ವೀಡಿಯೊ | ವಾಹನದಲ್ಲಿ ಪೈಪುಗಳಿಲ್ಲದ್ದಕ್ಕೆ ಬೆಂಕಿ ನಂದಿಸಲು ಬಕೆಟ್‌ ಬಳಸಿದ ಪಾಕ್ ಅಗ್ನಿಶಾಮಕ ಸಿಬ್ಬಂದಿ ; ಇದು ಪಾಕಿಸ್ತಾನದ ಸ್ಥಿತಿ..!

ಪಾಕಿಸ್ತಾನದ ಅಗ್ನಿಶಾಮಕ ಸಿಬ್ಬಂದಿಯೊಬ್ಬರು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅಗ್ನಿಶಾಮಕ ವಾಹನ ಸ್ಥಳದಲ್ಲಿದ್ದರೂ ಸಹ, ಬೆಂಕಿ ನಂದಿಸಲು ಪೈಪ್‌ ಗಳನ್ನು ಬಳಸದೆ, ಸಿಬ್ಬಂದಿ ಬಕೆಟ್ ಮೂಲಕ ನೀರು ಸುರಿಯುತ್ತಿರುವುದು ಜನರಲ್ಲಿ ಆಕ್ರೋಶ ಮತ್ತು ಮುಜುಗರವನ್ನುಂಟು ಮಾಡಿದೆ.
ಪಾಕಿಸ್ತಾನದ ವಸತಿ ಪ್ರದೇಶವೊಂದರಲ್ಲಿ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಈ ಘಟನೆ ಸಂಭವಿಸಿದೆ. ನೆರೆಹೊರೆಯ ಮನೆಗಳಿಗೂ ಬೆಂಕಿ ಹರಡುವ ಭೀತಿ ಎದುರಾದಾಗ ನಿವಾಸಿಗಳು ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ವಾಹನ (Fire Tender) ಸ್ಥಳಕ್ಕೆ ಬಂದಿತಾದರೂ, ಅದರಲ್ಲಿದ್ದ ಪಂಪ್ ಮತ್ತು ಪೈಪ್‌ಗಳು (Fire Hoses) ಕಾರ್ಯನಿರ್ವಹಿಸುತ್ತಿರಲಿಲ್ಲ ಅಥವಾ ವಾಹನದಲ್ಲಿ ಪೈಪ್‌ಗಳೇ ಇರಲಿಲ್ಲ. ಈ ತುರ್ತು ಪರಿಸ್ಥಿತಿಯಲ್ಲಿ ವಿಧಿ ಇಲ್ಲದೆ ಸಿಬ್ಬಂದಿ ಬಕೆಟ್‌ಗಳಲ್ಲಿ ನೀರು ತುಂಬಿಸಿ ಬೆಂಕಿಯ ಮೇಲೆ ಸುರಿಯಲಾರಂಭಿಸಿದರು.

ವೀಡಿಯೊದಲ್ಲಿ ಏನಿದೆ?
ಸ್ಥಳೀಯರು ಈ ಹಾಸ್ಯಾಸ್ಪದ ಮತ್ತು ಆಘಾತಕಾರಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ವೀಡಿಯೊ ಮಾಡುತ್ತಿರುವ ವ್ಯಕ್ತಿಯೊಬ್ಬರು ಉರ್ದುವಿನಲ್ಲಿ ಮಾತನಾಡುತ್ತಾ, “ನೋಡಿ, ಇವರ ಸಿದ್ಧತೆ ಹೇಗಿದೆ ಎಂದು! ಇವರು ಬಕೆಟ್‌ಗಳಲ್ಲಿ ನೀರು ಹಾಕುತ್ತಿದ್ದಾರೆ. ಇದು ನಮ್ಮ ಪಾಕಿಸ್ತಾನ, ಮುಖ್ಯಮಂತ್ರಿಗಳು ಇದನ್ನು ಗಮನಿಸಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೆ, “ಅಣ್ಣಾ, ನಿಮ್ಮ ಸಿದ್ಧತೆ ಅದ್ಭುತವಾಗಿದೆ, ಇದನ್ನು ನೋಡಿ ನಮಗೆ ತುಂಬಾ ಖುಷಿಯಾಯಿತು” ಎಂದು ವ್ಯಂಗ್ಯವಾಡಿದ್ದಾರೆ.

https://twitter.com/SaffronChargers/status/2014939482412482722?ref_src=twsrc%5Etfw%7Ctwcamp%5Etweetembed%7Ctwterm%5E2014939482412482722%7Ctwgr%5E2a48011dd16ead4c9e245ed29743101503e1397d%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-pakistani-fire-tender-without-pipes-firefighters-use-buckets-to-tackle-blaze-netizens-say-sad-reality-8288035%2F

ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶದ ಮಹಾಪೂರ
ಆದಾಗ್ಯೂ, ಬೆಂಕಿ ಅವಘಡದ ನಿಖರವಾದ ಸಮಯ ಹಾಗೂಈ ಘಟನೆ ಪಾಕಿಸ್ತಾನದ ಯಾವ ನಗರದಲ್ಲಿ ನಡೆದಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ವೀಡಿಯೊ ಮಾತ್ರ ಭಾರೀ ವೈರಲ್‌ ಆಗಿದೆ. ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಇದು ಹೃದಯ ವಿದ್ರಾವಕ. ಅಗ್ನಿಶಾಮಕ ಸಿಬ್ಬಂದಿ ಪ್ರಾಣದ ಹಂಗು ತೊರೆದು ಕೆಲಸ ಮಾಡುತ್ತಾರೆ, ಆದರೆ ಅವರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲ. ಇಲ್ಲಿ ವ್ಯವಸ್ಥೆಯ ಅಸಲಿ ಮುಖವಾಡ ಕಳಚಿ ಬಿದ್ದಿದೆ ಎಂದು ಒಬ್ಬರು ಹೇಳಿದ್ದಾರೆ.
“ಇಷ್ಟು ವರ್ಷಗಳಿಂದ ಐಎಂಎಫ್ (IMF) ನಿಂದ ಸಾಲ ಪಡೆಯುತ್ತಿದ್ದರೂ, ಒಂದು ಅಗ್ನಿಶಾಮಕ ವಾಹನವನ್ನು ಸರಿಯಾಗಿ ಇಟ್ಟುಕೊಳ್ಳಲು ಇವರಿಂದ ಸಾಧ್ಯವಾಗಿಲ್ಲ ಎಂದು ಇನ್ನೊಬ್ಬರು ಹೇಳಿದ್ದಾರೆ.
“ಇದು ಅಗ್ನಿಶಾಮಕ ದಳವೋ ಅಥವಾ ಬಕೆಟ್ ಚಾಲೆಂಜ್ ವೀಡಿಯೊವೋ? 2026ರ ಕಾಲದಲ್ಲೂ ಬಕೆಟ್‌ನಲ್ಲಿ ನೀರು ಹಾಕಿ ಬೆಂಕಿ ನಂದಿಸುತ್ತಿರುವುದು ದುರಂತ ಎಂದು ಮತ್ತೊಬ್ಬರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಲೂಚಿಸ್ತಾನದಲ್ಲಿ ‘ಸ್ವಾತಂತ್ರ್ಯದ ಘೋಷಣೆ’: ಪಾಕ್‌ ಆಕ್ರಮಿತ ಕಾಶ್ಮೀರಕ್ಕಿಂತಲೂ ಇದು ಪಾಕಿಸ್ತಾನಕ್ಕೆ ಹೆಚ್ಚು ಆತಂಕದ ವಿಷಯ ಯಾಕೆ ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement