕಾರಿನ ಬಾನೆಟ್ ಮೇಲೆ ವ್ಯಕ್ತಿಯನ್ನು ಎಳೆದೊಯ್ದ ಎಸ್‌ಯುವಿ ಚಾಲಕ…!

ಬೆಂಗಳೂರು: ರಾಜಧಾನಿಯ ಅತ್ಯಂತ ಜನನಿಬಿಡ ಪ್ರದೇಶಗಳಲ್ಲಿ ಒಂದಾದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ (Old Airport Road) ಬೆಚ್ಚಿಬೀಳಿಸುವಂತಹ ‘ರೋಡ್ ರೇಜ್’ (Road Rage) ಘಟನೆಯೊಂದು ನಡೆದಿದೆ. ಕಾರಿನ ಬಾನೆಟ್ ಮೇಲೆ ವ್ಯಕ್ತಿಯೊಬ್ಬರು ಇದ್ದಾಗಲೇ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿಕೊಂಡು ಹೋಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಹಳೆ ವಿಮಾನ ನಿಲ್ದಾಣ … Continued

ಒಟ್ಟಿಗೆ ಮೂರು ಹಿಮ ಚಿರತೆಗಳ ಅಪರೂಪದ ದರ್ಶನ ; ಬೆರಗುಗೊಳಿಸುವ ದೃಶ್ಯದ ವೀಡಿಯೊ ವೈರಲ್‌

ನವದೆಹಲಿ: ಹಿಮಾಲಯದ  ಸೌಂದರ್ಯದ ನಡುವೆ, ಅತ್ಯಂತ ಅಪರೂಪದ ‘ಹಿಮ ಚಿರತೆ’ಗಳ (Snow Leopards) ಕುಟುಂಬವೊಂದು ಒಟ್ಟಾಗಿ ಸಾಗುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಸಾಮಾನ್ಯವಾಗಿ ಏಕಾಂಗಿಯಾಗಿ ಜೀವಿಸುವ, ಮನುಷ್ಯರ ಕಣ್ಣಿಗೆ ಅಷ್ಟು ಸುಲಭವಾಗಿ ಬೀಳದ ಈ ಪ್ರಾಣಿಗಳನ್ನು ಒಂದೇ ಚೌಕಟ್ಟಿನಲ್ಲಿ ನೋಡುವುದೇ ಅಪರೂಪ. ʼಪರ್ವತಗಳ ಭೂತʼ ಎಂದೂ ಕರೆಯಲ್ಪಡುವ ಹಿಮ ಚಿರತೆಗಳು ಹಿಮಭರಿತ ಮತ್ತು … Continued

ವೀಡಿಯೊ | ವಾಹನದಲ್ಲಿ ಪೈಪುಗಳಿಲ್ಲದ್ದಕ್ಕೆ ಬೆಂಕಿ ನಂದಿಸಲು ಬಕೆಟ್‌ ಬಳಸಿದ ಪಾಕ್ ಅಗ್ನಿಶಾಮಕ ಸಿಬ್ಬಂದಿ ; ಇದು ಪಾಕಿಸ್ತಾನದ ಸ್ಥಿತಿ..!

ಪಾಕಿಸ್ತಾನದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಗ್ನಿಶಾಮಕ ವಾಹನ ಸ್ಥಳದಲ್ಲಿದ್ದರೂ ಸಹ, ಬೆಂಕಿ ನಂದಿಸಲು ಪೈಪ್‌ ಗಳನ್ನು ಬಳಸದೆ, ಸಿಬ್ಬಂದಿ ಬಕೆಟ್ ಮೂಲಕ ನೀರು ಸುರಿಯುತ್ತಿರುವುದು ಜನರಲ್ಲಿ ಆಕ್ರೋಶ ಮತ್ತು ಮುಜುಗರವನ್ನುಂಟು ಮಾಡಿದೆ. ಪಾಕಿಸ್ತಾನದ ವಸತಿ ಪ್ರದೇಶವೊಂದರಲ್ಲಿ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಈ ಘಟನೆ … Continued

ವೀಡಿಯೊ | ಕಾಡಿನ ಬಾಯಾರಿಕೆ : ನೀರಿನ ಹೊಂಡದ ಬಳಿ ಸಿಂಹ-ಆನೆ ಮುಖಾಮುಖಿ ; ಮುಂದೇನಾಯ್ತು ನೋಡಿ…

ವನ್ಯಲೋಕ ಎನ್ನುವುದು ಬಣ್ಣಿಸಲಾಗದ ವಿಸ್ಮಯಗಳ ಗೂಡು. ಅಲ್ಲಿ ಹಸಿವು ಎಷ್ಟು ಸತ್ಯವೋ, ಬಾಯಾರಿಕೆಯೂ ಅಷ್ಟೇ ದೊಡ್ಡ ಸತ್ಯ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ನಿಸರ್ಗದ ವಿಚಿತ್ರ ಸ್ನೇಹ ಮತ್ತು ಶೌರ್ಯದ ಮುಖಾಮುಖಿಯನ್ನು ನಮಗೆ ಪರಿಚಯಿಸುತ್ತಿದೆ. ಆಫ್ರಿಕಾದ ಸುಡುಬಿಸಿಲಿನ ನಡುವೆ ಒಂದು ನೀರಿನ ಹೊಂಡ. ಅಲ್ಲಿಗೆ ಸುಸ್ತಾಗಿ ಬಂದ ಸಿಂಹಿಣಿಯೊಂದು ಹೊಂಡದ ಮರೆಯಲ್ಲಿ ಅಡಗಿ … Continued

ವೀಡಿಯೊ | ಹಿಮಪಾತದಲ್ಲಿ ಮಾಲೀಕ ಸಾವು ; ಮಾರಣಾಂತಿಕ ಹಿಮದ ಮಧ್ಯೆ 4 ದಿನ ಕಾವಲು ಕಾಯ್ದ ಪಿಟ್‌ಬುಲ್ ನಾಯಿ..!

ಚಂಬಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್‌ನಲ್ಲಿ ನಡೆದ ಘಟನೆಯೊಂದು ಪ್ರಾಣಿಗಳ ನಿಷ್ಠೆ ಸಾವನ್ನೂ ಮೀರಿ ನಿಲ್ಲಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿದೆ. ತನ್ನ ಯಜಮಾನ ಹಿಮದ ಅಡಿಯಲ್ಲಿ ಹೆಪ್ಪುಗಟ್ಟಿ ಹೋಗಿದ್ದರೂ, ನಾಲ್ಕು ದಿನಗಳ ಕಾಲ ಮೈಕೊರೆಯುವ ಚಳಿಯಲ್ಲಿ ಆ ದೇಹಕ್ಕೆ ಕಾವಲು ನಿಂತಿದ್ದ ಶ್ವಾನವೊಂದರ ಕಥೆ ಈಗ ಇಡೀ ದೇಶದ ಜನರ ಮನ ಕಲಕುತ್ತಿದೆ. ಯುವಕರಾದ … Continued

ವೀಡಿಯೊ..| ಡೆಲಿವರಿ ಬಾಯ್ ಆಕಸ್ಮಿಕವಾಗಿ ಬೇರೆ ಮನೆ ಬೆಲ್ ಒತ್ತಿದ್ದಕ್ಕೆ ಗಲಾಟೆ ; ಮಾರಾಮಾರಿ

ಕ್ಷುಲ್ಲಕ ಕಾರಣಕ್ಕೆ ಆರಂಭವಾದ ವಾಗ್ವಾದವೊಂದು ವಿಕೋಪಕ್ಕೆ ತಿರುಗಿ, ಡೆಲಿವರಿ ಬಾಯ್ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳ ನಡುವೆ ರಣಾಂಗಣ ಸೃಷ್ಟಿಯಾದ ಘಟನೆ ಗ್ರೇಟರ್ ನೋಯ್ಡಾದ ಬೀಟಾ-2 ಪ್ರದೇಶದದಲ್ಲಿ ನಡೆದಿದೆ ಎಂದು ಪರಸ್ಪರ ಪಂಚ್, ಕಿಕ್ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಫುಡ್ ಡೆಲಿವರಿ … Continued

77ನೇ ಗಣರಾಜ್ಯೋತ್ಸವದ ಸಂಭ್ರಮದ ನಡುವೆ ಮನಗೆದ್ದ ಶ್ವಾನದ ದೇಶಪ್ರೇಮ : ವೀಡಿಯೊ ವೈರಲ್

ನವದೆಹಲಿ: ಭಾರತವು ಸೋಮವಾರ ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸಿದೆ. ಈ ಸಂಭ್ರಮದ ನಡುವೆಯೇ, ಶ್ವಾನವೊಂದರ ಅಪೂರ್ವ ದೇಶಭಕ್ತಿಯ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೋಟ್ಯಂತರ ಭಾರತೀಯರ ಮನಗೆದ್ದಿದೆ. ಸುಮಾರು 25 ಸೆಕೆಂಡುಗಳ ಈ ವೀಡಿಯೊದಲ್ಲಿ, ನಿಷ್ಠಾವಂತ ಲ್ಯಾಬ್ರಡಾರ್ ಶ್ವಾನವೊಂದು ಸಾಲಾಗಿ ಇಟ್ಟಿರುವ ವಿವಿಧ ದೇಶಗಳ ನಕ್ಷೆಗಳ ಮಧ್ಯೆ ನಡೆದುಕೊಂಡು ಹೋಗುತ್ತದೆ. … Continued

ಕ್ಯಾನ್ಸರಿನಿಂದ ಉದುರಿದ ವಿದ್ಯಾರ್ಥಿನಿ ಕೂದಲು ; ಸ್ನೇಹಿತೆಗಾಗಿ ತಲೆ ಬೋಳಿಸಿಕೊಂಡ ಶಾಲಾ ವಿದ್ಯಾರ್ಥಿಗಳು-ಶಿಕ್ಷಕರು ; ಹೃದಯಸ್ಪರ್ಶಿ ವೀಡಿಯೊ ವೈರಲ್

ರಾಜಸ್ಥಾನದ ವೀಡಿಯೊವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸುವಂತಿದೆ. ಕ್ಯಾನ್ಸರ್‌ನಿಂದಾಗಿ ಕೂದಲು ಕಳೆದುಕೊಂಡು ಮನನೊಂದಿದ್ದ ವಿದ್ಯಾರ್ಥಿನಿಯ ಬೆಂಬಲಕ್ಕೆ ಇಡೀ ಶಾಲೆಯೇ ನಿಂತಿರುವ ಅಪರೂಪದ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಈ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಕ್ಯಾನ್ಸರ್ ಚಿಕಿತ್ಸೆಯಿಂದಾಗಿ ತನ್ನ ತಲೆಯ ಕೂದಲನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಇದರಿಂದ ತೀವ್ರವಾಗಿ ನೊಂದಿದ್ದ ಆಕೆ, ಖಿನ್ನತೆಗೆ … Continued